ಗುಂಡು ಹೊಡೆದುಕೊಂಡು ಬೆಳೆಗಾರ ಆತ್ಮಹತ್ಯೆ
ಕೊಡಗು

ಗುಂಡು ಹೊಡೆದುಕೊಂಡು ಬೆಳೆಗಾರ ಆತ್ಮಹತ್ಯೆ

June 13, 2018

ಮಡಿಕೇರಿ:  ಸಾಲಬಾಧೆಯಿಂದ ಮನನೊಂದ ಕಾಫಿ ಬೆಳೆಗಾರ ರೋರ್ವರು ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಪೋಕ್ಲು ಪೇರೂರು ಗ್ರಾಮದಲ್ಲಿ ನಡೆದಿದೆ.

ನಾಪೋಕ್ಲು ಸಮೀಪದ ಪೇರೂರು ಗ್ರಾಮದ ನಿವಾಸಿ ಮಚ್ಚೂರ ಪವನ್ ಮಂದಣ್ಣ(67) ಎಂಬವರೆ ಆತ್ಮಹತ್ಯೆಗೆ ಶರಣಾದ ಬೆಳೆಗಾರರಾಗಿದ್ದಾರೆ. ಕೃಷಿಗಾಗಿ ಸಾಲ ಮಾಡಿದ್ದ ಮಚ್ಚೂರ ಪವನ್ ಮಂದಣ್ಣ ಸಾಲ ತೀರಿಸಲಾಗದೆ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇಂದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕೋವಿಯಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.

ತಕ್ಷಣವೇ ನೆರೆಹೊರೆಯವರು ಮಂದಣ್ಣ ಅವರನ್ನು ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಮೃತರು ಪತ್ನಿ ಮತ್ತು ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಈ ಕುರಿತು ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Translate »