ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ ಅಂಗನವಾಡಿ ನೌಕರರ ಭಾರೀ ಪ್ರತಿಭಟನೆ
ಚಾಮರಾಜನಗರ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ ಅಂಗನವಾಡಿ ನೌಕರರ ಭಾರೀ ಪ್ರತಿಭಟನೆ

July 11, 2018

ಚಾಮರಾಜನಗರ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸು ವಂತೆ ಆಗ್ರಹಿಸಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವ ಹಿಸುತ್ತಿರುವ ಅಂಗನವಾಡಿ ನೌಕರರು ಹಾಗೂ ಸಹಾಯಕಿಯರು ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಇಲ್ಲಿನ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಸಾವಿರಾರು ಅಂಗನವಾಡಿ ನೌಕರರು ಹಾಗೂ ಸಹಾಯಕಿಯರು ಜಮಾಯಿಸಿದರು.

ನಂತರ ಘೋಷಣೆಗಳನ್ನು ಕೂಗುತ್ತಾ, ಸಾಲಾಗಿ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವ ನಕ್ಕೆ ತೆರಳಿದರು. ಅಲ್ಲಿ ಸ್ವಲ್ಪ ಸಮಯ ಧರಣಿ ನಡೆಸಿದ ನಂತರ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರಿಗೆ ಮನವಿ ಸಲ್ಲಿಸಿದರು.

ಐಸಿಡಿಎಸ್ ಯೋಜನೆಯಡಿಯಲ್ಲಿ ಅತ್ಯಂತ ಕಡಿಮೆ ಸವಲತ್ತುಗಳಿಗೆ ದಿನಕ್ಕೆ 9.30 ಗಂಟೆಯ ಕೆಲಸದೊಟ್ಟಿಗೆ ಇಲಾ ಖೆಯ ಎಲ್ಲಾ ತರಹದ ಕೆಲಸಗಳನ್ನು ಮಾಡು ತ್ತಿದ್ದೇವೆ. ಇದಲ್ಲದೇ ಚುನಾವಣಾ ಕೆಲಸ, ಸರ್ವೆ, ಭಾಗ್ಯಲಕ್ಷ್ಮಿ, ಸ್ತ್ರೀಶಕ್ತಿ, ಅಂಗವಿಕಲರಿಗೆ ಸಂಬಂಧಿಸಿದ ಕೆಲಸ, ಕೆಲವೆಡೆ ಶೌಚಾಲಯಗಳ ನಿರ್ಮಾಣದಲ್ಲೂ ತಮ್ಮನ್ನು ಬಳಸಿಕೊಳ್ಳಲಾಗುತ್ತಿದೆ. ರಾಜ್ಯ ಸರ್ಕಾರ ಹೊಸದಾಗಿ ಪ್ರಕಟಿಸಿದ ಮಾತೃ ಪೂರ್ಣ ಯೋಜನೆಯನ್ನು ಜಾರಿಗೊಳಿಸಲು ಕೆಲಸ ಮಾಡುವಾಗ ಸಣ್ಣ-ಪುಟ್ಟ ತಪ್ಪುಗಳಾದರೆ ಕೂಡಲೇ ಅವರನ್ನು ಕೆಲಸದಿಂದ ತೆಗೆಯುವ ಕೆಲಸ ನಡೆಯುತ್ತಿದೆ. ಇದು ಈ ಕೂಡಲೇ ನಿಲ್ಲಬೇಕು ಎಂದು ಪ್ರತಿ ಭಟನಾಕಾರರು ಒತ್ತಾಯಿಸಿದರು.

ಶೂನ್ಯ ಜಂಟೀ ಖಾತೆ ತೆರೆಯಲು ನಮ್ಮ ವಿರೋಧ ಇಲ್ಲ. ಆದರೆ ಅದರಲ್ಲಿ ಇರುವ ನಕಾರಾತ್ಮಕ ಅಂಶಗಳನ್ನು ತೆಗೆಯಬೇಕು. ಸರ್ಕಾರಿ ಶಾಲೆಗಳಲ್ಲಿ ಎಲ್‍ಕೆಜಿ-ಯುಕೆಜಿ ತೆರೆಯುವುದನ್ನು ನಿಲ್ಲಿಸಬೇಕು. ಅಂಗನ ವಾಡಿ ಕೇಂದ್ರಗಳಲ್ಲಿಯೇ ಇದನ್ನು ಪ್ರಾರಂಭಿಸಬೇಕು. ತಮಗೆ ಪ್ರತಿ ತಿಂಗಳು ಗೌರವ ಧನ ಪಾವತಿಸಬೇಕು. ಮೇಲ್ವಿಚಾರಕಿ ಹುದ್ದೆಗಳನ್ನು ಸಂಪೂರ್ಣ ಅಂಗನವಾಡಿ ನೌಕರರಿಗೆ ಮುಂಬಡ್ತಿ ಕೊಡಬೇಕು ಎಂದು ಆಗ್ರಹಿಸಿದರು.

ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಕೆ.ಸುಜಾತ, ಖಜಾಂಚಿ ಆರ್.ಜಿ. ರೇವಮ್ಮ, ಪ್ರಧಾನ ಕಾರ್ಯದರ್ಶಿ ಬಿ.ಪುಟ್ಟ ಬಸಮ್ಮ, ಉಪಾಧ್ಯಕ್ಷೆ ರಾಜಮ್ಮ, ಎ. ನಾಗಮಣಿ , ಉಮಾದೇವಿ, ಮಹದೇವಮ್ಮ, ಯಶೋಧರಮ್ಮ, ಶಾಂತಮ್ಮ, ಶಾಹಿದ ಬಾನು, ಕಾಂಚನ, ಮೀನಾ, ಚಿಕ್ಕನಾಗಮ್ಮ, ಗಿರಿಜ, ಸೌಭಾಗ್ಯ, ಶಾಂತಮ್ಮ, ಅನಿತ, ವಿಮಲ, ಗುರುಮಲ್ಲಮ್ಮ, ಸುಮಿತ್ರ ಸೇರಿ ದಂತೆ ಸಾವಿರಾರು ಅಂಗನವಾಡಿ ನೌಕ ರರು ಹಾಗೂ ಸಹಾಯಕಿಯರು ಪ್ರತಿ ಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಭಟನೆಯಲ್ಲಿ ಸಾವಿರಾರು ಮಹಿಳೆ ಯರು ಪಾಲ್ಗೊಂಡು ಕಾಮಗಾರಿ ಪ್ರಗತಿಯಲ್ಲಿ ಇರುವ ಜೋಡಿರಸ್ತೆಯಲ್ಲಿ ತೆರಳಿದ್ದರಿಂದ ಸುಗಮ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.

ಬೇಡಿಕೆಗಳು

  • ಹೊಸ ಅಂಗನವಾಡಿ ಕೇಂದ್ರಗಳು ಬಂದಾಗ ಮಿನಿ ಅಂಗನವಾಡಿ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕು.
  • ಮಿನಿ ಅಂಗನವಾಡಿ ಎಲ್ಲಾ ಕೇಂದ್ರಗಳಿಗೂ ಸಹಾಯಕಿಯನ್ನು ಕಡ್ಡಾಯವಾಗಿ ನೇಮಕ ಮಾಡಬೇಕು.
  • ಮಿನಿ ಅಂಗನವಾಡಿ ಕಾರ್ಯಕರ್ತರಿಗೂ ಗೌರವ ಧನ ನೀಡಬೇಕು.
  • ಮಿನಿ ಅಂಗನವಾಡಿ ಕಾರ್ಯಕರ್ತರಿಗೆ ಹೆರಿಗೆ ರಜೆ ಹಾಗೂ ಖಾಯಿಲೆ ಬಂದಾಗ ಪರ್ಯಾಯ ವ್ಯವಸ್ಥೆ ಮಾಡಬೇಕು.
  • ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೂ ವರ್ಗಾವಣೆ ಮುಂಬಡ್ತಿ ಸಿಗಬೇಕು.
  • ಸೇವಾ ಜೇಷ್ಠತೆಯ ಆಧಾರದಲ್ಲಿ ಕನಿಷ್ಟ ವೇತನ ಜಾರಿ ಮಾಡಬೇಕು.
  •  ಗೌರವ ಧನ ಹೆಚ್ಚಳ ಮಾಡಬೇಕು.
  •  ಮಾತೃವಂದನಾ ಕಾರ್ಯಕ್ರಮಕ್ಕೆ ಒಂದು ಕಂತಿಗೆ 300 ರೂ. ನಿಗದಿಗೊಳಿಸಬೇಕು.
  • ಮುಂಬಡ್ತಿ ಪಡೆಯಲು ಇರುವ ವಯಸ್ಸಿನ ಭೌಗೋಳಿಕ ವಿಸ್ತೀರ್ಣದ ಮಿತಿಯನ್ನು ಸಡಿಲಿಸಬೇಕು.
  • ಖಾಲಿ ಇರುವ ಸಹಾಯಕಿ, ಕಾರ್ಯಕರ್ತರ ಹುದ್ದೆಯನ್ನು ಬೇಗ ತುಂಬಬೇಕು.
  •  ಹಲವು ಯೋಜನೆಗಳಿಗೆ ಡಿಡಿ, ಪಿಓ, ಸಿಡಿಪಿಓ ಮೇಲ್ವಿಚಾರಕಿಯರನ್ನು ಖಾಯಂ ಆಗಿ ನೇಮಕ ಮಾಡಬೇಕು.
  • ಸೇವಾ ನಿಯಮಾವಳಿ ರಚಿಸಬೇಕು.
  • ಕೇಂದ್ರ ಸರ್ಕಾರ ಕಡಿತ ಮಾಡಿರುವ ಅನುವಾದ ವಾಪಸ್ ಆಗಬೇಕು.
  • ಅಂಗನವಾಡಿ ಕೇಂದ್ರ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಯ ಸೂಚನೆಯನ್ನು ರಾಜ್ಯ ಸರ್ಕಾರ ಒಪ್ಪಬಾರದು.

Translate »