ಉತ್ತರ ಅಮೇರಿಕದ ವಾರ್ಷಿಕ ಕೊಡವ ಕೂಟ: ಕೊಡಗಿನ ಪುನರ್ ನಿರ್ಮಾಣಕ್ಕೆ ರೂ.35 ಲಕ್ಷ ಸಂಗ್ರಹಿಸಿದ ಸದಸ್ಯರು
ಕೊಡಗು

ಉತ್ತರ ಅಮೇರಿಕದ ವಾರ್ಷಿಕ ಕೊಡವ ಕೂಟ: ಕೊಡಗಿನ ಪುನರ್ ನಿರ್ಮಾಣಕ್ಕೆ ರೂ.35 ಲಕ್ಷ ಸಂಗ್ರಹಿಸಿದ ಸದಸ್ಯರು

September 10, 2018

ಮೈಸೂರು: ಉತ್ತರ ಅಮೇ ರಿಕದ ವಾರ್ಷಿಕ ಕೊಡವ ಕೂಟವು (ಸಮ್ಮೇಳನ) ದಕ್ಷಿಣ ಕೆರೋಲಿನ (South Carolina) ದ ಮಿರ್ಟಲ್ ಬೀಚ್‍ನಲ್ಲಿ ಇತ್ತೀಚೆಗೆ ನಡೆಯಿತು. ಅಂದಹಾಗೆ ಮಿರ್ಟಲ್ ಬೀಚನ್ನು ಜಗತ್ತಿನ ಗಾಲ್ಫ್ ರಾಜಧಾನಿ ಎಂದೂ ಕರೆಯಲಾಗುತ್ತದೆ.

ಮಿರ್ಟಲ್ ಬೀಚ್‍ನ Double Tree Resort by Hilton ನಲ್ಲಿ 370ಕ್ಕೂ ಹೆಚ್ಚು ಕೊಡವರು ಈ ಎರಡು ದಿನಗಳ ಕೂಟದಲ್ಲಿ ಭಾಗವಹಿಸಿದ್ದರು.ಕೊಡಗಿನ ಸಾಂಪ್ರದಾಯಿಕ ಅಕ್ಕಿ ತಿನಿಸು ಆದ ‘ಕಡಂಬುಟ್ಟು’ವನ್ನು ಹದ ಮಾಡಿ ತಯಾರಿಸುವುದರ ಮೂಲಕ ಒಂದು ದಿವಸ ಮುಂಚೆಯೇ ಈ ಎರಡು ದಿನಗಳ ಸಂಭ್ರಮದ ಕೂಟಕ್ಕೆ ಚಾಲನೆ ನೀಡಲಾಯಿತು.

ಈ ತಯಾರಿಕೆಯು ಡಾ. ಕಂಬೆಯಂಡ ರಮೇಶ್ ಮತ್ತು ಡಾ. ಲೀಲಾ ದಂಪತಿಯ ಮನೆಯಲ್ಲಿ ನಡೆಯಿತು. Pennsylvania, Maryland, Virginia ಮತ್ತು Georgia ದಲ್ಲಿರುವ ಕೊಡವರ ಸಹಕಾರದೊಂದಿಗೆ ಕ್ಯಾರೋಲಿನಾದ ಕೊಡವರ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸ ಲಾಗಿತ್ತು. ಕೂಟದ ಮೊದಲನೆಯ ದಿನ, ಎಲ್ಲಾ ವಯೋಮಿತಿಯ ಸದಸ್ಯರಿಗೆ ವಿವಿಧ ಆಟಗಳ ಮತ್ತು ಮನೋರಂಜ ನೆಯ ಕಾರ್ಯಕ್ರಮಗಳು ನಡೆದವು. ಅನೌಪಚಾರಿಕ ಕೂಟಪೂರ್ವ (Pre-Convention)ದಲ್ಲಿ ಭಾಗವಹಿಸಿದ್ದ 350 ಕ್ಕೂ ಹೆಚ್ಚಿನ ಅತಿಥಿಗಳು ತಡ ರಾತ್ರಿಯವರೆಗೂ ಸಂತೋಷಕೂಟದಲ್ಲಿ ಮಿಂದೆದ್ದರು.

ಪ್ರತಿಭಾವಂತ ಮಕ್ಕಳಾದ ತರಾನ ಮುಕ್ಕಾಟಿರ (ವಯೋಲಿನ್) ಮತ್ತು ಕನಿಷ್ಕ್ ಮುಕ್ಕಾಟಿರ (ಪಿಯನೊ)ರವರು ತಮ್ಮ ಪ್ರತಿಭೆಯನ್ನು ಹೊರಸೂಸಿದರೆ, ಅನುಭವೀ ನೃತ್ಯಗಾರ್ತಿಯಾದ ನಮಿತ ಅಚ್ಚ್ಚಾಂಡಿರರವರು ತಮ್ಮ ಆಕರ್ಷಕ ನ್ಯತ್ಯದಿಂದ ನೆರೆದವರನ್ನು ರಂಜಿಸಿದರು. ಇದೆಲ್ಲದರ ಹೊರತಾಗಿ, 5 ವರ್ಷದ ಬಾಲೆ ವಿಯಾಂಕ ಕಳ್ಳೇಂಗಡ ಅವರ ನೃತ್ಯ ಪ್ರದ ರ್ಶನ (Impromptu dance performance) ಎಲ್ಲರ ಕಣ್ಮನ ಸೆಳೆ ಯಿತು. ಈ ಬಾಲೆಗೆ ಅನ್ವಿತ ಮೊಣ್ಣಂಡರ ವರು ಮನೋಸ್ಥೈರ್ಯ ತುಂಬಿದ್ದರು.

ಕೂಟದ (Convention) ಅಂಗವಾಗಿ ಬೆಳಗಿನ ನಡಿಗೆಯ ಕಾರ್ಯಕ್ರಮ ಆಯೋ ಜಿಸಲಾಗಿತ್ತು. ಈ ಕಾರ್ಯಕ್ರಮವು ಆರೋಗ್ಯ ಹಾಗೂ ಸೌಖ್ಯದ ವೃದ್ಧಿಗಾಗಿ ಮಾತ್ರವ ಲ್ಲದೇ, ಕೊಡಗಿನಲ್ಲಿರುವ ಆರ್ಥಿಕವಾಗಿ ಹಿಂದುಳಿದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣ ಸಂಗ್ರಹಣೆಗೂ ಮೀಸಲಾಗಿತ್ತು.

ಕೂಟದ ಎರಡನೇ ದಿನದ ಕಾರ್ಯಕ್ರಮಗಳಿಗೆ ಡಾ. ಕಂಬೇಯಂಡ ರಮೇಶ್ ರವರು ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು. ಡಾ. ಲೀಲಾ ಅವಿ ನಾಶ್ ಚೊಟ್ಟಂಗಡರವರು ಪ್ರಾರ್ಥಿಸಿದರು. ಕೊಡಗಿನ ಇತ್ತೀಚಿನ ಪ್ರವಾಹ ಮತ್ತು ಭೂಕುಸಿತದಲ್ಲಿ ಸಾವಿಗೀಡಾದವರನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.

ಥಳಿಯತಕ್ಕಿಬೊಳ್ಚ ಮತ್ತು ಬಾಳೋಪಾಟ್ ಮುಂತಾದ ಕೊಡವ ಸಾಂಪ್ರದಾಯಿಕ ಆಚರಣೆಗಳು ಕೂಟಕ್ಕೆ ಮತ್ತಷ್ಟು ಮೆರಗು ನೀಡಿದವು. ಈ ವಿಶಿಷ್ಟ ಕೊಡವ ಸಾಂಪ್ರದಾಯಿಕ ಆಚರಣೆಗಳನ್ನು ನಮ್ಮ ಯುವ ಪೀಳಿಗೆಗೆ ಪರಿಚಯಿಸಲಾಯಿತು. ಈ ಕಾರ್ಯಕ್ರಮವನ್ನು ಕೇಚಮಾಡ ಅಯ್ಯಪ್ಪ ಮತ್ತು ಆಶಿಕ್ ಪಾರುವಂಗಡ ಅವರು ಭರ್ಜರಿಯಾಗಿ ನಡೆಸಿಕೊಟ್ಟರು.ಡೆನ್ವರ್ ನಗರದ ಕಳ್ಳಿಚಂಡ ಕಾವೇರಿ ಯವರ ಪ್ರಾರ್ಥನೆಯೊಂದಿಗೆ ದಿನದ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಾರ್ಥನೆಯ ನಂತರ ಹಾಡು ಹಾಗೂ ನೃತ್ಯ ಗಳನ್ನೊಳಗೊಂಡ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಒಂದರ ಹಿಂದೊಂದರಂತೆ ನಡೆದವು. ಕೊಡಗಿನ ನೆಲ, ಜನ ಮತ್ತು ಸಂಸ್ಕೃತಿಯ ಬಗ್ಗೆ ಒಂದು Quiz ಕಾರ್ಯ ಕ್ರಮವನ್ನೂ ಸಹ ನಿತನ್ ತಿಮ್ಮಯ್ಯ ಮೊಣ್ಣಂಡರವರ ನೇತೃತ್ವದಲ್ಲಿ ನಡೆಸಲಾಯಿತು.

ಕೊಡವ ಕೂಟದ ಸಂಸ್ಥಾಪಕ ಅಧ್ಯಕ್ಷರಾದ ಗಿನಾ ಕೊಂಗಂಡವರು ಕೂಟವು ನಡೆದು ಬಂದ ಹಾದಿಯನ್ನು ಹಾಗೂ ಸಾಧನೆಗಳನ್ನು ವಿವರಿಸಿದರು. ಕೂಟದ ಕಾರ್ಯಕ್ರಮಗಳಲ್ಲಿ ಕೊಡಗಿನ ಪೊನ್ನಂಪೇಟೆಯಲ್ಲಿರುವ ಶ್ರೀರಾಮಕೃಷ್ಣ ವೃದ್ಧಾಶ್ರಮಕ್ಕೆ ನೆರವು, ವಾಲ್ನೂರಿನ ದೇವಕ್ಕಾಡ್ ನಲ್ಲಿ ಕಾನೂನು ಬಾಹಿರವಾಗಿ ನೆಲೆಗೊಂಡ ಜನರನ್ನು ಸ್ಥಳಾಂತರಿಸುವುದಕ್ಕೆ ತಗುಲಿದ ಕಾನೂನು ನೆರವಿನ ಖರ್ಚನ್ನು ಭರಿಸಿದ್ದು ಮತ್ತು ಕೊಡಗಿನಾದ್ಯಂತ 10,000 ಕ್ಕೂ ಹೆಚ್ಚಿನ ಗಿಡಗಳನ್ನು ನೆಟ್ಟಿದ್ದು ಪ್ರಮುಖವಾಗಿ ಸೇರಿವೆ.

ಪಾರುವಂಗಡ ಕುಟ್ಟಯ್ಯ ಮತ್ತು ಪೂಜಾ ದಂಪತಿಯ ಪುತ್ರನಾದ ಪಾರುವಂಗಡ ಬೋಪಯ್ಯನಿಗೆFirst High School achievement ಪ್ರಶಸ್ತಿಯನ್ನು (ಕೊಡವ ಕೂಟ ಕೊಡಮಾಡುವ ಸಾವಿರ ಡಾಲರ್ ನಗದು ಪ್ರಶಸ್ತಿ) ಈ ಸಂದರ್ಭ ದಲ್ಲಿ ನೀಡಲಾಯಿತು.

ಭಾರೀ ಮಳೆ ಮತ್ತು ಭೂಕುಸಿತದಿಂದ ನಲುಗಿದ ಕೊಡಗಿನ ಪುನಶ್ಚೇತನಕ್ಕಾಗಿ ಕೊಡವ ಕೂಟ ಶ್ರಮವಹಿಸುತ್ತಿದ್ದು, ಕೂಟವು ಈ ಸಮ್ಮೇಳನವನ್ನು ದಾನಿಗಳಿಂದ ಹಣ ಸಂಗ್ರಹಿಸುವ ಪ್ರಯತ್ನಕ್ಕೂ ಬಳಸಿಕೊಂಡಿತು. ಸಮ್ಮೇಳನದಲ್ಲಿ ಸಂಗ್ರ ಹಿಸಲಾದ ಒಟ್ಟು ಹಣವನ್ನು ಕೊಡಗಿನ ಸಂತ್ರಸ್ತರ ಪುನರ್ವಸತಿಗಾಗಿ ಉಪ ಯೋಗಿಸಲಾಗುತ್ತದೆ.

ಕೊಡವ ಕೂಟವು ಈ ಉದ್ದೇಶಕ್ಕಾಗಿ ಈವರೆಗೂ 50,000 ಡಾಲರ್‌ಗೂ (ರೂ. 35ಲಕ್ಷ) ಹೆಚ್ಚಿನ ಹಣ ಸಂಗ್ರಹಿಸಿದ್ದು, ಕೊಡಗಿನ ಸಂತ್ರಸ್ತರ ನೆರವಿಗಾಗಿ ಇನ್ನೂ ಹೆಚ್ಚಿನ ಹಣ ಸಂಗ್ರಹಿಸುವ ಗುರಿ ಹೊಂದಿದೆ.

ಸಮ್ಮೇಳನ ಆಯೋಜನೆಯಲ್ಲಿ, ಡಾ. ಕುಳಿಯಕಂಡ ಸಣ್ಣು ಮತ್ತು ಡಾ.ನಳಿನಿ, ಆಲೆಮಾಡ ಗೀತಾ ಕಿರಣ್, ಮುಕ್ಕಾಟಿರ ನೈನಾಉದಯ್, ಡಾ.ಬಡುವಂಡ ಚಂಗು ಮಣಿ ಮತ್ತು ಡಾ.ಶೋಭ, ಕಾಂಡೇರ ದೀಪ್ತಿ ಶರತ್, ಕೊಲೇರ ಶೃತಿ ಮತ್ತು ತರುಣ್, ಮಂಡೇಪಂಡ ಉತ್ತಪ್ಪ, ಚೇಂದ್ರಿ ಮಾಡ ದೀಪಾ ಮತ್ತು ಬೋಪಣ್ಣ, ಚೊಟ್ಟಂಗಡ ರೂಪಿಕ ಮತ್ತು ಅವಿನಾಶ್ ರವರಿಂದ ಕೂಡಿದ ಕೇಂದ್ರ ತಂಡ (Core team)ವು ಪ್ರಮುಖ ಪಾತ್ರ ವಹಿಸಿತ್ತು. ನಾಲ್ಕು ದೇಶಗಳ ಹಾಗೂ ಅಮೆ ರಿಕದ 27 ರಾಜ್ಯಗಳಲ್ಲಿ ನೆಲೆಗೊಂಡಿರುವ ಕೊಡವ ಸಮುದಾಯದ ಸದಸ್ಯರು ಹಾಗೂ 174ಕ್ಕೂ ಹೆಚ್ಚು ಕೊಡವ ಪಂಗಡದ ಕುಟುಂಬಗಳು ಈ ಕೂಟ (ಸಮ್ಮೇಳನ)ದಲ್ಲಿ ಭಾಗವಹಿಸಿದ್ದವು. ಮುಂದಿನ ಸಮ್ಮೇಳನವನ್ನು ಬೊಸ್ಟನ್ (Boston) ನಗರದಲ್ಲಿ ನಡೆಸಲು ತೀರ್ಮಾನಿಸಲಾಯಿತು.

Translate »