ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿಮದ್ದೂರಿನ ವಿವಿಧೆಡೆ ಸರಣ ಪ್ರತಿಭಟನೆ
ಮಂಡ್ಯ

ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿಮದ್ದೂರಿನ ವಿವಿಧೆಡೆ ಸರಣ ಪ್ರತಿಭಟನೆ

June 9, 2018

ಮದ್ದೂರು: ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಮದ್ದೂರಿನ ವಿವಿಧೆಡೆ ಸರಣ ಪ್ರತಿಭಟನೆ ನಡೆದಿದೆ.

ಕಬ್ಬಿನ ಬಾಕಿ ಹಣ ಪಾವತಿ ಮತ್ತು ರಾಜ್ಯ ಸರ್ಕಾರ ಟನ್ ಕಬ್ಬಿಗೆ ಸಾವಿರ ರೂ. ಪ್ರೋತ್ಸಾಹ ಧನ ನೀಡುವಂತೆ ಒತ್ತಾಯಿಸಿ ತಾಲೂಕಿನ ಕೊಪ್ಪ ಎನ್‍ಎಸ್‍ಎಲ್ ಕಾರ್ಖಾನೆಗೆ ರೈತರು ಮುತ್ತಿಗೆ ಹಾಕಿದರೇ, ಅವಧಿಗೂ ಮುನ್ನವೇ ರೈತರ ಚಿನ್ನಾಭರಣವನ್ನು ಬಹಿರಂಗ ಹರಾಜು ಹಾಕುತ್ತಿರುವ ಪಟ್ಟಣದ ಐಐಎಫ್‍ಎಲ್ ಗೋಲ್ಡ್ ಲೋನ್ ಕ್ರಮ ಖಂಡಿಸಿ ರೈತರು ಹಾಗೂ ವೇತನ ಪಾವತಿಗೆ ಆಗ್ರಹಿಸಿ ಟಾಸ್ಕ್‍ವರ್ಕ್ ನೌಕರರು ಪ್ರತಿಭಟನೆ ನಡೆಸಿದ್ದಾರೆ.

ಕಬ್ಬಿನ ಬಾಕಿ ಹಣ ಪಾವತಿಗೆ ಆಗ್ರಹ: ರೈತರು ಕಾರ್ಖಾನೆಗೆ ಸರಬರಾಜು ಮಾಡಿದ ಕಬ್ಬಿನ ಬಾಕಿ ಹಣ ಪಾವತಿ ಮತ್ತು ರಾಜ್ಯ ಸರ್ಕಾರ ಟನ್ ಕಬ್ಬಿಗೆ ಸಾವಿರ ರೂ. ಪ್ರೋತ್ಸಾಹ ಧನ ನೀಡಬೇಕೆಂದು ಒತ್ತಾಯಿಸಿ ತಾಲೂ ಕಿನ ಕೊಪ್ಪ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಜಿಲ್ಲಾ ಕಾಂಗ್ರೆಸ್ ರೈತ ಮತ್ತು ಕೃಷಿ ಕಾರ್ಮಿಕರ ವಿಭಾಗ ದಿಂದ ಕಾರ್ಖಾನೆಗೆ ಮುತ್ತಿಗೆ ಹಾಕಿ ಪ್ರತಿ ಭಟನೆ ಮಾಡಲಾಯಿತು.

ಪ್ರತಿಭಟನೆ ನೇತೃತ್ವ ವಹಿಸಿ ಮಾತ ನಾಡಿದ ಜಿಲ್ಲಾ ಕಾಂಗ್ರೆಸ್ ರೈತ ಮತ್ತು ಕೃಷಿ ಕಾರ್ಮಿಕರ ವಿಭಾಗದ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್‍ಕುಮಾರ್, ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆ ರೈತರಿಗೆ 4 ಕೋಟಿಗೂ ಹೆಚ್ಚಿನ ಕಬ್ಬಿನ ಬಾಕಿ ಹಣ ನೀಡಬೇಕು. ಪ್ರಸಕ್ತ ಸಾಲಿನಲ್ಲಿ ಸರಬರಾಜು ಮಾಡುವ ಕಬ್ಬಿಗೆ ಮುಂಚಿತವಾಗಿ ದರ ನಿಗದಿ ಮಾಡಬೇಕು ಮತ್ತು ಪ್ರತಿ ಟನ್ ಕಬ್ಬಿಗೆ ಸರ್ಕಾರ ರೈತರಿಗೆ ಸಾವಿರ ರೂ. ಪ್ರೋತ್ಸಾಹ ಧನ ಘೋಷಿಸಬೇಕು ಎಂದು ಆಗ್ರಹಿಸಿದರು. ಕೂಡಲೇ ನಮ್ಮ ಬೇಡಿಕೆ ಗಳನ್ನು ಈಡೇರಿಸದಿದ್ದರೇ ಮುಂದಿನ ದಿನ ಗಳಲ್ಲಿ ಉಗ್ರ ಹೋರಾಟ ರೂಪಿಸಲಾಗು ವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನಾ ಸ್ಥಳಕ್ಕಾಗಮಿಸಿದ ಕಾರ್ಖಾನೆ ಉಪಾಧ್ಯಕ್ಷ ಪಿ.ಕೆ.ದತ್, ಕಬ್ಬು ವಿಭಾಗದ ವ್ಯವಸ್ಥಾಪಕ ಚಲುವರಾಜು, ಸಂಪರ್ಕಾ ಧಿಕಾರಿ ದೀಪಕ್ ಅವರು 15 ದಿನದೊಳಗೆ ಕಬ್ಬಿನ ಬಾಕಿ ಹಣ ನೀಡಲಾಗುವುದು. ಆಗಸ್ಟ್ ಮೊದಲ ವಾರದಲ್ಲಿ ಕಾರ್ಖಾನೆ ಆರಂಭಿಸ ಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಮುಖಂಡರಾದ ಕುಮಾರ್ ಕೊಪ್ಪ, ಮಹೇಶ್, ಸತೀಶ್, ರಾಮಲಿಂಗಯ್ಯ, ಕೃಷ್ಣಪ್ಪ, ಜಯರಾಮು, ಶಿವಲಿಂಗ, ಅಶೋಕ್, ಶಿವಕುಮಾರ್ ಸೇರಿದಂತೆ ಇನ್ನಿತರರಿದ್ದರು.

ಚಿನ್ನಾಭರಣ ಹರಾಜು ಖಂಡಿಸಿ ಪ್ರತಿ ಭಟನೆ: ಪಟ್ಟಣದ ಐಐಎಫ್‍ಎಲ್ ಗೋಲ್ಡ್ ಲೋನ್‍ನಲ್ಲಿ ರೈತರು ಅಡವಿಟ್ಟಿರುವ ಚಿನ್ನಾಭರಣಗಳನ್ನು ಅವಧಿಗೂ ಮುನ್ನವೇ ಬಹಿರಂಗವಾಗಿ ಹರಾಜು ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತರು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕಚೇರಿ ಎದುರು ಜಮಾಯಿಸಿದ ರೈತರು ಅವಧಿಗೂ ಮುಂಚೆಯೇ ಒಡವೆಗಳನ್ನು ಬಹಿರಂಗವಾಗಿ ಹರಾಜು ಮಾಡುತ್ತಿರುವ ಸಿಬ್ಬಂದಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ತೆಂಗು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಲಕ್ಷ್ಮಣ್ ಚನ್ನಸಂದ್ರ ಮಾತನಾಡಿ, ಇಲ್ಲಿನ ಐಐಎಫ್‍ಎಲ್ ಗೋಲ್ಡ್ ಲೋನ್ ಅಧಿ ಕಾರಿಗಳು ಮತ್ತು ಸಿಬ್ಬಂದಿಗಳು ರೈತರು ಅಡಮಾನವಿಟ್ಟ ಚಿನ್ನಾಭರಣಗಳನ್ನು ಅವಧಿಗೂ ಮುಂಚೆಯೇ ಬಹಿರಂಗ ಹರಾಜು ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ತುಂಬಾ ತೊಂದರೆಯಾಗಿದೆ. ಇಂತಹ ಖಾಸಗಿ ಬ್ಯಾಂಕ್ ವಿರುದ್ಧ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ರೈತರ ಪರ ನಿಲ್ಲಬೇಕು ಎಂದು ಆಗ್ರಹಿಸಿದರು.

ಇಂತಹ ಖಾಸಗಿ ಬ್ಯಾಂಕ್‍ಗಳ ಹಗಲು ದರೋಡೆಯಿಂದ ರೈತರು ಮಾನಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಹೀಗಾಗಿ ಒಡವೆ ಹರಾಜು ನಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡರಾದ ಮಹದೇವು, ಶ್ರೀನಿವಾಸ್, ಧನ್ಯಕುಮಾರ್, ಶಂಕರ್, ರಾಮಲಿಂಗೇಗೌಡ, ಗೋಪಾಲ್‍ಕೃಷ್ಣ, ಮಹೇಶ್, ಶ್ರೀನಿವಾಸ್ ಇನ್ನಿತರರು ಪ್ರತಿ ಭಟನೆಯಲ್ಲಿ ಭಾಗವಹಿಸಿದ್ದರು.

2ನೇ ದಿನಕ್ಕೆ ಕಾಲಿಟ್ಟ ಧರಣ : ನೀರು ಗಂಟಿಗಳಿಗೆ ವೇತನ ನೀಡದ ಕಾವೇರಿ ನೀರಾವರಿ ಇಲಾಖೆ ಕ್ರಮ ಖಂಡಿಸಿ, ಪಟ್ಟಣದ ಕಚೇರಿ ಆವರಣದಲ್ಲಿ ಟಾಸ್ಕ್ ವರ್ಕ್ ದಿನಗೂಲಿ ನೌಕರರ ಸಂಘದ ವತಿಯಿಂದ ನಡೆಯುತ್ತಿರುವ ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದೆ.
ಟಾಸ್ಕ್ ವರ್ಕ್ ದಿನಗೂಲಿ ನೌಕರರ ಸಂಘದ ಅಧ್ಯಕ್ಷ ಮಾಯಣ್ಣ ಮಾತನಾಡಿ, 6 ತಿಂಗಳಿಂದ ನಮಗೆ ವೇತನ ನೀಡಿದ ಕಾರಣ ಜೀವನ ನಿರ್ವಹಣೆ ಕಷ್ಟವಾಗಿದೆ. ಮಕ್ಕಳನ್ನು ಶಾಲಾ, ಕಾಲೇಜಿಗೆ ಸೇರಿಸಲು ಹಣ ಇಲ್ಲದಂತಾಗಿದೆ. ನಮ್ಮ ಕಷ್ಟಗಳನ್ನು ಅರಿತು ಶೀಘ್ರ ವೇತನ ಬಿಡುಗಡೆ ಮಾಡ ಬೇಕೆಂದು ಆಗ್ರಹಿಸಿದರು. ಸೋಮವಾರ ದೊಳಗೆ ವೇತನ ನೀಡದಿದ್ದರೆ, ಕಚೇರಿ ಆವ ರಣದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಟಾಸ್ಕ್ ವರ್ಕ್ ದಿನಗೂಲಿ ನೌಕರರ ಸಂಘದ ಕಾರ್ಯದರ್ಶಿ ಸುರೇಶ್, ಉಪಾಧ್ಯಕ್ಷ ಜಗದೀಶ್, ಖಜಾಂಚಿ ಬಸವ ರಾಜು, ಮುಖಂಡರಾದ ನರಸಿಂಹ, ಶಂಕರ್ ರಾವ್, ಪುಟ್ಟೇಗೌಡ, ರಘು, ಅಲಮೇಲಮ್ಮ, ಭಾರತಿ ಸೇರಿದಂತೆ ಇನ್ನಿತರರಿದ್ದರು.

 

Translate »