ಜಡಿ ಮಳೆಗೆ ತಲೆಕೆಳಕಾದ ರೈತರ ಲೆಕ್ಕಾಚಾರ
ಹಾಸನ

ಜಡಿ ಮಳೆಗೆ ತಲೆಕೆಳಕಾದ ರೈತರ ಲೆಕ್ಕಾಚಾರ

July 18, 2018

ರಾಮನಾಥಪುರ: ಈ ಬಾರಿಯ ಮುಂಗಾರಿನಿಂದ ವಾಣಿಜ್ಯ ಬೆಳೆ ಬೆಳೆದು, ಉತ್ತಮ ಬೆಲೆ ಪಡೆಯುವ ನಿರೀಕ್ಷೆಯಲ್ಲಿದ್ದ ರೈತರ ಲೆಕ್ಕಾಚಾರ ತಿಂಗಳಿಂದ ಸುರಿಯುತ್ತಿ ರುವ ಜಡಿ ಮಳೆಯಿಂದ ತಲೆಕೆಳಕಾಗಿದೆ.

ಇಲ್ಲಿಯ ತಂಬಾಕು ಹರಾಜು ಮಾರು ಕಟ್ಟೆಯ ವ್ಯಾಪ್ತಿಯಲ್ಲಿ ಹಲವು ವರ್ಷಗಳ ನಂತರ ವಾಡಿಕೆಗಿಂತ ಹೆಚ್ಚಿನ ಮಳೆಯಾಗು ತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿರುವು ದರ ಜೊತೆಗೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಹೊಗೆಸೊಪ್ಪು, ಶುಂಠಿ, ಅಲೂಗೆಡ್ಡೆ, ನೆಲಗಡಲೆ, ಹಲಸಂದೆ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ.

ಜೂನ್ ಕೊನೆಯವಾರದಿಂದ ಸುರಿ ಯುತ್ತಿರುವ ಅತಿಯಾದ ಜಡಿ ಮಳೆ ಯಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಒಮ್ಮೊಮ್ಮೆ ಮಳೆ ಬಾರದೆ ಬೆಳೆ ಒಣಗಿ ಹೋಗುತ್ತವೆ. ಮತ್ತೊಮ್ಮೆ ಮಳೆ ಬಂದು ಹಾನಿಯಾಗುತ್ತವೆ ಎಂಬುದು ರಾಮನಾಥ ಪುರ ತಂಬಾಕು ಮಂಡಳಿ ವ್ಯಾಪ್ತಿಯ ಈ ಭಾಗದ ಕೃಷಿಕರ ಪರಿಸ್ಥಿತಿ ಗಮನಿಸಿದರೆ ನಿಜ ಎನಿಸುತ್ತಿದೆ. ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆಗಳ ಪ್ಲಾಟ್‍ಫಾರಂ 7 ಹಾಗೂ 63ರ ವ್ಯಾಪ್ತಿಗೆ ಬರುವ ರಾಮ ನಾಥಪುರ, ಮಲ್ಲಿಪಟ್ಟಣ, ದೊಡ್ಡಮಗ್ಗೆ ಕೊಣನೂರು, ಸೋಮವಾರಪೇಟೆ ಭಾಗ ಗಳಲ್ಲಿ ಅತೀ ಮಳೆಯಿಂದ ಹೊಗೆಸೊಪ್ಪು, ಶುಂಠಿ, ಅಲೂಗೆಡ್ಡೆಗೆ ತೀವ್ರ ಹಾನಿ ಯಾಗಿದ್ದು, ಸುಮಾರು 50 ಸಾವಿರ ತಂಬಾಕು ಬೆಳೆಗಾರರು ಕಂಗಾಲಾಗಿದ್ದಾರೆ.

ಅಂತೂ ಇಂತೂ ಕಳೆದ ಎರಡು ತಿಂಗ ಳಿಂದ ಬೀಳು ತ್ತಿದ್ದ ಮಳೆಗೆ ಅನ್ನದಾತನ ಮುಖದಲ್ಲಿ ಮಂದಹಾಸ ತಂದಿತ್ತು. ಸತತ ಬಿರುಬೇಸಿಗೆಯಿಂದ ಬಳಲುತ್ತಿದ್ದ ರೈತರು ಹಾಗೂ ಭೂಮಿಯನ್ನು ತಂಪಾಗಿಸಿತ್ತು. ಮಳೆಗಾಗಿ ಮುಗಿಲು ನೋಡುತ್ತಿದ್ದ ರೈತಾಪಿ ವರ್ಗ ಮಳೆಯಿಂದ ಕೃಷಿ ಚಟುವಟಿಕೆ ಚುರುಕುಗೊಳಿಸಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದ. ಅದರಂತೆ ಮೊದಲನೇ ಹಂತದ ಹೊಗೆಸೊಪ್ಪು ಕೆಲವೆಡೆ ಇನ್ನೂ ಸಲ್ಪ ದಿನಗಳಲ್ಲಿ ಕ್ಯೂರಿಂಗ್ ಹಂತದಲ್ಲಿದ್ದು, ಅತಿವೃಷ್ಠಿ ಯಿಂದಾಗಿ ಜಮೀನಿನಲ್ಲಿ ನೀರು ನಿಂತಿರು ವುದರಿಂದ ಹೊಗೆಸೊಪ್ಪು ಸೇರಿದಂತೆ ಶುಂಠಿ, ಅಲೂಗೆಡ್ಡೆ ಮತ್ತು ಜೋಳ ಬೆಳೆ ಕೊಳೆಯಲಾರಂಭಿಸಿವೆ. ಅಲ್ಲದೆ ಬೆಳವಣಿಗೆಯೂ ಕುಂಠಿತವಾಗಲು ಕಾರಣವಾಗಿದ್ದು, ಇಳುವರಿ ಮೇಲೆ ಭಾರೀ ಪರಿಣಾಮ ಬೀರಿದೆ.

ತಿಂಗಳ ಹಿಂದೆ ಬಿದ್ದ ಮಳೆಗೆ ಸಸಿ ಮಡಿ ಮಾಡಿ ನಾಟಿ ಮಾಡಿದ್ದ ಬೆಳೆಯ ತಳದಲ್ಲೂ ಜಡಿ ಮಳೆಯಿಂದ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡು ಆತಂಕ ಸೃಷ್ಟಿಸಿದ್ದು, ಅಧಿಕ ಇಳುವರಿ, ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದ ರೈತ ಈಗ ತಲೆ ಮೇಲೆ ಹೊತ್ತು ಕೂರುವಂತಾಗಿದೆ.

Translate »