ಜಾತಿ, ಧರ್ಮಕ್ಕಿಂತ ಸಾಹಿತ್ಯ ಮಿಗಿಲು
ಕೊಡಗು

ಜಾತಿ, ಧರ್ಮಕ್ಕಿಂತ ಸಾಹಿತ್ಯ ಮಿಗಿಲು

July 27, 2018

ಸೋಮವಾರಪೇಟೆ:  ಕನ್ನಡ ಸಾಹಿತ್ಯಕ್ಕೆ ಜಾತಿ, ಜನಾಂಗಳೆಂಬ ಬೇಧಭಾವ ಗಳಿಲ್ಲ, ಸಾಹಿತ್ಯ ಎಂಬುದು ಜಾತಿ ಧರ್ಮಕ್ಕಿಂತ ಮಿಗಿಲಾದದ್ದು ಎಂದು ಹಿರಿಯ ಸಾಹಿತಿ ಡಾ.ಪ್ರಭಾಕರ್ ಶಿಶಿರ ಅಭಿಪ್ರಾಯಪಟ್ಟರು.

ಆಲೂರುಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಜಂಗಮರ ಶರಣೆ ಲಿಂಗೈಕ್ಯ ಶಾಂತಮ್ಮ ಪ್ರಧಾನ ವೇದಿಕೆಯಲ್ಲಿ ನಡೆದ 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಹಾಕಾವ್ಯಗಳ ಸೃಷ್ಟಿಯಾದಲ್ಲಿ ಮಾತ್ರ ಕನ್ನಡ ಭಾಷೆ, ಸಂಸ್ಕøತಿ, ಭಾಷಾ ಇತಿಹಾಸದ ಪರಂಪರೆಯನ್ನು ಉಳಿಸಿಕೊಳ್ಳಲು ಸಾಧ್ಯ. ಇಂತಹ ಸಾಹಿತ್ಯ, ಕಾವ್ಯ, ಶರಣ ಸಾಹಿತ್ಯಗಳ ಮೂಲಕ ಮಾನವ ಧರ್ಮವೇ ಮೂಲ ಧರ್ಮ ಎಂದು ಸಾರುತ್ತದೆ. ಕೊಡಗು ಜಿಲ್ಲೆ ತನ್ನದೇ ಆದ ಇತಿಹಾಸದೊಂದಿಗೆ ವಿಶಿಷ್ಠ ಸಂಸ್ಕøತಿಯನ್ನು ಹೊಂದಿದ್ದು, ಕ್ರೀಡೆ ಹಾಗೂ ದೇಶ ಸೇವೆ ಯಲ್ಲೂ ಹೆಸರು ಮಾಡಿದೆ ಎಂದರು.

12ನೇ ಶತಮಾನದಲ್ಲಿನ ಬಸವಣ್ಣ ಹಾಗೂ ನವಯುಗದ ಕುವೆಂಪು ಕನ್ನಡದ ನಿಜವಾದ ಸಾಹಿತಿಗಳಾಗಿದ್ದು, ಇವರು ಯಾವುದೇ ಜಾತಿ ಜನಾಂಗಗಳಿಗೆ ಮೀಸಲಾಗಿರಲಿಲ್ಲ. ಅವರ ಸಂದೇಶಗಳನ್ನು ನಾವೆಲ್ಲರೂ ಪಾಲನೆ ಮಾಡಿದಲ್ಲಿ ಸಮಾಜದಲ್ಲಿ ಜಾತಿ ಧರ್ಮಗಳಲ್ಲಿನ ಕಲಹ ನಡೆಯುತ್ತಿರಲಿಲ್ಲ. ಜಿಲ್ಲೆಯಲ್ಲಿ ಅನೇಕ ಸಾಹಿತಿ ಕವಿಗಳಿದ್ದಾರೆ, ಆದರೆ, ಪ್ರತಿಭೆ ಅನಾವರಣಕ್ಕೆ ಪ್ರಕಾಶಕರ, ಮುದ್ರಕರ ಹಾಗೂ ಮಾರುಕಟ್ಟೆ ಕೊರತೆ ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನಗಳು ನಡೆಯುವಾಗ ಪುಸ್ತಕ ಮಳಿಗೆಗಳನ್ನು ತೆರೆದಲ್ಲಿ ಮಾತ್ರ ಯುವ ಬರಹಗಾರರಿಗೆ ಹೆಚ್ಚಿನ ಅನುಕೂಲವಾಗುವುದು ಎಂದರು.

ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀಶಾಂತಮಲ್ಲಿ ಕಾರ್ಜುನ ಸ್ವಾಮೀಜಿ ಮಾತನಾಡಿ, ಇತಿ ಹಾಸ, ಸಾಹಿತ್ಯ ಮತ್ತು ಸಂಸ್ಕೃತಿ ಧರ್ಮ ಜಾತಿ ಜನಾಂಗಕ್ಕಿಂತ ದೊಡ್ಡದು, ಭಾಷಾ ಬೆಳವಣಿಗೆಯ ದೃಷ್ಟಿಯಿಂದ ಕನ್ನಡ ಸಾಹಿತ್ಯ ಜಾತ್ರೆಯನ್ನು ನಡೆಸಲಾಗುತ್ತದೆ.

ಭಾಷೆಗಳಲ್ಲಿ ಕನ್ನಡ ಭಾಷೆ ಹೆಚ್ಚು ಶ್ರೀಮಂತ ಭಾಷೆಯಾಗಿದ್ದು, ಹೃದಯ ಶ್ರೀಮಂತಿಕೆಯನ್ನು ಹೊಂದಿದೆ. ಜಿಲ್ಲೆಯಲ್ಲಿ ಮೂಲ ನಿವಾಸಿಗಳು ಸೇರಿದಂತೆ ಎಲ್ಲಾ ಭಾಷಿಕರು ಭಾಷಾ ಬೆಳವಣಿಗೆಗೆ ತನ್ನದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಆದರೆ, ಜಾಗತಿಕ ವೇಗದಲ್ಲಿ ಸಿಲುಕಿ ಸ್ಥಳೀಯ ಭಾಷೆ, ಸಂಸ್ಕೃತಿಯೊಂದಿಗೆ ಮೂಲ ನಿವಾಸಿಗಳು ಕಣ್ಮರೆಯಾಗುತ್ತಿದ್ದಾರೆ, ಈ ದಿಸೆಯಲ್ಲಿ ಅರ್ಥಪೂರ್ಣವಾಗಿ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವ ಮೂಲಕ ಮೂಲ ಪರಂಪರೆಯನ್ನು ಉಳಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ನಿಕಟಪೂರ್ವ ಸಮ್ಮೇಳನದ ಅಧ್ಯಕ್ಷ ಚಂದ್ರಶೇಖರ್ ಮಲ್ಲೋರಹಟ್ಟಿ ಮಾತನಾಡಿ, ಕನ್ನಡ ಸಾಹಿತ್ಯ ಸಾಹಿತ್ಯಾತ್ಮಕವಾಗಿ ಮುಂದೆ ಸಾಗುತ್ತಿದ್ದರೂ ಭಾಷಾ ಬೆಳವಣಿಗೆಯ ಬಗ್ಗೆ ಜನರಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ, ವಿದ್ಯಾರ್ಥಿ ಗಳು, ಯುವ ಜನಾಂಗ ಹೆಚ್ಚು ಹೆಚ್ಚು ಪುಸ್ತಕ ಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಬೇಕಿದೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ, ಇತಿಹಾಸವನ್ನು ಬಿಂಬಿಸುವ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಜೀವನ ದಲ್ಲಿ ರೂಢಿಸಿಕೊಳ್ಳಬೇಕೆಂದರು.

ಹಿರಿಯ ಸಾಹಿತಿ ಮೋಹನ್‍ಪಾಳೇಗಾರ ಮಾತನಾಡಿ, ಕೊಡಗು ಜಿಲ್ಲೆ ಸಾಹಿತ್ಯ ಕ್ಷೇತ್ರಕ್ಕೂ ಕೊಡುಗೆಯನ್ನು ನೀಡಿದೆ, ಆದರೆ ಮುದ್ರಣದ ಕೊರತೆ ಇದೆ, ಸಾಹಿತ್ಯವನ್ನು ಓದುವ ಅಭ್ಯಾಸ ವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು, ತಮ್ಮ ಮನೆಗಳಲ್ಲಿ ಕತೆ, ಕಾದಂಬರಿ, ಕನ್ನಡದ ಕೃತಿ ಗಳನ್ನು ಕೊಳ್ಳುವ ಮೂಲಕ ಗ್ರಂಥಾಲಯ ವನ್ನಾಗಿ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮವನ್ನು ಮಾಹಿತಿ ಹಕ್ಕು ಆಯೋ ಗದ ನಿವೃತ್ತ ಆಯುಕ್ತ ಜೆ.ಎಸ್.ವಿರೂಪಾ ಕ್ಷಯ್ಯ ಉದ್ಘಾಟಿಸಿದರು. ಸಮ್ಮೇಳನದ ಯಶ ಸ್ವಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯೆ ಮಾತನಾಡಿದರು. ಅಧ್ಯಕ್ಷತೆ ಯನ್ನು ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್ ವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್.ಲೋಕೇಶ್‍ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿಗೋಪಾಲ್, ಸದಸ್ಯೆ ಸರೋಜಮ್ಮ, ಕುಮುದಾ ಧರ್ಮಪ್ಪ, ಕಲ್ಲು ಮಠದ ಶ್ರೀ ಮಹಾಂತಸ್ವಾಮೀಜಿ, ತಾಪಂ ಸದಸ್ಯೆ ಲೀಲಾವತಿ, ಗ್ರಾಪಂ ಅಧ್ಯಕ್ಷೆ ವೀಣಾ, ಸ್ವಾಗತ ಸಮಿತಿ ಅಧ್ಯಕ್ಷ ಸಿ.ಕೆ.ಚಂದ್ರಶೇಖರ್, ಗ್ರಾಮದ ಹಿರಿಯ ಜೆ.ಎಸ್.ಸಿದ್ದಮಲ್ಲಯ್ಯ, ಕಸಾಪ ಕೋಶಾಧಿಕಾರಿ ಎಸ್.ಎ.ಮುರುಳೀ ಧರ್, ಸಮಾಜ ಕಲ್ಯಾಣ ಜಿಲ್ಲಾ ಅಧಿಕಾರಿ ಮಾಯದೇವಿ ಗಲಗಲಿ, ಉಪನ್ಯಾಸಕ ಕೆ.ಪಿ. ಜಯಕುಮಾರ್, ಕಸಾಪದ ಜವರಪ್ಪ, ವಸತಿ ಶಾಲಾ ಪ್ರಾಂಶುಪಾಲೆ ಕೆ.ಎನ್.ಭಾರತಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ, ಗ್ರಾಪಂ ಪಿಡಿಒ ಚಂದ್ರೇಗೌಡ ಮುಂತಾದವರು ಇದ್ದರು.

Translate »