ಇಂದು ಗುರುಪೂರ್ಣಿಮಾ
ಮೈಸೂರು

ಇಂದು ಗುರುಪೂರ್ಣಿಮಾ

July 27, 2018

ಮೈಸೂರು: ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯು ದೇಶಾದ್ಯಂತ 109 ಸ್ಥಳಗಳಲ್ಲಿ `ಗುರುಪೂರ್ಣಿಮಾ ಮಹೋತ್ಸವ’ ಆಯೋಜಿಸಿದ್ದು, ಅದರಂತೆ ಜು.27ರಂದು ಸಂಜೆ 5 ಗಂಟೆಗೆ ಮೈಸೂರಿನ ಜಯಲಕ್ಷ್ಮಿಪುರಂನ ಶ್ರೀ ಪ್ರಸನ್ನ ಪಾರ್ವತಿ ಕಲ್ಯಾಣ ಮಂಟಪದಲ್ಲಿ `ಗುರುಪೂರ್ಣಿಮಾ ಮಹೋತ್ಸವ’ವನ್ನು ಆಯೋಜಿಸಿದೆ. ಈ ಮಹೋತ್ಸವದಲ್ಲಿ ಶ್ರೀ ವ್ಯಾಸಪೂಜೆ ಮತ್ತು ಗುರುಪೂಜೆ, ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದೂ ಸಂಘಟನೆಯ ಅದ್ವಿತೀಯ ಕಾರ್ಯ ಕುರಿತ ಸಾಕ್ಷ್ಯ ಚಿತ್ರ, ಸಮಾಜ-ರಾಷ್ಟ್ರ ಮತ್ತು ಧರ್ಮದ ಬಗ್ಗೆ ಕೃತಿ ಶೀಲರಾಗಿರುವ ಗಣ್ಯರ ವಿಚಾರಗಳು ಹಾಗೂ ಆಪತ್ಕಾಲದಲ್ಲಿ ಸಮಾಜ ಸಹಾಯಕ್ಕಾಗಿ ಅವಶ್ಯವಿರುವ ಪ್ರಥಮ ಚಿಕಿತ್ಸೆ ತರಬೇತಿ ಮತ್ತು ಸ್ವರಕ್ಷಣೆ ಮತ್ತು ಹೋರಾಡುವುದನ್ನು ಕಲಿಸುವ ಸ್ವಸಂರಕ್ಷಣೆಯ ಪ್ರಾತ್ಯಕ್ಷಿಕೆಯ ಸಾಕ್ಷ್ಯಚಿತ್ರ ಇರಲಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂ.9342599299 ಸಂಪರ್ಕಿಸಬಹುದು.

Translate »