ಎಮ್ಮೆ ಹುಚ್ಚಾಟ: ಓರ್ವ ಸಾವು, ನಾಲ್ವರು ಗಂಭೀರ
ಹಾಸನ

ಎಮ್ಮೆ ಹುಚ್ಚಾಟ: ಓರ್ವ ಸಾವು, ನಾಲ್ವರು ಗಂಭೀರ

July 18, 2018

ಆಲೂರು: ಸಾಕು ಎಮ್ಮೆ ಯೊಂದು ಹುಚ್ಚಾಟ ನಡೆಸಿದ್ದರ ಪರಿಣಾಮ ಕೃಷಿ ಇಲಾಖೆ ನೌಕರ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಚೆನ್ನಾಪುರದಲ್ಲಿ ನಡೆದಿದೆ.

ಗ್ರಾಮದ ರುದ್ರೇಗೌಡ(57) ಎಮ್ಮೆ ದಾಳಿಗೆ ಒಳಗಾಗಿ ಮೃತಪಟ್ಟವರು. ಮಂಗಳವಾರ ಗ್ರಾಮದಲ್ಲಿ ಸಾಕು ಎಮ್ಮೆಯೊಂದು ಹುಚ್ಚಾಟ ನಡೆಸಿ ತಿವಿದು ಹಲವರನ್ನು ಗಾಯಗೊಳಿಸಿದೆ. ಈ ವೇಳೆ ಎಮ್ಮೆ ದಾಳಿಗೆ ತೀವ್ರವಾಗಿ ತುತ್ತಾದ ರುದ್ರೇಗೌಡರನ್ನು ತಾಲೂಕು ಆಸ್ಪತ್ರೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ರುದ್ರೇಗೌಡ ಮೃತಪಟ್ಟಿ ದ್ದಾರೆ. ಉಳಿದ ಗಾಯಾಳುಗಳನ್ನು ಜಿಲ್ಲಾ ಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪಶು ಸಂಗೋಪನಾ ಇಲಾಖೆ ಸಿಬ್ಬಂದಿ ಎಮ್ಮೆಯನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಎಮ್ಮೆ ದಾಳಿಗೆ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು, ಮೃತ ವ್ಯಕ್ತಿಯ ಕುಟುಂಬ ಹಾಗೂ ಗಾಯಗೊಂಡವರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

Translate »