ಚಿನಕುರಳಿಯಲ್ಲಿ ಮೊದಲ ಸುತ್ತಿನ ಗ್ರಾಮಸಭೆ
ಮಂಡ್ಯ

ಚಿನಕುರಳಿಯಲ್ಲಿ ಮೊದಲ ಸುತ್ತಿನ ಗ್ರಾಮಸಭೆ

July 11, 2018

ಚಿನಕುರಳಿ:  ಇಲ್ಲಿನ ಗ್ರಾಪಂ ಆವರಣದಲ್ಲಿ ಅಧ್ಯಕ್ಷೆ ಪ್ರೇಮಮ್ಮ ಅವರ ಅಧ್ಯಕ್ಷತೆಯಲ್ಲಿ 2018-19ನೇ ಸಾಲಿನ ಮೊದಲ ಸುತ್ತಿನ ಗ್ರಾಮಸಭೆ ನಡೆಯಿತು.

ಸಭೆ ಆರಂಭವಾಗುತ್ತಿದ್ದಂತೆ ಕೃಷಿ ಇಲಾಖೆ ಅಧಿಕಾರಿ ಜಯರಾಮು ತಮ್ಮ ಇಲಾಖೆಯಲ್ಲಿ ದೊರೆಯುವ ಯೋಜನೆ, ಸವಲತ್ತುಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಈ ವೇಳೆ ರೈತರೊಬ್ಬರು ಅಧಿ ಕಾರಿಯನ್ನು ಕಳೆದ ಬಾರಿ ಕೃಷಿ ಇಲಾಖೆ ಯಿಂದ ನೀಡಿದ ಜಿಪಿ-28 ರಾಗಿ ತಳಿ ಕಳಪೆ ಗುಣಮಟ್ಟದಿಂದ ಕೂಡಿತ್ತು. ಇದರಿಂದ ರೈತರಿಗೆ ಸಾಕಷ್ಟು ನಷ್ಟ ಉಂಟಾಯಿತು. ಹೀಗಾಗಿ ಯಾವುದೇ ತಳಿ ನೀಡಿದರೂ, ಗುಣಮಟ್ಟದ ತಳಿ ನೀಡುವ ಜೊತೆಗೆ ತಳಿಯ ಬಗ್ಗೆ ರೈತರಿಗೆ ಸಮರ್ಪಕ ಮಾಹಿತಿ ನೀಡಿ ಎಂದರು.
ಈ ವೇಳೆ ಮಾತನಾಡಿದ ಜಿಪಂ ಸದಸ್ಯ ಸಿ.ಅಶೋಕ್, ಅಧಿಕಾರಿಗಳು ಕೃಷಿ ಇಲಾಖೆ ಯಲ್ಲಿ ಸಿಗುವ ಎಲ್ಲಾ ಯೋಜನೆ, ಸವಲತ್ತು ಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಮೂಲಕ ರೈತರು ಯೋಜನೆಯ ಸವ ಲತ್ತುಗಳನ್ನು ಪಡೆದುಕೊಳ್ಳುವಂತೆ ಮಾಡ ಬೇಕು ಎಂದು ತಾಕೀತು ಮಾಡಿದರು.

ಸಾರ್ವಜನಿಕರ ಯಾವುದೇ ಸಮಸ್ಯೆಗಳಿಗೂ ಸ್ಪಂದಿಸುವುದಿಲ್ಲ. ವಿದ್ಯುತ್ ಕಂಬಗಳ ದುರಸ್ತಿ ಬಗ್ಗೆ ಮಾಹಿತಿ ನೀಡಿದರೂ, ವಿದ್ಯುತ್ ಸಮಸ್ಯೆಗಳ ಬಗ್ಗೆ ತಿಳಿಸಲು ಫೋನ್ ಮಾಡಿ ದರೂ ಕರೆ ಸ್ವೀಕರಿಸುವುದಿಲ್ಲ ಎಂದು ವಿದ್ಯುತ್ ಇಲಾಖೆ ಸಹಾಯಕ ಇಂಜಿನಿಯರ್ ಸುಷ್ಮಾ ಅವರನ್ನು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ತರಾಟೆ ತೆಗೆದುಕೊಂಡರು. ಈ ವೇಳೆ ಮಧ್ಯ ಪ್ರವೇಶಿಸಿದ ಗ್ರಾಪಂ ಸದಸ್ಯ ಸಿ.ಶಿವಕುಮಾರ್ ಸೆಸ್ಕ್ ಅಧಿಕಾರಿ ಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವಂತೆ ಇಂಜಿನಿಯರ್ ಸುಷ್ಮ ಅವರಿಗೆ ಸೂಚಿಸಿದರು. ಬಳಿಕ ತೋಟಗಾರಿಕೆ, ರೇಷ್ಮೆ, ಕಂದಾಯ ಸೇರಿದಂತೆ ನಾನಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಗ್ರಾಮ ಸಭೆ ಮುಂದೂಡಿಕೆ: ಸಭೆ ನಡೆಯು ತ್ತಿದ್ದ ವೇಳೆ ಮಳೆ ಬಂದ ಹಿನ್ನೆಲೆಯಲ್ಲಿ ಗ್ರಾಮ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿ ಸಲಾಯಿತು. ಈ ವೇಳೆ ಸಭೆಯಲ್ಲಿ ಗ್ರಾಪಂ ವ್ಯಾಪ್ತಿಯ ಮಳಿಗೆಗಳ ಹರಾಜು ಪ್ರಕ್ರಿಯೆ ಬಗ್ಗೆ ಚರ್ಚಿಸಬೇಕಾಗಿದ್ದರಿಂದ ಸರ್ವ ಸದಸ್ಯರ ಒಮ್ಮತದ ತೀರ್ಮಾನದ ಮೇರೆಗೆ ಗ್ರಾಮ ಸಭೆಯನ್ನು ಜು.16ಕ್ಕೆ ಮುಂದೂಡಲಾಯಿತು. ಸಭೆಯಲ್ಲಿ ತಾಪಂ ಸದಸ್ಯರಾದ ಸಿ.ಎಸ್. ಗೋಪಾಲಗೌಡ, ಗೋವಿಂದಯ್ಯ, ಗ್ರಾಪಂ ಉಪಾಧ್ಯಕ್ಷ ನಾಗ ರಾಜು, ಸದಸ್ಯರಾದ ಸಿ.ಶಿವಕುಮಾರ್, ಶಾಂತರಾಜು, ರಾಮಚಂದ್ರು, ಸಿ.ಎ.ಲೋಕೇಶ್, ಶಾಂತಮ್ಮ, ಕಮಲಮ್ಮ, ರೇಣುಕಮ್ಮ, ವರಲಕ್ಷ್ಮಿ, ಬಸವ ರಾಜು, ನಾಗೇಗೌಡ, ಸಿ.ಡಿ.ಮಹ ದೇವು, ರವಿ,ದೇವರಾಜು, ಪಿಡಿಓ ನಾರಾಯಣ್, ಡಾ.ಪ್ರಮಿಳಾ ಸೇರಿದಂತೆ ಇತರರಿದ್ದರು.

Translate »