ಪಾಂಡವಪುರ: ಸಾಲ ಬಾಧೆ ತಾಳಲಾರದೇ ಒಂದೇ ಕುಟುಂಬದ ನಾಲ್ವರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಶನಿವಾರ ತಾಲೂಕಿನ ಸುಂಕಾತೊಣ್ಣೂರು ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೂ ಮುನ್ನ ಪತ್ರ ಬರೆದಿಡಲಾಗಿದೆ. ಗ್ರಾಮದ ಕೆಂಪೇಗೌಡರ ಪುತ್ರ ನಂದೀಶ್(40), ಪತ್ನಿ ಕೋಮಲ (32), ಪುತ್ರಿ ಚಂದನ(13) ಪುತ್ರ ಮನೋಜ್(11) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದವರು. ಘಟನೆ ವಿವರ: ರೈತ ನಂದೀಶ್, ಗ್ರಾಮದ ಹೊರವಲಯದಲ್ಲಿರುವ ತಮ್ಮ 3 ಎಕರೆ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ಪತ್ನಿ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದರು. ತಮ್ಮ ಜಮೀನಿನಲ್ಲಿ ವ್ಯವಸಾಯ…
ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ
August 31, 2018ಹೊಳೆನರಸೀಪುರ: ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ತಾಲೂಕಿನ ಹಿರೇಬೆಳಗುಲಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ವಾಸಿ ಬಸವಲಿಂಗಪ್ಪ(41) ಮೃತ ರೈತ. ಇವರು ತಮ್ಮ 4 ಎಕರೆ ಜಮೀನಿನಲ್ಲಿ ಜೋಳ, ಶುಂಠಿ ಬೇಸಾಯ ಮಾಡಿದ್ದರು. ಇದಕ್ಕಾಗಿ ವಿವಿಧ ಮಹಿಳಾ ಸ್ವಸಹಾಯ ಸಂಘಗಳಿಂದ ಒಟ್ಟು 1.90 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಬೆಳೆ ನಷ್ಟದ ಪರಿಣಾಮ ಬೇಸತ್ತ ಬಸವಲಿಂಗಪ್ಪ ವಿಷ ಸೇವಿಸಿ ಅಸ್ವಸ್ಥ ಗೊಂಡಿದ್ದರು. ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹಾಸನ ಜಿಲ್ಲಾಸ್ಪತ್ರೆಗೆ…
ಸಾಲಬಾಧೆ: ಸಿಎಂ ತವರು ಜಿಲ್ಲೆಯಲ್ಲೇ ರೈತರಿಬ್ಬರ ಆತ್ಮಹತ್ಯೆ!
August 2, 2018ಹಾಸನ: ಸಾಲಬಾಧೆ ತಾಳ ಲಾರದೆ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಿಎಂ ತವರು ಜಿಲ್ಲೆಯ ಚನ್ನರಾಯಪಟ್ಟಣ ಹಾಗೂ ಬೇಲೂರು ತಾಲೂಕಿನಲ್ಲಿ ನಡೆದಿದೆ. ಬೇಲೂರು ತಾಲೂಕಿನ ಗೊಣಿಸೋಮನ ಹಳ್ಳಿಯ ರಮೇಶಯ್ಯ(60) ಚನ್ನರಾಯ ಪಟ್ಟಣ ತಾಲೂಕಿನ ಮರವನಹಳ್ಳಿಯ ಗೌಡೇಗೌಡ(58) ಮೃತ ರೈತರು. ರಮೇಶಯ್ಯ ಸಹಕಾರ ಬ್ಯಾಂಕ್ ಸಾಲ ಸೇರಿದಂತೆ 5 ಲಕ್ಷ ಕ್ಕೂ ಅಧಿಕ ಕೈ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಹಳೇ ಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಮರವನ ಹಳ್ಳಿಯ ಗೌಡೇಗೌಡ ಸಾಲಕ್ಕೆ ಹೆದರಿ…
ದೇಮಹಳ್ಳಿ ರೈತ ಚಿಕ್ಕಸ್ವಾಮಿ ಆತ್ಮಹತ್ಯೆ ಪ್ರಕರಣ: ಮೃತನ ಕುಟುಂಬಕ್ಕೆ 25 ಲಕ್ಷ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ
July 6, 2018ಚಾಮರಾಜನಗರ: ತನ್ನ ಸಾಲಮನ್ನಾ ಆಗಲಿಲ್ಲ ಎಂದು ತಾಲೂಕಿನ ದೇಮಹಳ್ಳಿ ಗ್ರಾಮದ ರೈತನೋರ್ವ ಆತ್ಮಹತ್ಯೆಗೆ ಶರಣಾದ ಹಿನ್ನೆಲೆಯಲ್ಲಿ ಮೃತ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿ ರೈತ ಸಮುದಾಯ ಇಂದು ಸಂಜೆ ಹೆದ್ದಾರಿಯಲ್ಲಿ ಶವವಿಟ್ಟು ಬೃಹತ್ ಪ್ರತಿಭಟನೆ ನಡೆಸಿತು. ದೇಮಹಳ್ಳಿ ಗ್ರಾಮದ ರೈತ ಚಿಕ್ಕಸ್ವಾಮಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿ ಸಿದ ಸಾಲಮನ್ನಾ ಯೋಜನೆಯಲ್ಲಿ ತನ್ನ ಸಾಲ ಮನ್ನಾ ಆಗುವುದಿಲ್ಲ ಎಂದು ತಿಳಿದು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿ ಸಿದ್ದರು. ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ…
ಸಾಲಬಾಧೆಯಿಂದ ರೈತ ಮಹಿಳೆ ಆತ್ಮಹತ್ಯೆ
July 5, 2018ಬೈಲಕುಪ್ಪೆ: ಸಾಲಬಾಧೆಯಿಂದಾಗಿ ರೈತ ಮಹಿಳೆಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಿರಿಯಾಪಟ್ಟಣ ತಾಲೂಕು ತಿರುಮಲಾಪುರದಲ್ಲಿ ಇಂದು ನಡೆದಿದೆ. ಗ್ರಾಮದ ದಿವಂಗತ ಕೋರೇಗೌಡ ಎಂಬುವರ ಪತ್ನಿ ಪುಟ್ಟಮ್ಮ (77) ಆತ್ಮಹತ್ಯೆ ಮಾಡಿಕೊಂಡಿರುವ ರೈತ ಮಹಿಳೆ. ಒಂದು ಎಕರೆ ಜಮೀನು ಹೊಂದಿದ್ದ ಇವರು ಜೋಳದ ಫಸಲಿಗಾಗಿ ಹಾಗೂ ಖಾಯಿಲೆ ಬಿದ್ದಿದ್ದ ತಮ್ಮ ಮೊಮ್ಮಗನ ಆಸ್ಪತ್ರೆ ಚಿಕಿತ್ಸೆ ಖರ್ಚಿಗಾಗಿ ಸಾಲ ಮಾಡಿದ್ದರೆಂದು ವರದಿಯಾಗಿದೆ. ಸಾಲ ತೀರಿಸಲಾಗದೆ ಮನನೊಂದು ಬೈಲಕುಪ್ಪೆ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ…
ಗುಂಡು ಹೊಡೆದುಕೊಂಡು ಬೆಳೆಗಾರ ಆತ್ಮಹತ್ಯೆ
June 13, 2018ಮಡಿಕೇರಿ: ಸಾಲಬಾಧೆಯಿಂದ ಮನನೊಂದ ಕಾಫಿ ಬೆಳೆಗಾರ ರೋರ್ವರು ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಪೋಕ್ಲು ಪೇರೂರು ಗ್ರಾಮದಲ್ಲಿ ನಡೆದಿದೆ. ನಾಪೋಕ್ಲು ಸಮೀಪದ ಪೇರೂರು ಗ್ರಾಮದ ನಿವಾಸಿ ಮಚ್ಚೂರ ಪವನ್ ಮಂದಣ್ಣ(67) ಎಂಬವರೆ ಆತ್ಮಹತ್ಯೆಗೆ ಶರಣಾದ ಬೆಳೆಗಾರರಾಗಿದ್ದಾರೆ. ಕೃಷಿಗಾಗಿ ಸಾಲ ಮಾಡಿದ್ದ ಮಚ್ಚೂರ ಪವನ್ ಮಂದಣ್ಣ ಸಾಲ ತೀರಿಸಲಾಗದೆ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇಂದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕೋವಿಯಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ತಕ್ಷಣವೇ ನೆರೆಹೊರೆಯವರು ಮಂದಣ್ಣ ಅವರನ್ನು ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ…
ಸಾಲಬಾಧೆ: ರೈತ ಆತ್ಮಹತ್ಯೆ
June 5, 2018ಹಾಸನ: ಸಾಲಬಾಧೆಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ. ಹೊಳೆನರಸೀಪುರ ತಾಲೂಕಿನ ಜಿ.ಅಂಕನಹಳ್ಳಿಯಲ್ಲಿ ಗ್ರಾಮದ ಕುಮಾರ್(40) ಮೃತ ರೈತ. ಸಾಲಬಾಧೆಯಿಂದ ಬೇಸತ್ತು ಶನಿವಾರ ಸಂಜೆ ವಿಷ ಸೇವಿಸಿದ್ದರು. ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕುಮಾರ್ ಅಸಿನೀಗಿದ್ದಾರೆ. ಬ್ಯಾಂಕ್ ಸೇರಿದಂತೆ ಇತರೆಡೆಯಿಂದ 5 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.