ಕುಟ್ಟ ಬಳಿ ಹುಲಿ ದಾಳಿಗೆ ಹಸು ಬಲಿ
ಕೊಡಗು

ಕುಟ್ಟ ಬಳಿ ಹುಲಿ ದಾಳಿಗೆ ಹಸು ಬಲಿ

August 8, 2018

ಗೋಣಿಕೊಪ್ಪಲು: ದಕ್ಷಿಣ ಕೊಡ ಗಿನ ಕುಟ್ಟ ಪಂಚಾಯ್ತಿ ವ್ಯಾಪ್ತಿಯ ಮಂಚಳ್ಳಿ ಗ್ರಾಮದಲ್ಲಿ ಹುಲಿ ದಾಳಿ ನಡೆದಿದ್ದು, ಹಸುವೊಂದು ಬಲಿಯಾಗಿದೆ. ಕಳೆದ ಮೂರು ದಿನಗಳ ಹಿಂದೆ ರೈತ ಮುಂಡುಮಾಡ ಅಯ್ಯಣ್ಣ ಎಂಬುವರ ಹಸು ಕಾಣೆಯಾಗಿತ್ತು. ಈ ಬಗ್ಗೆ ಸಮೀಪದ ತೋಟದಲ್ಲಿ ಹುಡುಕಾಟ ನಡೆಸಿ ದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸುದ್ದಿ ತಿಳಿದ ರೈತ ಸಂಘದ ಮುಖಂಡ ರಾದ ಅಜ್ಜಮಾಡ ಚಂಗಪ್ಪ, ಅರಣ್ಯ ಹಿರಿಯ ಅಧಿಕಾರಿಗಳಾದ ಡಿಸಿಎಫ್ ಜಯಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಹುಲಿ ದಾಳಿಯ ಬಗ್ಗೆ ಮಾಹಿತಿ ಒದಗಿಸಿದರು. ಕೂಡಲೇ ಹಸು ಕಳೆದುಕೊಂಡ ಕುಟುಂಬಕ್ಕೆ ಪರಿಹಾರ ವಿತರಿಸುವಂತೆ ಮನವಿ ಮಾಡಿದ್ದಾರೆ. ಕೂಡಲೇ ಪರಿಹಾರ ಬಿಡುಗಡೆ ಮಾಡುವುದಾಗಿ ಹಿರಿಯ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಸ್ಥಳಕ್ಕೆ ಶ್ರೀಮಂಗಲ ವಲಯ ಅಧಿಕಾರಿ ವೀರೆಂದ್ರ ಹಾಗೂ ಸಿಬ್ಬಂದಿಗಳು ತೆರಳಿ ಮಹಜರು ನಡೆಸಿದ್ದಾರೆ.

Translate »