ಮೊದಲ ಪತ್ನಿ ಹತ್ಯೆ ಯತ್ನ: ಆರೋಪಿಗೆ 5 ವರ್ಷ ಜೈಲು ಶಿಕ್ಷೆ
ಮೈಸೂರು

ಮೊದಲ ಪತ್ನಿ ಹತ್ಯೆ ಯತ್ನ: ಆರೋಪಿಗೆ 5 ವರ್ಷ ಜೈಲು ಶಿಕ್ಷೆ

May 29, 2018

ಮೈಸೂರು: ಮೊದಲ ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ, ಹತ್ಯೆಗೆ ಯತ್ನಿಸಿದ್ದಲ್ಲದೆ, ತಡೆಯಲು ಬಂದ ಸಂಬಂಧಿಕರೊಬ್ಬರ ಮೇಲೂ ಹಲ್ಲೆ ನಡೆಸಿದ್ದ ಆರೋಪಿಗೆ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುರೇಶ್ ಒಂಟಿಗೋಡಿ ಅವರು, 5 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ.

ಕೆ.ಆರ್.ನಗರ ತಾಲೂಕಿನ ಕಾಳೇನಹಳ್ಳಿ ಗ್ರಾಮದ ಮಹದೇವನಿಗೆ ಶಿಕ್ಷೆ ವಿಧಿಸ ಲಾಗಿದೆ. ಮುಳ್ಳೂರು ಗ್ರಾಮದ ಸಬಂಧಿ ಕರೊಬ್ಬರ ಮನೆಯ ಸಮಾರಂಭಕ್ಕೆ ತೆರಳಿದ್ದಾಗ, ತನ್ನ ಮೊದಲ ಪತ್ನಿ ಪುಟ್ಟ ಗೌರಿ ಹಾಗೂ ಸಂಬಂಧಿ ಸ್ವಾಮಿಗೌಡರ ಮೇಲೆ ಈತ, ಹಲ್ಲೆ ನಡೆಸಿದ್ದ.

ಆರೋಪಿ ಮಹದೇವ ತನ್ನ ಮೊದಲ ಪತ್ನಿ ಪುಟ್ಟಗೌರಿಗೆ ವಿಚ್ಛೇದನ ನೀಡದೆ, 2ನೇ ಮಧುವೆಯಾಗಿದ್ದ. ಇದರಿಂದ ಮನ ನೊಂದ ಪುಟ್ಟಗೌರಿ, ಪತಿಯಿಂದ ಜೀವ ನಾಂಶ ಕೊಡಿಸುವಂತೆ ಕೋರಿ ನ್ಯಾಯಾ ಲಯದ ಮೊರೆ ಹೋಗಿದ್ದರು. ಪುಟ್ಟ ಗೌರಿಗೆ ಜೀವನಾಂಶ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದ್ದ ಹಿನ್ನೆಲೆಯಲ್ಲಿ ಸಂಬಂಧಿಕರು ಮಹದೇವನಿಂದ 25 ಸಾವಿರ ರೂ. ಹಣವನ್ನು ಪುಟ್ಟಗೌರಿಗೆ ಕೊಡಿಸಿದ್ದರು. ಇದರಿಂದ ಪುಟ್ಟಗೌರಿ ಮೇಲೆ ಮಹದೇವ ಮತ್ಸರ ಬೆಳೆಸಿ ಕೊಂಡಿದ್ದ ಎನ್ನಲಾಗಿದೆ. ಈ ನಡುವೆ ಮುಳ್ಳೂರು ಗ್ರಾಮದ ಸಂಬಂಧಿಕರೊಬ್ಬರ ಮನೆಯಲ್ಲಿ 2013ರ ಮಾರ್ಚ್ 13ರಂದು ನಡೆದ ಸಮಾರಂಭಕ್ಕೆ ಮಹದೇವ ತೆರಳಿ ದ್ದರು. ಹಾಗೆಯೇ ಅವರ ಮೊದಲ ಪತ್ನಿ ಪುಟ್ಟಗೌರಿ ಹಾಗೂ ಸ್ವಾಮಿಗೌಡ ಸೇರಿ ದಂತೆ ಅನೇಕ ಸಂಬಂಧಿಕರೂ ಬಂದಿ ದ್ದರು. ಈ ಸಂದರ್ಭದಲ್ಲಿ ಮೊದಲ ಪತ್ನಿ ಪುಟ್ಟಗೌರಿಯನ್ನು ಕಂಡು ಕೋಪಗೊಂಡ ಮಹದೇವ, ಏಕಾಏಕಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಮಚ್ಚಿನಿಂದ ಹೊಡೆದು ಕೊಲೆಗೆ ಯತ್ನಿಸಿದ್ದ. ಇದನ್ನು ಗಮನಿಸಿದ ಸಂಬಂಧಿ ಸ್ವಾಮಿಗೌಡರು, ಪುಟ್ಟಗೌರಿಯ ರಕ್ಷಣೆಗೆ ತೆರಳಿದ್ದಾರೆ. ಆಗ ಮಹದೇವ, ಸ್ವಾಮಿಗೌಡರ ಮುಖಕ್ಕೆ ತಲೆಯಿಂದ ಡಿಚ್ಚಿ ಹೊಡೆದು, ಬಾಯಿಗೆ ಬಲವಾಗಿ ಹೊಡೆದಿದ್ದಾನೆ.

ಬಳಿಕ ಪುಟ್ಟಗೌರಿಯನ್ನು ಕೆ.ಆರ್.ನಗರ ಆಸ್ಪತ್ರೆಗೆ ದಾಖಲಿಸಿದ್ದನ್ನು ತಿಳಿದ ಮಹ ದೇವ, ಆಸ್ಪತ್ರೆಗೆ ಬಂದು ಅಲ್ಲಿನ ತುರ್ತು ಚಿಕಿತ್ಸಾ ವಿಭಾಗದಲ್ಲಿ ದಾಖಲಾಗಿದ್ದ ಪುಟ್ಟ ಗೌರಿಗೆ ಬಿಯರ್ ಬಾಟಲ್‍ನಿಂದ ಹೊಡೆದು, ಅನೇಕ ಕಡೆಗೆ ಚುಚ್ಚಿ, ಕೊಲೆ ಮಾಡಲು ಯತ್ನಿಸಿದ್ದಾನೆ. ಘಟನೆ ಸಂಬಂಧ ಪುಟ್ಟ ಗೌರಿಯ ರಕ್ಷಣೆಗೆ ತೆರಳಿ, ಹಲ್ಲೆಗೊಳಗಾದ ಸ್ವಾಮಿಗೌಡರು, ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖ ಲಿಸಿಕೊಂಡಿದ್ದ ಕೆ.ಆರ್.ನಗರ ಪೊಲೀ ಸರು, ತನಿಖೆ ನಡೆಸಿ, ಆರೋಪಿ ಮಹ ದೇವನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾ ಲಯದ ನ್ಯಾಯಾಧೀಶರಾದ ಸುರೇಶ್ ಒಂಟಿಗೋಡಿ ಅವರು, ಮಹದೇವನ ವಿರುದ್ಧದ ಆರೋಪ ಸಾಭೀತಾದ ಹಿನ್ನೆಲೆ ಯಲ್ಲಿ ಆತನಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ, ತೀರ್ಪು ನೀಡಿದ್ದಾರೆ. ಸರ್ಕಾರದ ಪರ ವಾಗಿ ಸರ್ಕಾರಿ ಅಭಿಯೋಜಕಿ ಟಿ.ಬಿ. ಲಕ್ಷ್ಮೀದೇವಿ ವಾದ ಮಂಡಿಸಿದ್ದರು.

Translate »