ಗುರುಪೂರ್ಣಿಮಾ ಪ್ರಯುಕ್ತ ನಾಳೆ ವಿವಿಧ ಧಾರ್ಮಿಕ ಕಾರ್ಯ
ಮೈಸೂರು

ಗುರುಪೂರ್ಣಿಮಾ ಪ್ರಯುಕ್ತ ನಾಳೆ ವಿವಿಧ ಧಾರ್ಮಿಕ ಕಾರ್ಯ

July 26, 2018

ಮೈಸೂರು: ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕ ಸೇವಾ ಟ್ರಸ್ಟ್ ವತಿಯಿಂದ ಗುರುಪೂರ್ಣಿಮಾ ಪ್ರಯುಕ್ತ ಜು.27ರಂದು ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟಿ ಮಂಜುನಾಥ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಲನಹಳ್ಳಿಯ ರುಕ್ಮಿಣಿ ರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಶ್ರೀ ಅರ್ಜುನ ಅವಧೂತರ ನೇತೃತ್ವದಲ್ಲಿ ಬೆಳಿಗ್ಗೆ 6 ಗಂಟೆಯ ಕಾಕಡಾರತಿಯಿಂದ ಗುರುಪೂರ್ಣಿಮಾ ಕಾರ್ಯಕ್ರಮಗಳು ಆರಂಭವಾಗಲಿದೆ. ನಂತರ ಗಣಪತಿ, ದಕ್ಷಿಣಾ ಮೂರ್ತಿ, ದತ್ತಾತ್ರೇಯ ಹೋಮಗಳು, ಅಭಿಷೇಕ, ದೀಪಾಲಂಕಾರ, ಉಯ್ಯಾಲೋತ್ಸವ ನಡೆಯಲಿವೆ. ಅಂದು ಬೆಳಿಗ್ಗೆ 10.30ಕ್ಕೆ ಮೈತ್ರಿ, ಆಶಾಕಿರಣ ವಿಶೇಷ ಶಾಲಾ ಮಕ್ಕಳ ಪೂಜೆ ಹಾಗೂ ಸುಮಂಗಲಿಯರ ಪಾದಪೂಜೆ ಏರ್ಪಡಿಸಲಾಗಿದೆ ಎಂದರು. ಗೋಷ್ಠಿಯಲ್ಲಿ ಟ್ರಸ್ಟಿಗಳಾದ ಡಾ.ಮಹೇಶ್ ರಾವ್, ಚಂದ್ರಶೇಖರ್, ರಾಘವೇಂದ್ರರಾವ್ ಇದ್ದರು.

Translate »