ಕೊಡಗಿನಲ್ಲಿ ಸ್ಥಳಾಂತರಗೊಂಡ ಅನಾಥ ಪ್ರಾಣಿಗಳಿಗೆ ಸ್ವಯಂಸೇವಕರ ಸಹಾಯಹಸ್ತ
ಕೊಡಗು

ಕೊಡಗಿನಲ್ಲಿ ಸ್ಥಳಾಂತರಗೊಂಡ ಅನಾಥ ಪ್ರಾಣಿಗಳಿಗೆ ಸ್ವಯಂಸೇವಕರ ಸಹಾಯಹಸ್ತ

September 10, 2018

ಕುಶಾಲನಗರ: ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಸಾವಿರಾರು ಕುಟುಂಬಗಳು ಮನೆ, ಮಠ ಕಳೆ ದುಕೊಂಡು ಆಶ್ರಯವಿಲ್ಲದಂತಾಗಿರುವುದಲ್ಲದೆ, ನೂರಾ ಜಾನುವಾರುಗಳು ಸ್ಥಳಾಂತರಗೊಂಡಿವೆ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಡಳಿತ ಮತ್ತು ವಿವಿಧ ಸಾಮಾ ಜಿಕ ಸಂಘಟನೆಗಳ ಸ್ವಯಂ ಸೇವಕರು ಪರಿಹಾರ ಕೇಂದ್ರಗಳಲ್ಲಿರುವ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವುದರ ಜೊತೆಗೆ ಪ್ರಾಣಿ ಸಂರಕ್ಷಣಾ ಎನ್‍ಜಿಓಗಳು ಸ್ಥಳಾಂತರಗೊಂಡ ಪ್ರಾಣಿಗಳನ್ನು ರಕ್ಷಿಸಿ, ಅವು ಗಳಿಗೆ ಸೌಕರ್ಯ ನೀಡುವಲ್ಲಿ ಸರ್ವ ಪ್ರಯತ್ನ ಮಾಡುತ್ತಿವೆ.

ಅನಾಥವಾದ ಸಾಕು ಪ್ರಾಣಿಗಳು ಮತ್ತು ಜಾನುವಾರುಗಳಿಗೆ ಆಶ್ರಯ, ಆಹಾರ ನೀಡುವುದರ ಜೊತೆಗೆ, ಗಾಯಗೊಂಡ ಪ್ರಾಣಿಗಳಿಗೆ ವೈದ್ಯಕೀಯ ಸೌಲಭ್ಯ ಒದಗಿಸಲಾಗುತ್ತಿದೆ. ಪಿರಿಯಾಪಟ್ಟಣ ತಾಲೂಕಿನ ಬೈಲು ಕುಪ್ಪೆಯಲ್ಲಿ ಬೇಸ್ ಕ್ಯಾಂಪ್ ಸ್ಥಾಪಿಸಿ ಪ್ರಾಣಿಗಳಿಗೆ ಆಶ್ರಯ ನೀಡಲಾಗಿದೆ. ಪ್ರಾಣಿ ಗಳನ್ನು ಅವುಗಳ ಮಾಲೀಕರಿಗೆ ತಲುಪಿಸುವ ತನಕ ಅಥವಾ ಅವುಗಳನ್ನು ದತ್ತು ಮಾಡುವ ತನಕ ಆಹಾರ, ಆಶ್ರಯ ಹಾಗೂ ವೈದ್ಯಕೀಯ ಸೇವೆ ನೀಡುವುದಾಗಿ ಸ್ವಯಂ ಸೇವಕರು ತಿಳಿಸಿದ್ದಾರೆ.

ಸ್ವಯಂಸೇವಕರು ಆಗಸ್ಟ್ 18 ರಿಂದ ಮಕ್ಕಂದೂರು, ಮುಕ್ಕೊಡ್ಲು, ಮಾದಾಪುರ ಮತ್ತು ಹಟ್ಟಿಹೊಳೆ ಇನ್ನಿತರ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾ ಚರಣೆ ಆರಂಭಿಸಿದರು. ಇಲ್ಲಿಯವರೆಗೆ ಸುಮಾರು 20 ಹಸುಗಳು, 37 ನಾಯಿ ಗಳು ಸೇರಿದಂತೆ ಇನ್ನಿತರ ವಿವಿಧ ಜಾತಿಯ ಪ್ರಾಣಿಗಳನ್ನು (ಅವುಗಳಲ್ಲಿ ಹೆಚ್ಚಿನವು ಕಂಟ್ರಿ ಕೆನೈನ್ಸ್) ರಕ್ಷಿಸಿ ಅವುಗಳಿಗೆ ಆಶ್ರಯ ಕಲ್ಪಿಸಲಾಗಿದೆ. ಸ್ವಯಂ ಸೇವಕರು ಇನ್ನೂ ಅನಾ ಥವಾದ ಜಾನುವಾರುಗಳು ಮತ್ತು ನಾಯಿ ಗಳನ್ನು ಹುಡುಕುವ ಕಾರ್ಯದಲ್ಲಿ ತೊಡಗಿದ್ದಾರೆ. ರಕ್ಷಿಸಲಾದ ಹಸುಗಳಿಗೆ ಕುಶಾಲನಗರ ಸಮೀಪದ ಕೊಪ್ಪದಲ್ಲಿರುವ ಬೋಟಾ ಫಾರಂನಲ್ಲಿ ಆಶ್ರಯ ನೀಡಲಾಗಿದ್ದು, ನಾಯಿ ಗಳಿಗೆ ಬೈಲುಕುಪ್ಪೆ ಬಳಿಯಿರುವ ಟಿಬೇಟಿಯನ್ ಸೆಟಲ್‍ಮೆಂಟ್ (ವಸಾಹತು)ನಲ್ಲಿ ಆಶ್ರಯ ಕಲ್ಪಿಸಲಾಗಿದೆ. ಜಾನುವಾರುಗಳಿಗೆ ತಮ್ಮ ಫಾರಂನಲ್ಲಿ ಸ್ಥಳಾವಕಾಶ ನೀಡಿದ್ದು, ಅವುಗಳಿಗೆ ಆಹಾರ ನೀಡಿ ಆರೈಕೆ ಮಾಡ ಲಾಗುತ್ತಿದೆ ಎಂದು ಬೋಟಾ ಫಾರಂನ ಮಾಲೀಕ ಆಶ್ರಫ್ ತಿಳಿಸಿದ್ದಾರೆ.

ಮತ್ತೋರ್ವ ಸ್ವಯಂಸೇವಕರಾದ ಕೊಡಗು ಮೂಲದ ಮತ್ತು ಸಿಂಗಾಪೂರ್‍ನಲ್ಲಿ ವಾಸ ವಾಗಿರುವ ಹೆಚ್‍ಎಸ್‍ಐನ ಶಿಲ್ಪಾ ಮಾತ ನಾಡಿ, ಮೂರು ಮಂದಿ ಸಹಾಯಕರೊಂ ದಿಗೆ ಜಾನುವಾರುಗಳನ್ನು ಆರೈಕೆ ಮಾಡ ಲಾಗುತ್ತಿದೆ. ಫಾರಂನಲ್ಲಿ ಪೌಷ್ಠಿಕತೆಯುಳ್ಳ ಹುಲ್ಲು ಸಮೃದ್ಧಿಯಾಗಿ ಬೆಳೆದಿದ್ದು, ಪ್ರತಿ ದಿನ ಜಾನುವಾರುಗಳಿಗೆ ಹುಲ್ಲು ನೀಡಲಾ ಗುತ್ತಿದೆ. ಅವುಗಳಲ್ಲಿ ಒಂದು ಹಸು ಗರ್ಭ ಧರಿಸಿದ್ದು, ಕೆಲವು ಹಾಲು ನೀಡುತ್ತಿವೆ ಎಂದರು.

“ಹಾಲನ್ನು ಮಾರಾಟ ಮಾಡಲಾಗು ತ್ತಿದ್ದು, ಅದರಿಂದ ಬಂದ ಹಣವನ್ನು ಸಂಗ್ರ ಹಿಸಲಾಗುತ್ತಿದೆ. ಹಸುಗಳ ಮಾಲೀಕರು ಬಂದಾಗ ಹಸುಗಳೊಂದಿಗೆ ಸಂಗ್ರಹಿಸಲಾ ಗುವ ಹಣವನ್ನೂ ಸಹ ಅವರಿಗೆ ನೀಡ ಲಾಗುವುದು’’ ಎಂದು ಬೋಟಾ ಫಾರಂನ ಕೆಲಸಗಾರ ತಿಳಿಸಿದ್ದಾರೆ.

ಬೆಂಗಳೂರಿನ ಮಾಹಿತಿ ತಂತ್ರಜ್ಞಾನದ ವೃತ್ತಿಪರರ ತಂಡವೊಂದು ಪ್ರಾಣಿ ಸ್ವಯಂ ಸೇವಕರಿಗೆ ಧನ ಸಹಾಯ ಮತ್ತು ಔಷಧಿಗಳನ್ನು ನೀಡುತ್ತಿದೆ. ಕ್ಯೂಪಾ ತಂಡವು ಟಿಬೇಟಿಯನ್ ಸೆಟಲ್ ಮೆಂಟ್ ಸಮೀಪದಲ್ಲಿ ಮೂರು ನಾಯಿ ಗಳ ಪರಿಹಾರ ಕೇಂದ್ರವನ್ನು ಸ್ಥಾಪಿಸಿದೆ. ಪರಿಹಾರ ಕೇಂದ್ರವನ್ನು ನೋಡಿಕೊಳ್ಳು ತ್ತಿರುವ ಕ್ಯೂಪಾ ಸ್ವಯಂಸೇವಕ ಕಲಿ ಯಂಡ ರೋಹನ್ `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿ, ಅನಾಥಗೊಂಡ ನಾಯಿಗಳು ಮಾಲೀಕರ ಸಂಪರ್ಕವಿಲ್ಲದೆ ಅವ್ಯವಸ್ಥಿತಗೊಂಡಿದ್ದು, ಅವುಗಳನ್ನು ಚೆನ್ನಾಗಿ ಆರೈಕೆ ಮಾಡಲಾಗುತ್ತಿದೆ. ಕೆಲವು ಮಿಶ್ರ ತಳಿಗಳಾಗಿದ್ದು, ಶುದ್ಧ ತಳಿಗಳು ಇರುವುದಿಲ್ಲ.

“ಈಗ ನಾಯಿಗಳು ನಮ್ಮ ಮಾತುಗಳಿಗೆ ಸ್ಪಂದಿಸುತ್ತಿದ್ದು, ಅವುಗಳನ್ನು ಇತರೆ ನಾಯಿ ಗಳೊಂದಿಗೆ ಪರಿಚಯಿಸುವ ಕಾರ್ಯ ಮಾಡಲಾಗುತ್ತಿದೆ. ಪರಿಹಾರ ಕೇಂದ್ರದಲ್ಲಿ ನಾಯಿಗಳನ್ನು ಸ್ವಚ್ಛಂದವಾಗಿ ಓಡಾಡಲು ಬಿಡಲಾಗುತ್ತಿದೆ. ಕೆಲವು ಹಸಿದ ಮತ್ತು ದಣಿದ ನಾಯಿಗಳಿಗೆ ಫ್ಲ್ಯೂಡ್ ಡ್ರಿಪ್ಸ್ ಅಗತ್ಯವಿದ್ದು, ಅವುಗಳನ್ನು ಪೂರೈಸ ಲಾಗುತ್ತಿದೆ. ಈಗ ಅವುಗಳು ಚೇತರಿಸಿಕೊಳ್ಳು ತ್ತಿವೆ’’ ಎಂದರು. ವಲ್ರ್ಡ್ ವೆಟೆರಿನೇರಿ ಯನ್ ಅಸೋಸಿಯೇಷನ್ ಡಾ. ಅಮೂಲ್ಯ ಮತ್ತು ಪಿಎಫ್‍ಎನ ಡಾ. ಮೇಘನಾ ಅವರು ಅವುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಹೆಚ್‍ಎಸ್‍ಐ ಮತ್ತು ಇತರೆ ಪ್ರಾಣಿ ಸಂರಕ್ಷಣಾ ಸಂಘಟನೆಗಳು ನಾಯಿಗಳಿಗೆ ವಸತಿ ಕಲ್ಪಿಸಿವೆ. ನಾಯಿಗಳಿಗೆ ಮಾಲೀಕರಿದ್ದಲ್ಲಿ ಅದನ್ನು ಹೊರತುಪಡಿಸಿ, ಉಳಿದ ನಾಯಿಗಳನ್ನು ದತ್ತು ತೆಗೆದುಕೊಳ್ಳಲು ಮುಕ್ತ ಅವಕಾಶ ನೀಡಲಾಗಿದೆ.

“ಪುನರ್ವಸತಿ ಕಾರ್ಯ ಮುಗಿದ ತಕ್ಷಣ ತಮ್ಮ ನಾಯಿಗಳನ್ನು ಮನೆಗೆ ತೆಗೆದು ಕೊಂಡು ಹೋಗುವುದಾಗಿ ಕೆಲವು ಮಾಲೀಕರು ಸಂಪರ್ಕಿಸಿ ತಿಳಿಸಿದ್ದಾರೆ. ತಮ್ಮ ನಾಯಿ ಗಳನ್ನು ಗುರುತಿಸಿ ಮನೆಗೆ ತೆಗೆದುಕೊಂಡು ಹೋಗಲು ನಾಯಿಗಳ ಮಾಲೀಕರನ್ನು ಕಾಯು ತ್ತಿದ್ದೇವೆ” ಎಂದು ರೋಹನ್ ತಿಳಿಸಿದ್ದಾರೆ.

ಸಾಕು ನಾಯಿಗಳು ಮತ್ತು ಜಾನುವಾರು ಗಳ ಮಾಲೀಕರು ಮನೆಯಿಲ್ಲದೆ ಅವರೇ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಈ ಪರಿಸ್ಥಿತಿಯಲ್ಲಿ ತಮ್ಮ ನಾಯಿಗಳು ಮತ್ತು ಜಾನುವಾರುಗಳನ್ನು ಮರಳಿ ತೆಗೆದುಕೊಂಡು ಹೋಗುವುದು ಅಸಾಧ್ಯ ವಾದ ಕೆಲಸ.

ಕೊಡಗು ಜಿಲ್ಲಾಡಳಿತ ತಾತ್ಕಾ ಲಿಕ ಆಶ್ರಯ ತಾಣ ನಿರ್ಮಿಸುವವರೆಗೆ ಸಾಕು ನಾಯಿಗಳನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಪರಿಹಾರ ಕೇಂದ್ರ ಮತ್ತು ಹೋಂ ಸ್ಟೇಗಳಲ್ಲಿ ವಾಸಿಸುತ್ತಿರುವ ಅವುಗಳ ಮಾಲೀಕರು ತಿಳಿಸಿದ್ದಾರೆ. ಒಂದು ವೇಳೆ ಸರ್ಕಾರ ತಾತ್ಕಾಲಿಕವಾಗಿ ಮನೆಗಳನ್ನು ನಿರ್ಮಿಸಿಕೊಟ್ಟರೂ, ಪ್ರಾಣಿಗಳಿಗೆ ವಿಶಾಲವಾದ ಸ್ಥಳಾವಕಾಶ ಬೇಕಾಗುವುದರಿಂದ ಅವುಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದು ನಾಯಿಗಳ ಮಾಲೀಕ ಮೇದಪ್ಪ ತಿಳಿಸಿದ್ದಾರೆ. ಮಕ್ಕಂದೂರಿನಲ್ಲಿದ್ದ ಮೇದಪ್ಪ ಅವರ ಮನೆ ಆಗಸ್ಟ್ 17 ರಂದು ಕೊಚ್ಚಿ ಹೋಗಿದೆ.

ಎರಡು ಪೊಮೇರಿಯನ್ಸ್ ಸೇರಿದಂತೆ ನಾಲ್ಕು ನಾಯಿಗಳನ್ನು ದತ್ತು ಪಡೆದು ಕೊಂಡು ಅವುಗಳನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿರುವ ದತ್ತು ಸ್ವೀಕರಿಸುವ ಮಾಲೀಕರಿಗೆ ಕಳುಹಿಸಲಾಗು ವುದು ಎಂದು ರೋಹನ್ ತಿಳಿಸಿದ್ದಾರೆ. ನಾಯಿಗಳನ್ನು ದತ್ತು ಪಡೆದುಕೊಳ್ಳಲು ಆಸಕ್ತಿಯುಳ್ಳವರು ಮೊ. 97401 09944 ಅನ್ನು ಸಂಪರ್ಕಿಸಲು ಕೋರಲಾಗಿದೆ.

Translate »