ಪೂರ್ವಿಕರಿಂದ ಮಳೆ ನೀರು ಸಂಗ್ರಹ ತಂತ್ರಜ್ಞಾನ ಪರಿಚಯ
ಮಂಡ್ಯ

ಪೂರ್ವಿಕರಿಂದ ಮಳೆ ನೀರು ಸಂಗ್ರಹ ತಂತ್ರಜ್ಞಾನ ಪರಿಚಯ

July 15, 2018

ಮೇಲುಕೋಟೆ: ನಮ್ಮ ಪೂರ್ವಿಕರು ಮಳೆ ನೀರು ಸಂಗ್ರಹ ತಂತ್ರ ಜ್ಞಾನವನ್ನು ಮೇಲುಕೋಟೆ ಕಲ್ಯಾಣಿಗಳ ನಿರ್ಮಾಣದ ಮೂಲಕ ಶತಮಾನಗಳ ಹಿಂದೆಯೇ ನಮಗೆ ತೋರಿಸಿ ಕೊಟ್ಟಿದ್ದಾರೆ ಎಂದು ಬೆಂಗಳೂರಿನ ದಯಾನಂದ ಸಾಗರ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ರಾಮ ರಾಜು ತಿಳಿಸಿದರು.

ಮೇಲುಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಆವರಣದಲ್ಲಿ ಡಿಎಸ್‍ಸಿಇ ಸಮುದಾಯ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ನೀರು ನೈರ್ಮಲ್ಯ ಮತ್ತು ಪರಿಸರ ಸಂರಕ್ಷಣೆ ಜಾಗೃತಿ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ನಾವು ಮಳೆ ನೀರಿನ ಸಂಗ್ರಹದ ಅವಶ್ಯಕತೆ ಹಾಗೂ ನೀರಿನ ಮೂಲಗಳ ಸ್ವಚ್ಛತೆ ಕಾಪಾಡಿಕೊಂಡು ಆರೋಗ್ಯ ಹೊಂದುವ ಬಗ್ಗೆ ಚಿಂತಿಸುತ್ತಿದ್ದೇವೆ. ಆದರೆ ಮೇಲುಕೋಟೆಯಲ್ಲಿ ಮಳೆಕೊಯ್ಲು ಹಾಗೂ ಶುದ್ಧ ನೀರಿನ ಸಂಗ್ರಹ 11ನೇ ಶತಮಾನದಲ್ಲೇ ಕಂಡು ಬಂದಿತ್ತು. ನೀರಿನ ಮೂಲ ಹಾಗೂ ಕಸ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸದಿದ್ದರೆ ಸಮಾಜದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ವಿದ್ಯಾರ್ಥಿ ಗಳು ಸಮುದಾಯದಲ್ಲಿ ಜಾಗೃತಿ ಮೂಡಿಸಿ, ಪ್ರಧಾನಮಂತ್ರಿ ಮೋದಿ ಅವರ ಸ್ವಚ್ಛ ಭಾರತ ಪರಿಕಲ್ಪನೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

ದಯಾನಂದ ಸಾಗರ ಕಾಲೇಜಿನ ಉಪಪ್ರಾಂಶುಪಾಲ ಡಾ.ಎಚ್.ರಾಮಕೃಷ್ಣ ಮಾತನಾಡಿ, ಕುಡಿಯುವ ನೀರು ಕಲುಷಿತವಾದರೆ ಹಲವು ಮಾರಣಾಂತಿಕ ಖಾಯಿಲೆಗೆ ತುತ್ತಾಗಬೇಕಾಗುತ್ತದೆ. ಬಹುಪಾಲು ಸಾಂಕ್ರಾಂತಿಕ ರೋಗಗಳು ಕುಡಿಯುವ ನೀರು ಹಾಗೂ ನೀರಿನ ಮೂಲಗಳ ಅಶುಚಿತ್ವದಿಂದಲೇ ಹರಡುತ್ತವೆ. ಹೀಗಾಗಿ ನೀರಿನ ಶುದ್ಧತೆಗೆ ಆದ್ಯತೆ ನೀಡಬೇಕು. ಜೊತೆಗೆ ಮನೆ, ಶಾಲೆ, ಗ್ರಾಮಗಳ ನೈರ್ಮಲ್ಯ ಕಾಪಾಡಲು ಶ್ರಮಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶಾಲಾ ಆವರಣದಲ್ಲಿ ನಡೆದ ಸಮಾರಂಭ ದಲ್ಲಿ ಮಂಡ್ಯ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಜಿ.ಪಿ ಶಿವ ಶಂಕರ್, ಮೇಲುಕೋಟೆ ಗ್ರಾಪಂ ಪಿಡಿಓ ತಮ್ಮೇಗೌಡ, ಬಾಲಕರ ಶಾಲೆಯ ಎಸ್‍ಡಿ ಎಂಸಿ ಅದ್ಯಕ್ಷ ಎಂ.ಬಿ ಚಲುವೇಗೌಡ, ಪ್ರೊ.ರಾಜಶೇಖರ್, ಪ್ರಭಾರಿ ಮುಖ್ಯಶಿಕ್ಷಕ ಸಂತಾನರಾಮನ್, ಕಾರ್ಯಕ್ರಮ ಸಂಚಾ ಲಕ ಪ್ರೊ.ಬಿ.ಟಿ.ಶಿವೇಂದ್ರ, ರಾಹುಲ್, ಶಿಕ್ಷಕರಾದ ಮಹಾಲಕ್ಷ್ಮಿ, ಜಯಂತಿ, ಮುತ್ತುರಾಜ್, ಆನಂದ್ ಭಾಗವಹಿಸಿದ್ದರು.

ಇದೇ ವೇಳೆ ಪರಿಸರ ಜಾಗೃತಿ ಜಾಥಾ ನಡೆಸಲಾಯಿತು. ನಂತರ ಡಿಎಸ್‍ಸಿಇ ಕಾಲೇಜಿನ ನೂರಾರು ವಿದ್ಯಾರ್ಥಿಗಳು 16 ತಂಡಗಳಲ್ಲಿ ಮೇಲುಕೋಟೆಯ ವಿವಿಧ ಭಾಗಗಳಿಗೆ ತೆರಳಿ ಸ್ವಚ್ಛತಾ ಕಾರ್ಯ ಕೈಗೊಂಡರೇ, ಬಾಲಕರ ಶಾಲೆಯ ಪುಟಾಣಿ ಮಕ್ಕಳು ಮನೆಮನೆಗೆ ತೆರಳಿ ನೀರು ಮತ್ತು ನೈರ್ಮ ಲ್ಯದ ಕರಪತ್ರ ವಿತರಿಸಿ ಜಾಗೃತಿ ಮೂಡಿಸಿ ದರು. ಸಮಾರಂಭದ ವೇಳೆ ಶಾಲಾ ಮಕ್ಕಳಿಗೆ ದಯಾನಂದ ಸಾಗರ ಕಾಲೇಜಿನ ವತಿಯಿಂದ ಕೆಲವು ಕ್ರೀಡಾ ಸಾಮಗ್ರಿಗಳನ್ನು ನೀಡಲಾಯಿತು. ಉತ್ತಮವಾಗಿ ಸ್ವಚ್ಛತಾ ಕಾರ್ಯ ಮಾಡಿದ 3 ತಂಡಗಳಿಗೆ ಕಾಲೇಜಿನ ವತಿಯಿಂದ ತಲಾ 3 ಸಾವಿರ ರೂ.ಗಳ ಬಹುಮಾನ ವಿತರಿಸಲಾಯಿತು.

Translate »