ಆರೋಗ್ಯಾಧಿಕಾರಿ ದಿಢೀರ್ ದಾಳಿ
ಮೈಸೂರು

ಆರೋಗ್ಯಾಧಿಕಾರಿ ದಿಢೀರ್ ದಾಳಿ

June 9, 2018

ಅಂಗಡಿ ಮುಂಗಟ್ಟುಗಳ ಪರಿಶೀಲನೆ: ನಿಯಮ ಉಲ್ಲಂಘಿಸಿದವರಿಗೆ ದಂಡ

ಸರಗೂರು:  ಸರಗೂರು ಪಟ್ಟಣಕ್ಕೆ ತಾಲೂಕು ಆರೋಗ್ಯಾಧಿಕಾರಿ ರವಿಕುಮಾರ್ ದಿಢೀರ್ ದಾಳಿ ನಡೆಸಿ, ಕ್ಯಾಂಟೀನ್, ಬೇಕರಿ, ವಿವಿಧ ಅಂಗಡಿಗಳಲ್ಲಿ ಮಾರಾಟ ಮಾಡುವ ವಸ್ತುಗಳನ್ನು ಪರಿಶೀಲನೆ ಮಾಡಿದರು. ಪಟ್ಟಣದ ಲಯನ್ಸ್ ಶಾಲಾ ಅವರಣದ ಮಂದೆ ಇರುವ ರವಿ ಬೇಕರಿಗೆ ಭೇಟಿ ನೀಡಿ, ಸಿಗರೇಟ್ ಮಾರಾಟಕ್ಕೆ ಇಟ್ಟಿದ್ದರಿಂದ ಬೇಕರಿ ಮಾಲೀಕರಿಗೆ ದಂಡ ವಿಧಿಸಿದರು.

ನಂತರ ನವೀನ್, ಲಕ್ಷ್ಮಿ, ಜಯಲಕ್ಷ್ಮಿ ಬೇಕರಿ ಸೇರಿದಂತೆ ಇನ್ನಿತರ ಬೇಕರಿಗಳನ್ನೂ ಪರಿಶೀಲಿಸಿ, ಲೈಸೆನ್ಸ್ ಪಡೆಯದೇ ಇರುವುದು, ತಿಂಡಿ ತಿನಿಸುಗಳ ಮೇಲೆ ಯಾವುದೇ ಲೇಬಲ್ ಇಲ್ಲದಿರುವುದು ಕಂಡು ಬಂತು. ಪ್ರತಿಯೊಂದು ಪದಾರ್ಥದ ಮೇಲೆ ಸಿದ್ಧಪಡಿಸುವವರ ಹೆಸರು, ಸ್ಥಳ, ದಿನಾಂಕ, ನಮೂದಿಸಿರಬೇಕು ಸಿಗರೇಟ್, ಬೀಡಿ ಮಾರಾಟ ಮಾಡುವು ದಿಲ್ಲ ಎಂಬ ನಾಮಫಲಕವನ್ನು ಕಡ್ಡಾಯವಾಗಿ ಅಂಗಡಿ ಮುಂಬಾಗ ಹಾಕಬೇಕು. ಶುದ್ಧವಾದ ಪದಾರ್ಥ ಮಾರುವ ಬದಲು ಹಣದ ಆಸೆಗಾಗಿ ಕಡಿಮೆ ಗುಣಮಟ್ಟದ ಪದಾರ್ಥ ಕಂಡು ಬಂದಲ್ಲಿ ಅಂಗಡಿ ಮಾಲೀಕರ ಮೇಲೆ ದೂರು ದಾಖಲು ಮಾಡಲಾ ಗುವುದು ಎಂದು ಎಚ್ಚರಿಸಿದರು. ಕೆಲ ಅಂಗಡಿಗಳಿಗೆ ನೋಟೀಸ್ ನೀಡಿ ದಂಡ ವಿದಿಸ ಲಾಯಿತು, ಪ್ರತಿಯೊಬ್ಬರು ತಮ್ಮ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಮಾರಾಟ ಮಾಡಬಾರದು, ತಮ್ಮ ಅಂಗಡಿ ಬೇಕರಿ, ಹೊಟೇಲ್‍ಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಕಾನೂನನ್ನು ಪ್ರತಿಯೊ ಬ್ಬರು ಪಾಲಿಸಬೇಕು ಎಂದರು. ಸರಗೂರು ಪಿಎಸ್‍ಐ ಮಾದಪ್ಪ, ಸಿಬಂದಿ, ಸೈಪಾನ್ ಸಾಬ್, ತಂಬಾಕು ಕೋಶ ಸಲಹೆಗಾರ ಶಿವಕುಮಾರ್ ಈ ವೇಳೆ ಉಪಸ್ಥಿತರಿದ್ದರು.

Translate »