ಮನ್‍ಮುಲ್‍ನಿಂದ ಸಿಗುವ ಸೌಲಭ್ಯ ಸದ್ಬಳಕೆಗೆ ಕರೆ
ಮಂಡ್ಯ

ಮನ್‍ಮುಲ್‍ನಿಂದ ಸಿಗುವ ಸೌಲಭ್ಯ ಸದ್ಬಳಕೆಗೆ ಕರೆ

September 10, 2018

ಭಾರತೀನಗರ: ಮನ್‍ಮುಲ್ ನಿಂದ ಸಿಗುವ ಸೌಲಭ್ಯಗಳನ್ನು ರೈತರು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳ ಬೇಕೆಂದು ಮನ್‍ಮುಲ್ ಅಧ್ಯಕ್ಷ ಕದಲೂರು ರಾಮಕೃಷ್ಣ ತಿಳಿಸಿದರು.

ಶೆಟ್ಟಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಮಂಡ್ಯ ಕೃಷಿ ಪ್ರಧಾನ ಜಿಲ್ಲೆ ಯಾಗಿದ್ದರೂ, ಕಳೆದ 15 ವರ್ಷಗಳಿಂದ ಸತತ ಬರಗಾಲ ಎದುರಿಸುತ್ತಿದ್ದೇವೆ. ರೈತರು ಅಲ್ಪಮಟ್ಟಿಗೆ ನೆಮ್ಮದಿಯಿಂದ ಇದ್ದಾರೆ ಎಂದರೆ ಅದು ಪಶುಸಂಗೋಪನೆಯಿಂದ ಮಾತ್ರ ಎಂದರು.

ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹಾಲಿನ ಉತ್ಪಾದನೆ ಹೆಚ್ಚಾಗುತ್ತಿದ್ದು, ಇದರಿಂದ ರೈತರಿಗೂ ಅನುಕೂಲವಾಗುತ್ತಿದೆ. ಹೈನುಗಾರಿಕೆ ಒಂದು ಉಪಕಸುಬಾಗಿದ್ದು, ಉತ್ತಮ ಲಾಭಾಂಶ ಕಾಣಬಹುದು. ಆದ್ದ ರಿಂದ ರೈತರು ಹೆಚ್ಚು ಹೈನುಗಾರಿಕೆಯಲ್ಲಿ ತೊಡಗಬೇಕೆಂದು ಸಲಹೆ ನೀಡಿದರು.

ಇದೇ ವೇಳೆ ಗ್ರಾಮದಲ್ಲಿ ಬಿಎಂಸಿ ಘಟಕ, ಹಸುಗಳಿಗೆ ಇನ್ಷೂರೆನ್ಸ್, ಹಾಲು ಹಾಕುವ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಜನಶ್ರೀ ಭೀಮಾ ಯೋಜನೆಯಡಿ ಅಪಘಾತವಾದ ಸದಸ್ಯರ ಕುಟುಂಬಕ್ಕೆ ಪರಿಹಾರ ನೀಡುವ ಸೌಲಭ್ಯ ಗಳನ್ನು ಒದಗಿಸಿ ಕೊಡುವುದಾಗಿ ತಿಳಿಸಿದರು. ಮನ್‍ಮುಲ್ ನಿರ್ದೇಶಕ ಎಂ.ಕೆ.ಉಮೇಶ್ ಮಾತನಾಡಿ, ಹೈನು ಗಾರಿಕೆಗೆ ಉತ್ತೇಜನ ನೀಡಲು ಸರ್ಕಾರ ದಿಂದ ಹಲವು ಯೋಜನೆಗಳನ್ನು ರೂಪಿಸ ಲಾಗಿದೆ. ಹಸು ಸಾಕಾಣೆಯಿಂದ ಕುಟುಂಬ ನಿಭಾಯಿಸಬಹುದು ಎಂದರು.

ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿ ಹಸುಗಳಿಗೆ ಉಚಿತ ಚಿಕಿತ್ಸೆ ಮತ್ತು ಔಷಧಿಗಳನ್ನು ನೀಡಲಾಗುತ್ತಿದೆ. ಇದನ್ನು ರೈತರು ಸದುಪಯೋಗ ಪಡಿಸಿ ಕೊಳ್ಳಬೇಕೆಂದು ಕರೆ ನೀಡಿದರು.
ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ರಾಮಕೃಷ್ಣಯ್ಯ ಮಾತನಾಡಿದರು. ಪಶು ವೈದ್ಯಾಧಿಕಾರಿ ಡಾ.ಟಿ.ಶ್ರೀನಿವಾಸ್ ಅವರನ್ನು ಸಂಘದಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮನ್‍ಮುಲ್ ವಿಸ್ತರಣಾಧಿಕಾರಿ ಆರ್.ಶಿವಶಂಕರ್, ಸಂಘದ ಅಧ್ಯಕ್ಷ ಎಸ್.ಸಿ. ನಾಗರಾಜು, ಉಪಾಧ್ಯಕ್ಷ ನಂಜುಂಡೇ ಗೌಡ, ಕಾರ್ಯದರ್ಶಿ ನಾಗರಾಜು, ಸಂಘದ ನಿರ್ದೇಶಕರು ಹಾಗೂ ಉತ್ಪಾದಕರು ಸೇರಿದಂತೆ ಇತರರಿದ್ದರು.

 

Translate »