ಆಲೂರಿನಲ್ಲಿ ವಚನ ಮಾಂಗಲ್ಯ ಮದುವೆ
ಚಾಮರಾಜನಗರ

ಆಲೂರಿನಲ್ಲಿ ವಚನ ಮಾಂಗಲ್ಯ ಮದುವೆ

July 11, 2018

ಆಲೂರು: ಯಾವುದೇ ಆಡಂಬರ, ಮದುವೆ ಮಂಟಪ ಹಾಗು ವಾದ್ಯಗೋಷ್ಠಿ ಇಲ್ಲದೇ ಸರಳವಾಗಿ ವಚನ ಮಾಂಗಲ್ಯದ ಮೂಲಕ ಜೋಡಿಯೊಂದು ಸತಿಪತಿಗಳಾದರು.

ತಾಲೂಕಿನ ಆಲೂರು ಗ್ರಾಮದ ದಿ. ಎ.ಎಂ. ಚನ್ನಂಜಪ್ಪ ಮತ್ತು ಪುಟ್ಟತಾಯಮ್ಮ ಅವರ ಪುತ್ರಿ ಎ.ಸಿ. ಮಹೇಶ್‍ಕುಮಾರಿ ಹಾಗೂ ನಂಜನ ಗೂಡು ತಾಲೂಕು ಹೆಜ್ಜಿಗೆ ಗ್ರಾಮದ ದಿ.ಸುಬ್ರಹ್ಮಣ್ಯ ಮತ್ತು ಪ್ರೇಮ ದಂಪತಿ ಪುತ್ರ ಎಚ್.ಎಸ್.ಮಹದೇವಕುಮಾರ್ ಅವರು ಆಲೂರಿನ ಬಸವ ಭವನದಲ್ಲಿ ವಚನ ಮಾಂಗಲ್ಯ ಮೂಲಕ ದಾಂಪತ್ಯಕ್ಕೆ ಕಾಲಿಟ್ಟರು. ನವದೆಹಲಿ ತೋಂಟದಾರ್ಯ ಶಾಖಾ ಮಠದ ಶ್ರೀ ಮಹಾಂತದೇವರು ಬಸವಣ್ಣನವರ ವಚನ ಮಾಂಗಲ್ಯವನ್ನು ಬೋಧಿಸಿದರು.

ಮದುವೆ ಎಂದರೆ ಸಂಭ್ರಮ, ಸಾವಿರಾರು ಜನರು, ಕಲ್ಯಾಣ ಮಂಟಪ ಇತರೇ ಖರ್ಚುಗಳು ಇರ ಲಿಲ್ಲ. ವಧು-ವರರ ಕಡೆಯವರು ಹಾಗೂ ಹತ್ತಿರದ ನೆಂಟರಿಷ್ಟರು ಬಿಟ್ಟರೆ ಹೆಚ್ಚಿನ ಜನರು ಇರಲಿಲ್ಲ. ಬಾಸಿಂಗ ಬದಲು ಬಸವಣ್ಣ ಮತ್ತು ನೀಲಾಂಬಿಕೆಯ ಭಾವಚಿತ್ರವುಳ್ಳ ಕಿರೀಟವನ್ನು ಹಾಕ ಲಾಗಿತ್ತು. ಕೈಗೆ ಕಂಕಣದ ಬಲದು ರುದ್ರಾಕ್ಷಿ ಯನ್ನು ಕಟ್ಟಲಾಗಿತ್ತು.

ಈ ಸಂದರ್ಭದಲ್ಲಿ ಚೌಹಳ್ಳಿ ಲಿಂಗರಾಜಣ್ಣ ಮಾತನಾಡಿ, ಮಕ್ಕಳ ಮದುವೆ ಮಾಡಿ, ಸಾಲದ ಸುಳಿಗೆ ಸಿಲುಕಿಕೊಳ್ಳುವ ಬದಲು ವಚನ ಮಾಂಗಲ್ಯದ ಮೂಲಕ ಮದು ವೆಯಾಗುವ ಮೂಲಕ ನೆಮ್ಮದಿ ಜೀವನ ನಡೆ ಸಲು ಸಾಧ್ಯವಿದೆ. ಬಸವಣ್ಣನವರ ಅನುಯಾಯಿಗಳಾದ ನಾವೆಲ್ಲರು ಇಂಥ ಮದುವೆಗೆ ಹೆಚ್ಚು ಪ್ರೊತ್ಸಾಹವನ್ನು ನೀಡಬೇಕು ಎಂದರು. ಮೈಸೂರಿನ ಅಕ್ಕಬಳಗ ಹಾಗು ಆಲೂರಿನ ಬಸವೇಶ್ವರ ಯುವಕ ಸಂಘ ದಿಂದ ಬಸವೇಶ್ವರರ ವಚನಗಳ ಗಾಯನ ಏರ್ಪಡಿಸಲಾಗಿತ್ತು. ಹೆಜ್ಜಿಗೆ ಮತ್ತು ಆಲೂರಿನ ಗ್ರಾಮಸ್ಥರು ಇದ್ದರು.

Translate »