ಹಾಸನ: ಸಾಲಬಾಧೆ ತಾಳ ಲಾರದೆ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಿಎಂ ತವರು ಜಿಲ್ಲೆಯ ಚನ್ನರಾಯಪಟ್ಟಣ ಹಾಗೂ ಬೇಲೂರು ತಾಲೂಕಿನಲ್ಲಿ ನಡೆದಿದೆ.
ಬೇಲೂರು ತಾಲೂಕಿನ ಗೊಣಿಸೋಮನ ಹಳ್ಳಿಯ ರಮೇಶಯ್ಯ(60) ಚನ್ನರಾಯ ಪಟ್ಟಣ ತಾಲೂಕಿನ ಮರವನಹಳ್ಳಿಯ ಗೌಡೇಗೌಡ(58) ಮೃತ ರೈತರು.
ರಮೇಶಯ್ಯ ಸಹಕಾರ ಬ್ಯಾಂಕ್ ಸಾಲ ಸೇರಿದಂತೆ 5 ಲಕ್ಷ ಕ್ಕೂ ಅಧಿಕ ಕೈ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಹಳೇ ಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಮರವನ ಹಳ್ಳಿಯ ಗೌಡೇಗೌಡ ಸಾಲಕ್ಕೆ ಹೆದರಿ ತನ್ನ ಜಮೀನಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇವರು 3 ಲಕ್ಷ ಕೈಸಾಲ ಹಾಗೂ ಪಿಎಲ್‍ಡಿ ಬ್ಯಾಂಕ್‍ನಲ್ಲಿ 70 ಸಾವಿರ ಸಾಲ ಸೇರಿ ಸುಮಾರು 5 ಲಕ್ಷ ರೂ.ನಷ್ಟು ಸಾಲ ಮಾಡಿಕೊಂಡಿದ್ದರು. ಚನ್ನರಾಯಪಟ್ಟಣದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.