ಕೆ.ಆರ್.ನಗರ: ಶಾಸಕ ಸಾ.ರಾ.ಮಹೇಶ್ ಅವರನ್ನು ಸೋಲಿಸಲು ಕಾಂಗ್ರೇಸ್ ಅಭ್ಯರ್ಥಿ ಡಿ.ರವಿಶಂಕರ್ ಅವರ ಜಾತಿಯವರು ಹಾಗೂ ಇತರÀರನ್ನು ಹಣಕೊಟ್ಟು ಖರೀದಿಸಿದ್ದಾರೆಂದು ಮಿರ್ಲೆ ಜಿ.ಪಂ ಕ್ಷೇತ್ರದ ಸದಸ್ಯ ಸಾ.ರಾ.ನಂದೀಶ್ ಆರೋಪಿಸಿದ್ದು, ಆದರೆ ಶಾಸಕ ಸಾ.ರಾ.ಮಹೇಶ್ ಅವರಿಗೆ ಯಾವ ಜಾತಿಯವರು ಮತ ಹಾಕಿದ್ದಾರೆ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ತಾಲೂಕು ಕುರುಬ ಸಂಘದ ಅಧ್ಯಕ್ಷ ಚೀರ್ನಹಳ್ಳಿ ಶಿವಣ್ಣ ಸವಾಲು ಹಾಕಿದ್ದಾರೆ.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಸಾ.ರಾ.ನಂದೀಶ್ ಅವರು ಕಾಂಗ್ರೇಸ್ ಅಭ್ಯರ್ಥಿಯಾಗಿದ್ದ ಡಿ.ರವಿಶಂಕರ್ ಅವರಿಗೆ ನಾಲ್ಕು ದಿಕ್ಕಿನಿಂದಲು ಹಣ ಬಂದಿದೆ ಎಂದು ತಿಳಿಸಿದ್ದಾರಲ್ಲಾ ಹಾಗಾದರೆ ಡಿ.ರವಿಶಂಕರ್ ಅವರು ಮೈಸೂರಿನ ಕುವೆಂಪುನಗರದ ಮನೆ, ಆಂಜನೇಯ ಬ್ಲಾಕ್‍ನಲ್ಲಿದ್ದ ಮನೆ, ಹುಣಸೂರು ರಸ್ತೆಯಲ್ಲಿರುವ ಜಮೀನನ್ನು ಮಾರಿಲ್ಲವೇ, ಅವರಿಗೆ ಅನುಮಾನವಿದ್ದಲ್ಲಿ ಸಬ್ ರಿಜಿಸ್ಟರ್ ಕಚೇರಿಗೆ ಬೇಟಿನೀಡಿ ದಾಖಲೆ ನೋಡಿ ಕೊಳ್ಳಬೇಕು ಅದನ್ನು ಬಿಟ್ಟು ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕೋಳಿಪ್ರಕಾಶ್, ಬಸವರಾಜು, ಅನಂತ್, ಸಾಕರಾಜ್, ಕುಮಾರ್. ಕೃಷ್ಣೇಗೌಡ, ಶ್ರೀನಿವಾಸ್ ಮತ್ತಿತರರು ಇದ್ದರು.