ಹುಣಸೂರು ನಗರಸಭೆ ಜೆಡಿಎಸ್ ತೆಕ್ಕೆಗೆ
ಮೈಸೂರು

ಹುಣಸೂರು ನಗರಸಭೆ ಜೆಡಿಎಸ್ ತೆಕ್ಕೆಗೆ

October 7, 2018

ಹುಣಸೂರು: ನಗರಸಭಾ ಅಧ್ಯಕ್ಷ ಎಂ.ಶಿವಕುಮಾರ್ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಹೆಚ್.ವೈ.ಮಹದೇವು ಅವಿರೋಧವಾಗಿ ಅಯ್ಕೆಯಾಗಿದ್ದಾರೆ.

ಪ್ರವಾಸದಲ್ಲಿದ್ದ ನಗರ ಸಭೆಯ 17 ಸದಸ್ಯರು ಇಂದು ಬೆಳಿಗ್ಗೆ ಚುನಾವಣಾ ಸಮಯಕ್ಕೆ ಹಾಜರಾದರು. ಶಾಸಕ ಹೆಚ್. ವಿಶ್ವನಾಥ್‍ರವರ ಸಾರಥ್ಯದಲ್ಲಿ ನಗರಸಭಾ ಸದಸ್ಯರಾದ ಜೆಡಿಎಸ್‍ನ ಹೆಚ್.ಪಿ.ಸತೀಶ್, ಎಸ್.ಶರವಣ್ಣ, ಮಹಮದ್ ಪೀರ್, ಕೃಷ್ಣ ರಾಜಗುಪ್ತ, ಹಜರತ್‍ಜಾನ್, ಹೆಚ್.ಎಂ. ನಸರುಲ್ಲಾ, ಎಸ್.ಎಲ್.ಪ್ರೇಮಕುಮಾರಿ ಕಾಂಗ್ರೆಸ್‍ನ ಎಂ.ಶಿವಕುಮಾರ್, ಕೆ.ಎನ್. ನರಸಯ್ಯ, ಆರ್.ವೆಂಕಟೇಶ್, ಶಿವರಾಜ್, ಸುನೀತಾ ಜಯರಾಮೇಗೌಡ, ಹೆಚ್.ಜೆ. ಯೋಗಾನಂದ, ಧನಲಕ್ಷ್ಮಿರಾಜಣ್ಣ, ಜಿ.ಶ್ರೀನಿ ವಾಸ್, ಸ್ವತಂತ್ರ ಸದಸ್ಯರಾದ ಮಂಜುಳಾ ಚನ್ನಬಸಪ್ಪ, ಹೆಚ್.ವೈ ಮಹದೇವು ಹಾಜ ರಾಗಿ ಹೆಚ್.ವೈ.ಮಹದೇವು ಅವರಿಗೆ ತಮ್ಮ ಬೆಂಬಲ ಸೂಚಿಸಿದರು.

ಇಂದು ಬೆಳಿಗ್ಗೆ 10 ಗಂಟೆಗೆ ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ 17ನೇ ವಾರ್ಡ್‍ನ ಹೆಚ್.ವೈ. ಮಹದೇವು ನಾಮಪತ್ರ ಸಲ್ಲಿಸಿದರು. ಸಮಯ 11.30 ಆದರೂ ಯಾರು ನಾಮ ಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಕೆ.ನಿತೀಶ್‍ರವರು ಹೆಚ್.ವೈ.ಮಹದೇವ್ ಅವಿರೋಧವಾಗಿ ಆಯ್ಕೆಯಾಗಿರುವುದನ್ನು ಘೋಷಿಸಿದರು.

ಇಂದಿನ ಸಭೆಗೆ ಕಾಂಗ್ರೆಸ್‍ನ ಜಾಕಿರ್ ಹುಸೇನ್, ಮಹಮದ್ ಷಫಿ, ಸೌರಭ ಸಿದ್ದ ರಾಜು, ಅಯೂಬ್‍ಖಾನ್, ಹೆಚ್.ಸಿ.ರವಿ ಕುಮಾರ್, ವಾಹಿದಾ ಭಾನು, ಹೆಚ್.ಜೆ. ವೆಂಕಟೇಶ್, ಕೆ.ಲಕ್ಷ್ಮಣ್, ಪಿ.ಕೆ.ಗುಲ್ನಾಜ್, ಷಾಹಿಮುನ್ನಿಸಾ ಅವರುಗಳು ಗೈರು ಅಗಿದ್ದರು.
ಹುಣಸೂರು ನಗರ ಸಭೆಯಲ್ಲಿ 14 ಕಾಂಗ್ರೆಸ್, 10 ಜೆಡಿಎಸ್ ಹಾಗೂ 3 ಪಕ್ಷೇತರ ಸದಸ್ಯರಿದ್ದು, ಬಹುತೇಕ ಕಾಂಗ್ರೆಸ್ಸಿಗರೆ ಇದ್ದರೂ ಕಳೆದ ಬಾರಿಯಿಂದ ಅಧಿಕಾರ ದಕ್ಕಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದು, ಅದೇ ರೀತಿ ಈ ಬಾರಿಯೂ ಅಧಿಕಾರ ಹಿಡಿಯುವಲ್ಲಿ ವಿಫಲರಾಗಿ ಮುಖಭಂಗ ಅನುಭವಿಸಿದ್ದಾರೆ. ನಂತರ ಶಾಸಕ ಹೆಚ್. ವಿಶ್ವನಾಥ್ ಮಾತನಾಡಿ, ಅರಸರ ಈ ಕರ್ಮ ಭೂಮಿಯಲ್ಲಿ ಮಣ್ಣಲ್ಲಿ ಮಣ್ಣಾದವರ ಅತ್ಯಂತ ಕೆಳಮಟ್ಟದ ಸಮಾಜಕ್ಕೆ ನಗರ ಸಭೆಯ ಅಧ್ಯಕ್ಷ ಸ್ಥಾನವನ್ನು ಅವಿರೋಧ ವಾಗಿ ಕಲ್ಪಿಸಿ ಕೊಟ್ಟಿರುವುದು ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು. ಇಂದು ಬೆಳಿಗ್ಗೆ 10ರವರೆವಿಗೂ ಅಧಿಕಾರ ಹಿಡಿ ಯುವಲ್ಲಿ ಸಾಕಷ್ಟು ಸರ್ಕಸ್ ಮಾಡಿದ ಮಾಜಿ ಶಾಸಕ ಮಂಜುನಾಥ್, ಕೊನೆ ಹಂತದಲ್ಲಿ ಕಣದಿಂದ ಹಿಂದೆ ಸರಿದಿದ್ದಾರೆ.

ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಭಾರೀ ಪ್ರಯತ್ನ ಮಾಡಿ ಸದಸ್ಯರ ಮನೆ ಮನೆಗೆ ತೆರಳಿ ವ್ಹಿಪ್ ಜಾರಿ ಮಾಡಿ, ಕೈಗೆ ಸಿಗದವರ ಮನೆ ಬಾಗಿಲಿಗೆ ಅಂಟಿಸಿ ಬಂದಿದ್ದಾರೆ. ಆದರೂ ಪ್ರಯೋಜನವಾಗದೆ ಇಂದು ಬೆಳಿಗ್ಗೆ ತಮ್ಮ ಪಕ್ಷದ ಅಭ್ಯರ್ಥಿ ಸೌರಭ ಸಿದ್ದರಾಜು ಅವರಿಂದ ಪತ್ರಿಕಾ ಹೇಳಿಕೆ ಕೊಡಿಸಿ ಚುನಾವಣೆಯಿಂದ ಹೊರಗುಳಿದಿದ್ದಾರೆ.

ಹಿಂದಿನ ದಬ್ಬಾಳಿಕೆ ಆಡಳಿತಕ್ಕೆ ತಿಲಾಂಜಲಿ ಹೇಳಿ ನಮ್ಮ ಅವಧಿಯಲ್ಲಿ ಜನರನ್ನು, ಜನ ಪ್ರತಿನಿಧಿಗಳನ್ನು ಒಟ್ಟಿಗೆ ಕರೆದೊಯ್ಯುವ ಜನತಂತ್ರ ವ್ಯವಸ್ಥೆಯನ್ನು ಜನರಿಗೆ ತಿಳಿ ಸುವ ಕೆಲಸ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ವಿವಿಧ ಜಾಗೃತಿ ಸಮಿತಿಗಳನ್ನು ರಚಿಸಿ, ಅಲ್ಲಿನ ಹಾಗೂ ಹೋಗುಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಲಾ ಗುತ್ತಿದೆ ಎಂದರು.

ಒಂದೇ ಮನೆಯಲ್ಲಿ ನಾಲ್ಕೈದು ಕುಟುಂಬ ಗಳು ಬದುಕುತ್ತಿರುವ ಅಸಹಾಯಕ ಬಡ ಕುಟುಂಬಗಳಿಗೆ 10 ಸಾವಿರ ಮನೆಗಳ ಅವಶ್ಯಕತೆ ಇದ್ದು 1+2 ರೀತಿಯಲ್ಲಿ ಮನೆ ಕಟ್ಟಿಕೊಡಲು ಸರ್ಕಾರದ ನಿರ್ದೇಶನ ವಿದ್ದು, ಈಗಾಗಲೇ ನಗರಸಭೆ ವತಿಯಿಂದ 8 ಎಕರೆ ಭೂಮಿ ಖರೀದಿಸಿದ್ದು ಸರ್ಕಾರದ ಈ ಯೋಜನೆಯನ್ನು ಸದ್ಯದಲ್ಲೆ ಕೈಗೆತ್ತಿಕೊಳ್ಳಲಾಗುವುದು, ಇದರಿಂದ ಬಡವರು ನೆಮ್ಮದಿಯ ಬದುಕು ಕಾಣಲು ಸಾಧ್ಯವಾಗಲಿದೆ ಎಂದರು.

ಅಲ್ಲದೆ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಆದ್ಯತೆ ನೀಡುವ ಮೂಲಕ ನನ್ನ ಅಧ್ಯಕ್ಷತೆಯಲ್ಲಿ ಶುದ್ಧಕುಡಿಯುವ ನೀರಿಗಾಗಿ ಈಗಾಗಲೇ 40 ಲಕ್ಷ ನೀಡಿದ್ದೇನೆ ನಗರದಲ್ಲಿ ಈ ಹಿಂದೆ ನಿರ್ಮಿಸಿ ಚಾಲನೆ ನೀಡದೆ ಸ್ಥಗಿತವಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ಗಳಿಗೆ ನ.1 ಕನ್ನಡ ರಾಜ್ಯೋ ತ್ಸದ ದಿನದಂದು ಚಾಲನೆ ನೀಡಲಾಗು ವುದು ಎಂದರು.

ನೂತನ ಅಧ್ಯಕ್ಷ ಮಹದೇವ್ ಮಾತನಾಡಿ, ಮಾಜಿ ಅಧ್ಯಕ್ಷರು ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಆದರೂ ನನ್ನ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ, ರಸ್ತೆಗಳ ಅಭಿವೃದ್ಧಿ, ಬೀದಿ ದೀಪಗಳ ನಿರ್ವಹಣೆ ಮತ್ತು ಕತ್ತಲಿನ ಕಡೆಗಳಲ್ಲಿ ಬೆಳಕು ನೀಡುವ ಕೆಲಸ, ಸ್ಮಶಾನಗಳಿಗೆ ಮೂಲ ಸೌಕರ್ಯ, ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವುದರ ಜೊತೆಗೆ 14-15 ವರ್ಷಗಳಿಂದ ನಿವೇಶನ ಗಳನ್ನು ನೀಡಿಲ್ಲದೆ ಜನರಿಗೆ ತುಂಬಾ ತೊಂದರೆ ಯಾಗಿದೆ. ಅದನ್ನು ಶಾಸಕರ ಮತ್ತು ಎಲ್ಲ ಸದಸ್ಯರ ಸಹಕಾರದೊಂದಿಗೆ ನಿವೇಶನ ಮತ್ತು ಮನೆಗಳನ್ನು ನೀಡುವ ಕೆಲಸ ಮಾಡಲಿದ್ದೇನೆ ಎಂದರು.

Translate »