ಇಬ್ಬರು ಬೇಟೆಗಾರರ ಬಂಧನ
ಕೊಡಗು

ಇಬ್ಬರು ಬೇಟೆಗಾರರ ಬಂಧನ

August 8, 2018

ಮಡಿಕೇರಿ: ತಲಕಾವೇರಿಯ ಬ್ರಹ್ಮಗಿರಿ ರಕ್ಷಿತಾರಣ್ಯದೊಳಗೆ ಅಕ್ರಮವಾಗಿ ಪ್ರವೇಶಿಸಿ ಕಾಡು ಪ್ರಾಣಿಯನ್ನು ಭೇಟಿಯಾಡಲು ಯತ್ನಿಸುತ್ತಿದ್ದ ಇಬ್ಬರು ಬೇಟೆಗಾರರನ್ನು ಭಾಗಮಂಡಲ ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಭಾಗಮಂಡಲ ಸಮೀಪದ ಚೇರಂಗಾಲ ಗ್ರಾಮ ನಿವಾಸಿಗಳಾದ ಪದ್ಮಯ್ಯ ಮತ್ತು ರೋಹಿತ್ ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ.

ಪದ್ಮಯ್ಯ ಮತ್ತು ರೋಹಿತ್ ಚೇರಂಗಾಲ ಸಮೀಪದ ಕೋಳಿಕಾಡು ಎಂಬಲ್ಲಿ ಕಾಡು ಪ್ರಾಣಿಯನ್ನು ಭೇಟಿಯಾಡಲು ಹೊಂಚು ಹಾಕಿದ್ದರು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಭಾಗಮಂಡಲ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಬಂಧಿತರಿಂದ ಒಂಟಿ ನಳಿಗೆಯ ನಾಡ ಬಂದೂಕು, ಜೀವಂತ ಕಾಡತೂಸುಗಳು, ಕತ್ತಿ ಮತ್ತು ಇತರ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಗಳ ವಿರುದ್ಧ ‘ಶಸ್ತ್ರಾಸ್ತ್ರ ಸಹಿತ ಅಕ್ರಮ ಅರಣ್ಯ ಪ್ರವೇಶ’ ಹಾಗೂ ‘ವನ್ಯ ಜೀವಿ ಸಂರಕ್ಷಣಾ ಕಾಯಿದೆ 1972’ ಅಡಿಯಲ್ಲಿ ಪ್ರಕರಣ ದಾಖಲಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

Translate »