ಕಾಡಾನೆ ದಾಳಿಗೆ ಎತ್ತು ಬಲಿ
ಕೊಡಗು

ಕಾಡಾನೆ ದಾಳಿಗೆ ಎತ್ತು ಬಲಿ

June 23, 2018

ನಾಪೋಕ್ಲು :  ಮನೆ ಸಮೀ ಪದ ಕೊಟ್ಟಿಗೆಯಲ್ಲ್ಲಿ ಕಟ್ಟಿಹಾಕಿದ್ದ ಎತ್ತನ್ನು ಆನೆ ತುಳಿದು ಕೊಂದು ಹಾಕಿ ರುವ ಘಟನೆ ಸಮೀಪದ ಚೇಲಾವರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಬಟ್ಟಚೆರುವಂಡ ಚಿಟ್ಟಿಯಪ್ಪ ತಮ್ಮ ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ಎತ್ತನ್ನು ರಾತ್ರಿ ಕಟ್ಟಿ ಹಾಕಿದ್ದರು. ರಾತ್ರಿ ಅಲ್ಲಿಗೆ ಆಗಮಿಸಿದ ಕಾಡಾನೆಗಳು ಎತ್ತನ್ನು ತುಳಿದು ಕೊಂದು ಹಾಕಿವೆ. ರಾತ್ರಿ ಮೂರು ಗಂಟೆಯ ವೇಳೆಗೆ ಒಂದು ಮರಿಯಾನೆ ಸೇರಿದಂತೆ ಎರಡು ಕಾಡಾನೆಗಳು ಹಸುವನ್ನು ಅನತಿದೂರದವರೆಗೆ ಎಳೆದುಕೊಂಡು ಹೋಗಿ ತುಳಿದು ಸಾಯಿಸಿವೆ. ಸುತ್ತಮುತ್ತ ಲಿನ ಕಾಫಿ ಗಿಡಗಳು ನಾಶವಾಗಿದ್ದು, ಈ ಬಗ್ಗೆ ಈ ವ್ಯಾಪ್ತಿಯ ಗ್ರಾಮಸ್ಥರು ಆತಂಕ್ಕೆ ಒಳಗಾಗಿದ್ದು, ನಷ್ಟಕ್ಕೆ ಪರಿಹಾರ ನೀಡುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಈ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಕಾಡಾನೆಗಳು ಹಗಲು ರಾತ್ರಿ ಎನ್ನದೆ ಓಡಾಡುತ್ತಿದ್ದು ಗ್ರಾಮಸ್ಥರು ಭಯದಿಂದ ಜೀವಿಸುವಂತಾಗಿದೆ ಶಾಲಾ ಮಕ್ಕಳು ಶಾಲೆಗೆ ತೆರಳಲು ಭಯಪಡುವಂತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

Translate »