ಆಟೋ ಪಲ್ಟಿ: 25 ವಿದ್ಯಾರ್ಥಿಗಳಿಗೆ ಗಾಯ
ಹಾಸನ

ಆಟೋ ಪಲ್ಟಿ: 25 ವಿದ್ಯಾರ್ಥಿಗಳಿಗೆ ಗಾಯ

August 2, 2018

ಆಲೂರು: ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಆಟೋ ಪಲ್ಟಿಯಾದ ಪರಿಣಾಮ 25ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ತಾಲೂಕಿನ ಚಿಕ್ಕಕಣಗಾಲು ಗ್ರಾಮದಲ್ಲಿ ನಡೆದಿದೆ.

ಪ್ರತಿಭಾ ಕಾರಂಜಿಗೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು, ಗಾಯಗೊಂಡವರು ತಾಲೂಕು ಕಣತೂರು ಪ್ರೌಢಶಾಲೆ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ದೊಡ್ಡ ಅನಾಹುತದಿಂದ ಸ್ವಲ್ಪದರಲ್ಲಿಯೇ ವಿದ್ಯಾರ್ಥಿಗಳು ಪಾರಾಗಿದ್ದು, ಸ್ಥಳೀಯರು ಗಾಯಾಳು ವಿದ್ಯಾರ್ಥಿಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು. ಆಲೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ನಡೆದಿದೆ.

Translate »