ಕೆ.ಆರ್.ನಗರ: ನನ್ನ ನೆಚ್ಚಿನ ನಾಯಕರಾದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೆ.ಆರ್.ನಗರ ತಾಲೂಕಿನ ಜನತೆಗೆ ಚುನಾವಣೆ ಸಂದರ್ಭ ದಲ್ಲಿ ನೀಡಿದ ಆಶ್ವಾಸನೆಯಂತೆ ನನ್ನನ್ನು ಸಚಿವನನ್ನಾಗಿ ಮಾಡಿ ಪ್ರವಾಸೋ ದ್ಯಮ ಮತ್ತು ರೇಷ್ಮೆ ಖಾತೆಯನ್ನು ನೀಡಿದ್ದು, ಅವರ ಆಶಯದಂತೆ ಈ ರಾಜ್ಯದ ಜನತೆಗೆ ಮತ್ತು ಸರ್ಕಾರಕ್ಕೆ ಹೆಸರು ತರುವ ರೀತಿ ಯಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದು ನೂತನ ಸಚಿವ ಸಾ.ರಾ.ಮಹೇಶ್ ಹೇಳಿದರು.
ಸಚಿವರಾಗಿ ನೇಮಕಗೊಂಡ ನಂತರ ಪ್ರಥಮ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಸಾ.ರಾ.ಮಹೇಶ್ ತಾಲೂಕಿನ ಜೆಡಿಎಸ್ ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ ಸ್ವೀಕರಿಸಿ, ನಂತರ ಶ್ರೀ ಆದಿಶಕ್ತಿ ತೋಪಮ್ಮ ನಿಗೆ ಪೂಜೆ ಸಲ್ಲಿಸಿ, ಮಾಧ್ಯಮದವರೊಂ ದಿಗೆ ಮಾತನಾಡಿ, ನಾನು ಎರಡು ಬಾರಿ ವಿರೋಧ ಪಕ್ಷದ ಶಾಸಕನಾಗಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಸಾಕಷ್ಟು ಶ್ರಮಿ ಸಿದ್ದು, ಈಗ ನಾನೇ ಸಚಿವನಾಗಿರುವುದರಿಂದ ತಾಲೂಕಿನ ಅಭಿವೃದಿಯ ಜೊತೆಗೆ ರಾಜ್ಯದ ಅಭಿವೃದ್ದಿಗೂ ಶ್ರಮಿಸುತ್ತೇನೆ ಎಂದು ಹೇಳಿದರು.
ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಯನ್ನು ಪ್ರಾರಂಭಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜೊತೆ ಚರ್ಚಿಸಿ ಶೀಘ್ರದಲ್ಲಿ ಪ್ರಾರಂಭ ಮಾಡುತ್ತೇನೆ ಎಂದರು. ನಾನೇ ಪ್ರವಾಸೋದ್ಯಮ ಸಚಿವನಾಗಿ ರುವುದರಿಂದ ಪ್ರಸಿದ್ಧ ಚುಂಚನಕಟ್ಟೆ ಜಲಾ ಪಾತೋತ್ಸವವನ್ನು ಅದ್ಧೂರಿಯಾಗಿ ಆಚರಿ ಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ನಾನು ಸಚಿವನಾದರು ಸಹ ಎಂದಿನಂತೆ ತಾಲೂಕಿನ ಜನರ ಸೇವೆ ಮಾಡಲಿದ್ದು, ವಾರದ ಪ್ರತಿ ಶುಕ್ರವಾರ ತಾಲೂಕಿನ ನನ್ನ ಕಚೇರಿಯಲ್ಲಿ ಹಾಜರಿದ್ದು, ಸಾರ್ವಜನಿಕರು ಅಹವಾಲುಗಳನ್ನು ನೀಡಬಹುದಾಗಿದ್ದು, ಆಗತ್ಯವಿದ್ದರೆ ನನ್ನ ದೂರವಾಣ ಗೆ ಕರೆ ಮಾಡಿ ವಿಷಯವನ್ನು ತಿಳಿಸಿ ನಾನು ನಿಮ್ಮೊಂದಿ ಗಿದ್ದು ನಿಮ್ಮ ಸೇವೆಯನ್ನು ಮಾಡಲು ಸದಾ ಸಿದ್ಧನಿರುತ್ತೇನೆ ಎಂದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಹಲವಾರು ಸವಾಲುಗಳಿದ್ದು, ಅವುಗಳನ್ನು ಒಂದೊಂದಾಗಿ ನಿವಾರಿಸಲಿದ್ದು ಅವರು ಕೊಟ್ಟ ಆಶ್ವಾಸನೆಗಳನ್ನು ಈಡೇರಿಸಲು ತಾಲೂಕಿನ ಮತ್ತು ರಾಜ್ಯದ ಜನತೆ ಸ್ವಲ್ಪ ಸಮಯಾವಕಾಶ ನೀಡಿದರೆ ಈ ರಾಜ್ಯ ವನ್ನು ಅಭಿವೃದಿಯ ಕಡೆ ಕೊಂಡೊ ಯ್ಯಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಸಿದ್ದಪ್ಪ, ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ಟಿ.ಸೋಮಶೇಖರ್, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಮಿರ್ಲೆ ಧನಂಜಯ್ಯ, ಯುವ ಜೆಡಿಎಸ್ ಅಧ್ಯಕ್ಷ ಮಧುಚಂದ್ರ, ಕಾರ್ಯಧ್ಯಕ್ಷ ಕಿಶೋರ್, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗಣೇಶ್, ಹರಿಚಿದಂಬರ್, ಜೆಡಿಎಸ್ ಮುಖಂಡರು ಗಳಾದ ಪೆರಿಸ್ವಾಮಿ,ರಾಜಾಶ್ರೀಕಾಂತ, ಜ್ಞಾನೇಶ್, ಭರ್ತೆಶ, ಜವರೇಗೌಡ, ಮಹದೇವ, ಒಕ್ಕಲಿಗರ ಸಂಘದ ಅಧ್ಯಕ್ಷ ಅಣೇಗೌಡರು, ನಿರ್ದೇಶಕರಾದ ಮಹದೇವ್, ಹೆಚ್.ಪಿ.ಶಿವಣ್ಣ ಇನಿತ್ತರರು ಹಾಜರಿದ್ದರು. ನಗರದ ವಿ.ವಿ.ರಸ್ತೆಯಲ್ಲಿ ತೆರೆದ ವಾಹನ ದಲ್ಲಿ ಸಚಿವರಾದ ಸಾ.ರಾ.ಮಹೇಶ್, ನವನಗರ ಬ್ಯಾಂಕ್ ಅಧ್ಯಕ್ಷರು ಜೆ.ಡಿಎಸ್. ಮುಖಂಡರಾದ ಬಸಂತ್ ನಂಜಪ್ಪ, ಡಾ. ಮೆಹಬೂಬ್ ಖಾನ್, ಎ.ಟಿ.ಸೋಮ ಶೇಖರ್, ಜೆಡಿಎಸ್ ಅಧ್ಯಕ್ಷ ಚಂದ್ರ ಶೇಖರ್ ಇನ್ನಿತರರು ಇದ್ದರು. ಕಾರ್ಯ ಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.