ಕಸಾಯಿಖಾನೆಗೆ ಸಾಗಿಸುತ್ತಿದ್ದ 20 ಜಾನುವಾರುಗಳ ರಕ್ಷಣೆ
ಮಂಡ್ಯ

ಕಸಾಯಿಖಾನೆಗೆ ಸಾಗಿಸುತ್ತಿದ್ದ 20 ಜಾನುವಾರುಗಳ ರಕ್ಷಣೆ

July 15, 2018

ಭಾರತೀನಗರ: ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 20 ಜಾನು ವಾರುಗಳನ್ನು ಶನಿವಾರ ಕೆ.ಎಂ.ದೊಡ್ಡಿ ಪೊಲೀಸರು ರಕ್ಷಿಸಿ, ಇಬ್ಬರನ್ನು ಬಂಧಿಸಿದ್ದಾರೆ.ಹೊಳೆನರಸೀಪುರದ ಮೂಲದ ಚಾಲಕ ಸಯ್ಯದ್ ರಿಜ್ವ್ವಾನ್(25), ಕ್ಲೀನರ್ ನೂರ್ ಅಹಮದ್ (52) ಬಂಧಿತ ಆರೋಪಿಗಳು.

ವಿವರ: ಶನಿವಾರ ಮುಂಜಾನೆ ಹೊಳೆ ನರಸೀಪುರದಿಂದ ಟೆಂಪೋದಲ್ಲಿ ಅಕ್ರಮ ವಾಗಿ 20 ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು. ಈ ವಿಚಾರ ತಿಳಿದ ಪ್ರಾಣಿದಯಾ ಸಂಘದವರು ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಟೆಂಪೋವನ್ನು ಹಿಂಬಾಲಿಸಿಕೊಂಡು ಬಂದ ಪ್ರಾಣಿದಯಾ ಸಂಘದ ಜೋಶಾಹಿ ತಂಡ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಕೆ.ಎಂ.ದೊಡ್ಡಿ ಪೊಲೀಸರು ಇಲ್ಲಿನ ಪಶು ಆಸ್ಪತ್ರೆ ಮುಂಭಾಗ ತಪಾಸಣೆ ನಡೆಸಿ 20 ಜಾನುವಾರುಗಳನ್ನು ರಕ್ಷಿಸಿ ಟೆಂಪೋ ಚಾಲಕ ಸಯ್ಯದ್ ರಿಜ್ವಾನ್, ಕ್ಲೀನರ್ ನೂರ್ ಅಹಮದ್‍ರನ್ನು ಬಂಧಿಸಿ ಟೆಂಪೋವನ್ನು ವಶಪಡಿಸಿ ಕೊಂಡಿದ್ದಾರೆ.

ಈ ಸಂದರ್ಭ ಪ್ರಾಣಿ ದಯಾ ಸಂಘದ ಜೋಶಾಹಿ ಮಾತನಾಡಿ, ಈ ಟೆಂಪೋ ಪ್ರತಿ ದಿನ ಭಾರತೀನಗರ ಮಾರ್ಗವಾಗಿ ಕೇರಳ ಕಡೆಗೆ ಹೋಗುತ್ತಿದುದ್ದನ್ನು ಗಮನಿಸು ತ್ತಿದ್ದೇವು. ಟೆಂಪೋದಲ್ಲಿ ಜಾನುವಾರು ಗಳನ್ನು ಸಾಗಿಸುತ್ತಿದುದ್ದು ಕಂಡು ಬಂತು. ಹೀಗಾಗಿ ಇಂದು ಈ ಟೆಂಪೋವನ್ನು ಹಿಂಬಾಲಿಸಿಕೊಂಡು ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಎಂದು ವಿವರಿಸಿದರು.

ಈ ಬಗ್ಗೆ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯ ಎಸ್‍ಐ ಅಯ್ಯನಗೌಡ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿ ದ್ದಂತೆ ಸಾರ್ವಜನಿಕರು ತಂಡೋಪತಂಡ ವಾಗಿ ಜಾನುವಾರುಗಳನ್ನು ನೋಡಲು ಮುಂದಾದರು. ಆ ನಂತರ ಪೊಲೀಸರು ಜಾನುವಾರುಗಳನ್ನು ಮೈಸೂರು ಗೋಶಾಲೆಗೆ ರವಾನಿಸಿದರು.

Translate »