ಕೆಎಸ್‍ಆರ್ ಟಿಸಿ ಬಸ್ ಹರಿದು ವ್ಯಕ್ತಿ ಸಾವು
ಮಂಡ್ಯ

ಕೆಎಸ್‍ಆರ್ ಟಿಸಿ ಬಸ್ ಹರಿದು ವ್ಯಕ್ತಿ ಸಾವು

June 9, 2018

ಭಾರತೀನಗರ: ಬೈಕ್‍ನಿಂದ ಆಯತಪ್ಪಿ ಬಿದ್ದ ವ್ಯಕ್ತಿ ತಲೆ ಮೇಲೆ ಕೆಎಸ್‍ಆರ್ ಟಿಸಿ ಬಸ್ ಹರಿದು ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗೌಡಯ್ಯನ ದೊಡ್ಡಿ ಗೇಟ್ ಬಳಿ ಜರುಗಿದೆ. ಮಂಡ್ಯ ತಾಲೂಕಿನ ಕಬ್ಬನಹಳ್ಳಿ ಗ್ರಾಮದ ನಿವಾಸಿ ಶಿವಲಿಂಗಯ್ಯ(50) ಸಾವನ್ನಪ್ಪಿದವರು.

ಮದ್ದೂರು ತಾಲೂಕಿನ ಕಾಡುಕೊತ್ತನಹಳ್ಳಿಯ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಪ್ರಥಮ ದರ್ಜೆ ಗುಮಾಸ್ತನಾಗಿ ಕಾರ್ಯ ನಿರ್ವ ಹಿಸುತ್ತಿದ್ದ ಶಿವಲಿಂಗಯ್ಯ ಕಾರ್ಯ ನಿಮಿತ್ತ ಕೆ.ಎಂ.ದೊಡ್ಡಿಗೆ ತಮ್ಮ ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಕೆ.ಎಂ.ದೊಡ್ಡಿ ಸಿಪಿಐ ನವೀನ್, ಎಸ್‍ಐ ಅಯ್ಯನಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿ ಸಿದರು. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದರು. ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Translate »