ಕಿಡಿಗೇಡಿಗಳಿಂದ ಕುಡಿಯುವ ನೀರಿಗೆ ಸಂಚಕಾರ
ಕೊಡಗು

ಕಿಡಿಗೇಡಿಗಳಿಂದ ಕುಡಿಯುವ ನೀರಿಗೆ ಸಂಚಕಾರ

August 8, 2018

ಗೋಣಿಕೊಪ್ಪಲು:  ಕಣ್ಣಂಗಾಲ ಗ್ರಾಪಂ ವ್ಯಾಪ್ತಿಯ ದೇವರಮೊಟ್ಟೆ ಪೈಸಾರಿಯ ಸಾರ್ವಜನಿ ಕರ ಕುಡಿಯುವ ನೀರಿನ ಸರಬರಾಜು ಪೈಪ್‍ಲೈನ್ ಅನ್ನು ಆಗಿಂದ್ದಾಗ್ಗೆ ಕಿಡಿಗೇಡಿಗಳು ಒಡೆದು ಹಾಕುತ್ತಿರುವ ಹಿನ್ನಲೆಯಲ್ಲಿ ಪಂಚಾಯ್ತಿಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ, ಈ ಬಗ್ಗೆ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕೆಂದು ಅಮ್ಮತ್ತಿ ಉಪ ಠಾಣೆಯ ಠಾಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ನಿರಂತರವಾಗಿ ಈ ಭಾಗದ ಜನರನ್ನು ಗುರಿಯಾಗಿ ಇಟ್ಟುಕೊಂಡಿರುವ ಕೆಲವು ಕಿಡಿಗೇಡಿಗಳು ಈ ರೀತಿ ಪೈಪ್ ಲೈನ್‍ಅನ್ನು ಹಾಳು ಮಾಡುತ್ತಿದ್ದು ಈ ಪೈಪ್ ಲೈನ್ ದುರಸ್ಥಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡ ಲಾಗಿದೆ. ಪೈಪ್ ಲೈನ್ ದುರಸ್ಥಿಯಿಂದ ಕುಡಿಯುವ ನೀರಿಗೆ ತೊಂದರೆ ಉಂಟಾಗುವುದನ್ನು ತಪ್ಪಿಸಲು ಪೊಲೀಸ್ ಪುಕಾರು ನೀಡಲಾಗಿದೆ ಎಂದು ಪಂಚಾಯಿತಿ ಉಪಾಧ್ಯಕ್ಷ ಮನೋಜ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Translate »