ಚಿನಕುರಳಿ ಡೈರಿಯಲ್ಲಿ ಬಿಎಂಸಿ ಘಟಕಕ್ಕೆ ಶಂಕುಸ್ಥಾಪನೆ
ಮಂಡ್ಯ

ಚಿನಕುರಳಿ ಡೈರಿಯಲ್ಲಿ ಬಿಎಂಸಿ ಘಟಕಕ್ಕೆ ಶಂಕುಸ್ಥಾಪನೆ

September 10, 2018

ಚಿನಕುರಳಿ: ಚಿನಕುರಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರದ ಸಂಘ ದಲ್ಲಿ 35 ಲಕ್ಷ ರೂ. ವೆಚ್ಚದ ಬಿಎಂಸಿ ಘಟಕ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ಶಿಕ್ಷಣ ಸಚಿವ ಎನ್.ಮಹೇಶ್ ಶಂಕುಸ್ಥಾಪನೆ ನೆರವೇರಿಸಿದರು.

ಸಚಿವ ಸಿ.ಎಸ್.ಪುಟ್ಟರಾಜು ಮಾತ ನಾಡಿ, ಹೈನುಗಾರಿಕೆ ಇಡೀ ರಾಜ್ಯದಲ್ಲೇ ಕ್ರಾಂತಿ ಮೂಡಿಸಿದೆ. ಅದೇ ರೀತಿ ಮಂಡ್ಯ ಹಾಲು ಒಕ್ಕೂಟವೂ ಉತ್ತಮವಾಗಿ ಕೆಲಸ ಮಾಡುತ್ತಿದೆ. ಗ್ರಾಮದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಬಿಎಂಸಿ ಘಟಕವನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಚಿನಕುರಳಿ ಡೈರಿಯನ್ನು ಮಾದರಿ ಡೈರಿಯನ್ನಾಗಿ ಮಾಡಲು ಎಲ್ಲರೂ ಒಗ್ಗಟಿನಿಂದ ಶ್ರಮಿಸಬೇಕು ಎಂದರು.
ಈ ಸಂದರ್ಭ ಜಿಪಂ ಸದಸ್ಯ ಸಿ. ಅಶೋಕ್, ಮನ್‍ಮುಲ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಉಪಾಧ್ಯಕ್ಷ ಜಿ.ಇ.ರವಿಕುಮಾರ್, ತಾಪಂ ಸದಸ್ಯ ಸಿ.ಎಸ್.ಗೋಪಾಲಗೌಡ, ಡೈರಿ ಅಧ್ಯಕ್ಷ ವನರಾಜು, ಮಾಜಿ ಅಧ್ಯಕ್ಷ ರಮೇಶ್, ವರದರಾಜು, ಮಹೇಶ್, ಲೋಕೇಶ್, ಉಪಾಧ್ಯಕ್ಷೆ ತಾಯಮ್ಮ, ಮಾಜಿ ಉಪಾಧ್ಯಕ್ಷ ರಾಮೇಗೌಡ, ರೇವಣ್ಣ, ಗ್ರಾಪಂ ಅಧ್ಯಕ್ಷೆ ಪ್ರೇಮ ಹಾಗೂ ಉಪಾಧ್ಯಕ್ಷ ನಾಗರಾಜು, ಯಜಮಾನ್ ಸುಬ್ಬೇಗೌಡ ಹಾಗೂ ಎಲ್ಲಾ ಗ್ರಾಪಂ ಸದಸ್ಯರು ಹಾಜರಿದ್ದರು.

 

Translate »