ಮನೆ ಮೇಲೆ ಉರುಳಿ ಬಿದ್ದ ಆಟೋ
ಕೊಡಗು

ಮನೆ ಮೇಲೆ ಉರುಳಿ ಬಿದ್ದ ಆಟೋ

June 23, 2018

ಮಡಿಕೇರಿ: ಗೂಡ್ಸ್ ಆಟೋವೊಂದು ಬ್ರೇಕ್ ವಿಫಲಗೊಂಡು ಮನೆ ಯೊಂದರ ಮೇಲೆ ಉರುಳಿ ಬಿದ್ದಿದ್ದು, ಮನೆಯೊಳಗಿದ್ದ ತಾಯಿ ಮಗು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ನಗರದ ತ್ಯಾಗರಾಜ್ ಕಾಲೋನಿಯ ಹಫೀಜ್ ಎಂಬವರಿಗೆ ಸೇರಿದ ಮನೆಯ ಮೇಲೆ ಆಟೋ ಉರುಳಿ ಬಿದ್ದ ಪರಿಣಾಮ ಮನೆಗೆ ಹಾನಿಯಾಗಿದೆ.

ಹಫೀಜ್ ಅವರ ಮನೆಯಲ್ಲಿ ಕವಿತಾ ಎಂಬವರು ಬಾಡಿಗೆಗೆ ವಾಸವಿದ್ದು, ಗುರು ವಾರ ರಾತ್ರಿ 9.30ರ ಸಮಯ ತನ್ನ ಮಗುವಿನೊಂದಿಗೆ ಗಾಢ ನಿದ್ರೆಯಲ್ಲಿದ್ದರು. ಈ ಸಂದರ್ಭ ಮನೆಯ ಮೇಲೆ ಗೂಡ್ಸ್ ಆಟೋ ರಿಕ್ಷಾ ಉರುಳಿ ಬಿದ್ದಿದೆ. ಇದ ರಿಂದಾಗಿ ಮನೆಯ ಮುಂದಿನ ಮೇಲ್ಚಾ ವಣ ಮುರಿದು ಹೋಗಿದ್ದು, ಮನೆಯ ಗೋಡೆ ಬಿರುಕು ಬಿಟ್ಟು ವಾಲಿಕೊಂಡಿದೆ.

ತಕ್ಷಣವೇ ಮನೆಯಿಂದ ತನ್ನ ಮಗು ವಿನೊಂದಿಗೆ ಹೊರಗೆ ಓಡಿ ಬಂದ ಕವಿತಾ ಪ್ರಾಣಾಪಾಯಾದಿಂದ ಪಾರಾಗಿದ್ದಾರೆ. ಆಟೋ ಚಾಲಕ ಶಕೀಲ್ ಎಂಬುವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ವಿಷಯ ಅರಿತ ನಗರಸಭಾ ಪೌರಾಯುಕ್ತೆ ಶುಭಾ ಮತ್ತು ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಸ್ಥಳ ಪರಿಶೀಲನೆ ನಡೆಸಿದರು. ವಾರ್ಡ್ ಸದಸ್ಯ ಅಮೀನ್ ಮೊಹಿಸೀನ್ ಮಾತ ನಾಡಿ, ಈ ಪ್ರದೇಶದಲ್ಲಿ ತಡೆಗೋಡೆ ಇಲ್ಲದಿರುವುದೇ ಈ ದುರಂತ ಸಂಭವಿಸಲು ಕಾರಣವಾಗಿದ್ದು, ತಕ್ಷಣವೇ ತುರ್ತು ಕಾಮಗಾರಿ ಅಡಿಯಲ್ಲಿ ತಡೆಗೋಡೆ ನಿರ್ಮಿಸಲು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ

Translate »