Tag: Alur

ಆಟೋ ಪಲ್ಟಿ: 25 ವಿದ್ಯಾರ್ಥಿಗಳಿಗೆ ಗಾಯ
ಹಾಸನ

ಆಟೋ ಪಲ್ಟಿ: 25 ವಿದ್ಯಾರ್ಥಿಗಳಿಗೆ ಗಾಯ

August 2, 2018

ಆಲೂರು: ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಆಟೋ ಪಲ್ಟಿಯಾದ ಪರಿಣಾಮ 25ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ತಾಲೂಕಿನ ಚಿಕ್ಕಕಣಗಾಲು ಗ್ರಾಮದಲ್ಲಿ ನಡೆದಿದೆ. ಪ್ರತಿಭಾ ಕಾರಂಜಿಗೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು, ಗಾಯಗೊಂಡವರು ತಾಲೂಕು ಕಣತೂರು ಪ್ರೌಢಶಾಲೆ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ದೊಡ್ಡ ಅನಾಹುತದಿಂದ ಸ್ವಲ್ಪದರಲ್ಲಿಯೇ ವಿದ್ಯಾರ್ಥಿಗಳು ಪಾರಾಗಿದ್ದು, ಸ್ಥಳೀಯರು ಗಾಯಾಳು ವಿದ್ಯಾರ್ಥಿಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು. ಆಲೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ನಡೆದಿದೆ.

ಎಮ್ಮೆ ಹುಚ್ಚಾಟ: ಓರ್ವ ಸಾವು, ನಾಲ್ವರು ಗಂಭೀರ
ಹಾಸನ

ಎಮ್ಮೆ ಹುಚ್ಚಾಟ: ಓರ್ವ ಸಾವು, ನಾಲ್ವರು ಗಂಭೀರ

July 18, 2018

ಆಲೂರು: ಸಾಕು ಎಮ್ಮೆ ಯೊಂದು ಹುಚ್ಚಾಟ ನಡೆಸಿದ್ದರ ಪರಿಣಾಮ ಕೃಷಿ ಇಲಾಖೆ ನೌಕರ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಚೆನ್ನಾಪುರದಲ್ಲಿ ನಡೆದಿದೆ. ಗ್ರಾಮದ ರುದ್ರೇಗೌಡ(57) ಎಮ್ಮೆ ದಾಳಿಗೆ ಒಳಗಾಗಿ ಮೃತಪಟ್ಟವರು. ಮಂಗಳವಾರ ಗ್ರಾಮದಲ್ಲಿ ಸಾಕು ಎಮ್ಮೆಯೊಂದು ಹುಚ್ಚಾಟ ನಡೆಸಿ ತಿವಿದು ಹಲವರನ್ನು ಗಾಯಗೊಳಿಸಿದೆ. ಈ ವೇಳೆ ಎಮ್ಮೆ ದಾಳಿಗೆ ತೀವ್ರವಾಗಿ ತುತ್ತಾದ ರುದ್ರೇಗೌಡರನ್ನು ತಾಲೂಕು ಆಸ್ಪತ್ರೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ರುದ್ರೇಗೌಡ ಮೃತಪಟ್ಟಿ ದ್ದಾರೆ. ಉಳಿದ ಗಾಯಾಳುಗಳನ್ನು ಜಿಲ್ಲಾ ಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದ…

ಆಲೂರಿನಲ್ಲಿ ವಚನ ಮಾಂಗಲ್ಯ ಮದುವೆ
ಚಾಮರಾಜನಗರ

ಆಲೂರಿನಲ್ಲಿ ವಚನ ಮಾಂಗಲ್ಯ ಮದುವೆ

July 11, 2018

ಆಲೂರು: ಯಾವುದೇ ಆಡಂಬರ, ಮದುವೆ ಮಂಟಪ ಹಾಗು ವಾದ್ಯಗೋಷ್ಠಿ ಇಲ್ಲದೇ ಸರಳವಾಗಿ ವಚನ ಮಾಂಗಲ್ಯದ ಮೂಲಕ ಜೋಡಿಯೊಂದು ಸತಿಪತಿಗಳಾದರು. ತಾಲೂಕಿನ ಆಲೂರು ಗ್ರಾಮದ ದಿ. ಎ.ಎಂ. ಚನ್ನಂಜಪ್ಪ ಮತ್ತು ಪುಟ್ಟತಾಯಮ್ಮ ಅವರ ಪುತ್ರಿ ಎ.ಸಿ. ಮಹೇಶ್‍ಕುಮಾರಿ ಹಾಗೂ ನಂಜನ ಗೂಡು ತಾಲೂಕು ಹೆಜ್ಜಿಗೆ ಗ್ರಾಮದ ದಿ.ಸುಬ್ರಹ್ಮಣ್ಯ ಮತ್ತು ಪ್ರೇಮ ದಂಪತಿ ಪುತ್ರ ಎಚ್.ಎಸ್.ಮಹದೇವಕುಮಾರ್ ಅವರು ಆಲೂರಿನ ಬಸವ ಭವನದಲ್ಲಿ ವಚನ ಮಾಂಗಲ್ಯ ಮೂಲಕ ದಾಂಪತ್ಯಕ್ಕೆ ಕಾಲಿಟ್ಟರು. ನವದೆಹಲಿ ತೋಂಟದಾರ್ಯ ಶಾಖಾ ಮಠದ ಶ್ರೀ ಮಹಾಂತದೇವರು ಬಸವಣ್ಣನವರ ವಚನ…

ವಿದ್ಯುತ್ ತಂತಿ ತುಳಿದು ಇಬ್ಬರು ಸಾವು
ಹಾಸನ

ವಿದ್ಯುತ್ ತಂತಿ ತುಳಿದು ಇಬ್ಬರು ಸಾವು

July 11, 2018

ಆಲೂರು:  ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಇಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ರಾಯರಕೊಪ್ಪಲು ಬಳಿ ನಡೆಸಿದೆ. ನಟರಾಜ್(35), ಕುಮಾರ್ (48) ಎಂಬುವರು ಮೃತಪಟ್ಟವರು. ಜಮೀನಲ್ಲಿ ಕೆಲಸ ಮಾಡುವಾಗ ತುಂಡಾಗಿ ಬಿದ್ದಿದ್ದ ತಂತಿ ತುಳಿದಿದ್ದು, ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಲೂರು ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಲೂರಿನಲ್ಲಿ ಡಿಸಿಯಿಂದ ಸಾರ್ವಜನಿಕರ ಕುಂದು ಕೊರತೆ ಸ್ವೀಕಾರ
ಹಾಸನ

ಆಲೂರಿನಲ್ಲಿ ಡಿಸಿಯಿಂದ ಸಾರ್ವಜನಿಕರ ಕುಂದು ಕೊರತೆ ಸ್ವೀಕಾರ

July 8, 2018

ಆಲೂರು: ತಾಲೂಕು ಕಚೇರಿಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧ್ಯಕ್ಷತೆಯಲ್ಲಿ ನಡೆದ ಸಾರ್ವ ಜನಿಕರ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆಯಲ್ಲಿ 190ಕ್ಕೂ ಹೆಚ್ಚು ದೂರು ಸಲ್ಲಿಕೆಯಾದವು. ಬೆಳಿಗ್ಗೆಯಿಂದಲೇ ನೂರಾರು ಮಂದಿ ಹಾಜರಾಗಿ ಜಿಲ್ಲಾಧಿಕಾರಿ ಅವರ ಮುಂದೆ ತಮ್ಮ ಅಳಲು ತೋಡಿಕೊಂಡರು. ರೈತರ ಜಮೀನಿನ ಸರ್ವೇ ಕಾರ್ಯ, ಜಮೀನು ಮಂಜೂರಾತಿ, ಯೋಜನಾ ನಿರಾಶ್ರಿತರಿಗೆ ಜಮೀನು ಹಕ್ಕು ಪತ್ರ ವಿತರಣೆ ಸೇರಿದಂತೆ ವಿವಿಧ ರೀತಿಯ 190ಕ್ಕೂ ಅಧಿಕ ಅರ್ಜಿ ಗಳು ಸಲ್ಲಿಕೆಯಾದವು. ಪಟ್ಟಣದ ಎಪಿಎಂಸಿ ಮಾರುಕಟ್ಟೆ, ಅಗ್ನಿಶಾಮಕ ಠಾಣೆ, ಕೆಎಸ್‍ಆರ್‍ಟಿಸಿ…

Translate »