ಶ್ರೀಮುತ್ತುರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ
ಮಂಡ್ಯ

ಶ್ರೀಮುತ್ತುರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ

September 10, 2018

ಕೆ.ಆರ್.ಪೇಟೆ: ಪಟ್ಟಣದ ಹೇಮಗಿರಿ ರಸ್ತೆಯಲ್ಲಿರುವ ಶ್ರೀಮುತ್ತುರಾಯ ಸ್ವಾಮಿ ದೇವಾಲಯದಲ್ಲಿ ಕಡೇ ಶ್ರಾವಣ ಶನಿವಾರದ ಪ್ರಯುಕ್ತ ದೇವರಿಗೆ ಅಭಿಷೇಕ, ಪುಷ್ಪಾಲಂಕಾರ, ಅರ್ಚನೆ, ವಿಶೇಷ ಪೂಜೆ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು.

ಪ್ರಧಾನ ಅರ್ಚಕ ಮುತ್ತುರಾಜ್ ಪಟ್ಟಣದ ವಿವಿಧ ಬಡಾವಣೆಯಲ್ಲಿ ಜೋಳಿಗೆ ಹಿಡಿದು ಧವನ ಧಾನ್ಯ ಸಂಗ್ರಹಿಸಿ ಅದ ರಿಂದ ಪ್ರಸಾದ ತಯಾರಿಸಿ ಮುತ್ತುರಾಯ ಸ್ವಾಮಿಗೆ ನೈವೇದ್ಯ ಮಾಡಿದ ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು. ಪಟ್ಟಣದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ಮುತ್ತುರಾಯಸ್ವಾಮಿ ಮತ್ತು ಸತ್ಯ ಶನೇಶ್ವರ, ಅಂಜನೇಯಸ್ವಾಮಿ ದರ್ಶನ ಪಡೆದರು.

Translate »