Tag: elephants

ಇಂದು ಸ್ವಸ್ಥಾನಗಳಿಗೆ ಮರಳಲಿರುವ ಜಂಬೂ ಸವಾರಿ ಯಶಸ್ಸಿನ ರೂವಾರಿಗಳು
ಮೈಸೂರು, ಮೈಸೂರು ದಸರಾ

ಇಂದು ಸ್ವಸ್ಥಾನಗಳಿಗೆ ಮರಳಲಿರುವ ಜಂಬೂ ಸವಾರಿ ಯಶಸ್ಸಿನ ರೂವಾರಿಗಳು

October 21, 2018

ಮೈಸೂರು: ಅಪಾರ ಸಂಖ್ಯೆಯ ಜನಸಾಗರದ ನಡುವೆ ಜಂಬೂಸವಾರಿ ಮೆರವಣಿಗೆಯಲ್ಲಿ ಯಶಸ್ವಿ ಯಾಗಿ ಹೆಜ್ಜೆ ಹಾಕಿದ್ದ ಅರ್ಜುನ ನೇತೃ ತ್ವದ ಗಜಪಡೆ ನಾಳೆ (ಭಾನುವಾರ) ಸ್ವಸ್ಥಾನಗಳಿಗೆ ಮರಳಲಿದೆ. ಜಂಬೂ ಸವಾರಿ ಮಾರನೇ ದಿನವಾದ ಶನಿವಾರ ಇಡೀ ದಿನ ರಿಲ್ಯಾಕ್ಸ್ ಮೂಡ್‍ನಲ್ಲಿತ್ತು. ದಸರಾ ಮಹೋತ್ಸವದಲ್ಲಿ ಪಾಲ್ಗೊ ಳ್ಳಲು ಸೆ.2ರಂದು ಹುಣಸೂರು ತಾಲೂ ಕಿನ ವೀರನಹೊಸಳ್ಳಿಯಿಂದ ಗಜಪಡೆಯ ನಾಯಕ ಅರ್ಜುನ ನೇತೃತ್ವದಲ್ಲಿ ಆರು ಆನೆ ಮೈಸೂರಿನ ಅಶೋಕಪುರಂ ಅರಣ್ಯ ಭವನಕ್ಕೆ ಬಂದು ಬೀಡು ಬಿಟ್ಟು, ಸೆ.5 ರಂದು ಅರಮನೆಯ ಆವರಣ ಪ್ರವೇಶಿ…

ಪೂಜ್ಯ ಭಾವನೆಗೆ  ಪಾತ್ರವಾಗುತ್ತಿದೆ ಆನೆ ಲದ್ದಿ
ಮೈಸೂರು

ಪೂಜ್ಯ ಭಾವನೆಗೆ ಪಾತ್ರವಾಗುತ್ತಿದೆ ಆನೆ ಲದ್ದಿ

September 24, 2018

ಮೈಸೂರು: ಗಣಪತಿಯ ನೈಜ ರೂಪ ಎಂದು ಪೂಜಿಸಲ್ಪಡುವ ಆನೆಗಳಂತೆ ಅವುಗಳ ಲದ್ದಿಯನ್ನೂ ಪೂಜ್ಯ ಭಾವನೆಯಿಂದ ಕಾಣಲಾಗುತ್ತಿದ್ದು, ಔಷಧೀಯ ಗುಣಗಳನ್ನು ಹೊಂದಿರುವ ಆನೆ ಲದ್ದಿಗೆ ಎಲ್ಲಿಲ್ಲದ ಮಹತ್ವವಿದೆ. ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆ ಆವರಣ ದಲ್ಲಿ ಬೀಡು ಬಿಟ್ಟಿರುವ ಅರ್ಜುನ ನೇತೃತ್ವದ ದಸರಾ ಆನೆಗಳ ಲದ್ದಿಗೆ ಮೈಸೂರಿನ ಜನತೆ ಮುಗಿಬೀಳುತ್ತಿದ್ದು, ಮನೆಗಳಿಗೆ ಕೊಂಡೊಯ್ದು ಪೂಜಿಸುವುದಕ್ಕೆ ಹಂಬಲಿಸುತ್ತಿದ್ದಾರೆ. ಅರಮನೆಯಿಂದ ಬನ್ನಿಮಂಟಪ ದವರೆಗೆ ತಾಲೀಮಿಗೆ ಬರುವ ಆನೆಗಳು ಮಾರ್ಗ ಮಧ್ಯೆ ಲದ್ದಿ ಹಾಕಿದ್ದಾಗ ಅದನ್ನು ಕೆಲವರು ಮನೆಗೆ ಕೊಂಡೊಯ್ಯಲು ಮುಂದಾದರೆ,…

ಕೆ.ಎಸ್.ಆರ್.ಟಿ.ಸಿ  ಬಸ್ ಮೇಲೆ ಆನೆ ದಾಳಿ
ಚಾಮರಾಜನಗರ

ಕೆ.ಎಸ್.ಆರ್.ಟಿ.ಸಿ ಬಸ್ ಮೇಲೆ ಆನೆ ದಾಳಿ

June 26, 2018

ಬಂಡೀಪುರ ಅರಣ್ಯದ ಮದ್ದೂರು ರೇಂಜ್‍ನಲ್ಲಿ ಘಟನೆ ಮರಿಯಾನೆ ರಕ್ಷಿಸಲು ದಾಳಿಗೆ ಮುಂದಾದ ತಾಯಿ ಆನೆ ಗುಂಡ್ಲುಪೇಟೆ: ಮರಿ ಯೊಂದಿಗೆ ಆನೆಗಳ ಹಿಂಡೊಂದು ರಸ್ತೆ ದಾಟುವ ವೇಳೆ ಬಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದನ್ನು ತಾಯಿ ಆನೆ ಅಟ್ಟಾಡಿಸಿ ದಾಳಿ ನಡೆಸಲು ಮುಂದಾದ ಘಟನೆ ಮೈಸೂರು-ಸುಲ್ತಾನ್ ಬತೇರಿ ಮುಖ್ಯ ರಸ್ತೆಯ ಬಂಡೀಪುರ ಅರಣ್ಯದಲ್ಲಿ ನಡೆದಿದೆ. ಕೇರಳದ ಕ್ಯಾಲಿಕಟ್‍ನಿಂದ ಗುಂಡ್ಲು ಪೇಟೆ, ಮೈಸೂರು ಮಾರ್ಗವಾಗಿ ಚಿಕ್ಕ ಮಗಳೂರಿಗೆ ತೆರಳುತ್ತಿದ್ದ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಭಾನುವಾರ ಸಂಜೆ…

ಕಾಡಾನೆ ದಾಳಿಗೆ ಎತ್ತು ಬಲಿ
ಕೊಡಗು

ಕಾಡಾನೆ ದಾಳಿಗೆ ಎತ್ತು ಬಲಿ

June 23, 2018

ನಾಪೋಕ್ಲು :  ಮನೆ ಸಮೀ ಪದ ಕೊಟ್ಟಿಗೆಯಲ್ಲ್ಲಿ ಕಟ್ಟಿಹಾಕಿದ್ದ ಎತ್ತನ್ನು ಆನೆ ತುಳಿದು ಕೊಂದು ಹಾಕಿ ರುವ ಘಟನೆ ಸಮೀಪದ ಚೇಲಾವರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಟ್ಟಚೆರುವಂಡ ಚಿಟ್ಟಿಯಪ್ಪ ತಮ್ಮ ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ಎತ್ತನ್ನು ರಾತ್ರಿ ಕಟ್ಟಿ ಹಾಕಿದ್ದರು. ರಾತ್ರಿ ಅಲ್ಲಿಗೆ ಆಗಮಿಸಿದ ಕಾಡಾನೆಗಳು ಎತ್ತನ್ನು ತುಳಿದು ಕೊಂದು ಹಾಕಿವೆ. ರಾತ್ರಿ ಮೂರು ಗಂಟೆಯ ವೇಳೆಗೆ ಒಂದು ಮರಿಯಾನೆ ಸೇರಿದಂತೆ ಎರಡು ಕಾಡಾನೆಗಳು ಹಸುವನ್ನು ಅನತಿದೂರದವರೆಗೆ ಎಳೆದುಕೊಂಡು ಹೋಗಿ ತುಳಿದು ಸಾಯಿಸಿವೆ. ಸುತ್ತಮುತ್ತ ಲಿನ ಕಾಫಿ…

Translate »