ನಾಳೆ ಮೇಲುಕೋಟೆಯಲ್ಲಿ ವೈರಮುಡಿ ಉತ್ಸವ
ಮಂಡ್ಯ

ನಾಳೆ ಮೇಲುಕೋಟೆಯಲ್ಲಿ ವೈರಮುಡಿ ಉತ್ಸವ

March 16, 2019

ಮೇಲುಕೋಟೆ: ಏಕಾದಶಿಯ ಶುಭದಿನವಾದ ಭಾನುವಾರ ರಾತ್ರಿ ನಡೆಯುವ ಶ್ರೀಚೆಲುವನಾರಾಯಣ ಸ್ವಾಮಿಯವರ ವಿಶ್ವವಿಖ್ಯಾತ ವೈರಮುಡಿ ಕಿರೀಟಧಾರಣ ಉತ್ಸವಕ್ಕೆ ಮೇಲು ಕೋಟೆ ಸಜ್ಜುಗೊಂಡಿದೆ. ಉತ್ಸವದ ವೈಭವವನ್ನು ಕಣ್ತುಂಬಿಕೊಳ್ಳಲು ರಾಜ್ಯ ಮತ್ತು ಹೊರರಾಜ್ಯಗಳಿಂದ ಸಹಸ್ರಾರು ಸಂಖ್ಯೆಯ ಭಕ್ತರು ತಂಡೋ ಪತಂಡವಾಗಿ ಆಗಮಿಸಿ ದ್ದಾರೆ. ಇಲ್ಲಿನ ಎಲ್ಲಾ ಛತ್ರಗಳೂ ಸಹ ಭಕ್ತರಿಂದ ಕಿಕ್ಕಿರಿದು ತುಂಬಿವೆ.

ರಜಾದಿನದಂದು ನಡೆಯುತ್ತಿರುವ ಈ ಸಲದ ವೈರಮುಡಿ ಉತ್ಸವಕ್ಕೆ ಎರಡು ಲಕ್ಷಕ್ಕೂ ಅಧಿಕ ಭಕ್ತರ ಆಗಮನದ ನಿರೀಕ್ಷೆ ಮಾಡಲಾಗಿದೆ. ಭಕ್ತರು ಶ್ರೀದೇವಿ ಭೂದೇವಿಯರೊಂದಿಗೆ ಗರುಡಾರೂಢ ನಾಗಿ ಅಲಂಕಾರಗೊಂಡು ವೈರಮುಡಿ ಕಿರೀಧರಿಸಿ ಕಂಗೊಳಿಸುವ ಚೆಲುವನಾರಾ ಯಣನ ಚೆಲುವನ್ನು ಸವಿಯುವ ಕಾತರದ ಕ್ಷಣಗಳನ್ನು ನಿರೀಕ್ಷಿಸುತ್ತಿದ್ದಾರೆ.

ವೈರಮುಡಿ ಉತ್ಸವ ರಾತ್ರಿ 8 ಗಂಟೆ ವೇಳೆಗೆ ಆರಂಭವಾಗಲಿದ್ದು ಬೆಳಗಿನ 3-30 ರವರೆಗೆ ವೈಭವದಿಂದ ನೆರವೇರಲಿದೆ. ಇದಕ್ಕೂ ಮುನ್ನ ಮಂಡ್ಯ ಜಿಲ್ಲಾ ಖಜಾನೆ ಯಿಂದ ತರುವ ವೈರಮುಡಿ ರಾಜಮುಡಿ ಕಿರೀಟಗಳನ್ನು ರಾತ್ರಿ 7 ಗಂಟೆಯವೇಳೆಗೆ ಸ್ಥಾನೀಕರು, ಅರ್ಚಕರು, ಪರಿಚಾರಕರ ಸಮಕ್ಷಮ ಪರಿಶೀಲಿಸಲಾಗುತ್ತದೆ. ಗರುಡ ದೇವನ ಉತ್ಸವ ನಡೆದ ನಂತರ ರಾತ್ರಿ 8 ಗಂಟೆಗೆ ವೈರಮುಡಿ ಕಿರೀಟಧಾರಣೆ ನಡೆದು ಮಹಾಮಂಗಳಾರತಿಯ ನಂತರ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ವೈರ ಮುಡಿ ಉತ್ಸವ ಮುಗಿಯುತ್ತಿದ್ದಂತೆ ರಾಜ ಮುಡಿ ಉತ್ಸವ ನೆರವೇರುತ್ತದೆ. ವೈರಮುಡಿ ಉತ್ಸವದ ವೇಳೆ ದೇವಾಲಯದಲ್ಲಿ ನಡೆ ಯುವ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಪಾರ್ಕಾವಣೆ ಪ್ರಕ್ರಿಯೆಯನ್ನು ಹೊರಭಾಗ ದಲ್ಲಿ ಅಳವಡಿಸಿರುವ ಬೃಹತ್ ಪರದೆಗಳ ಮೂಲಕ ಪ್ರಸಾರಮಾಡಲಾಗುತ್ತದೆ.

ವಿಶೇಷ ಪುಷ್ಪ ಮತ್ತು ದೀಪಾಲಂಕಾರ: ವೈರಮುಡಿ ಅಂಗವಾಗಿ ಚೆಲುವನಾರಾಯಣ ಸ್ವಾಮಿ ದೇವಾಲಯ ಮತ್ತು ಉತ್ಸವ ನಡೆಯುವ ರಾಜಬೀದಿ, ಪಂಚಕಲ್ಯಾಣಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ದೇವಾ ಲಯದ ರಾಜಗೋಪುರ ದೀಪಾಲಂಕಾರದ ವೇಳೆ ಏಳು ವರ್ಣಮಯ ಚಿತ್ತಾರದೊಂದಿಗೆ ಕಂಗೊಳಿಸುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಚುನಾವಣಾ ದಿನಾಂಕ ಪ್ರಕ ಟಣೆಗೂ ಮುನ್ನ ತಿಳಿಸಿದಂತೆ ಪ್ರವಾಸೋದ್ಯಮ ಇಲಾಖೆವತಿಯಿಂದ ಯೋಗ ನರಸಿಂಹ ಸ್ವಾಮಿ ಬೆಟ್ಟ, ಕಲ್ಯಾಣಿ-ಭುವನೇಶ್ವರಿ ಮಂಟಪ, ರಾಯಗೋಪುರ, ಅಕ್ಕತಂಗಿಕೊಳ, ಪ್ರವಾಸಿ ಮಂದಿರದಿಂದ ಬಸ್ ನಿಲ್ದಾಣದ ವರೆಗೆ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು ಕಣ್ಮನ ಸೆಳೆಯುತ್ತಿದೆ ವೈರಮುಡಿಯಂದು ದೇವಾಲಯದ ಆವರಣಕ್ಕೆ ವಿಶೇಷ ಪುಷ್ಪಾಲಂಕಾರ ಸಹ ಮಾಡಲಾಗುತ್ತಿದೆ ಪಟ್ಟಣದ 10 ಕಡೆ ಶುದ್ಧವಾದ ಕುಡಿ ಯುವ ನೀರಿನ ಟ್ಯಾಂಕ್ ನಿರ್ಮಾಣ ದೇವಾಲಯದ ಬಳಿ ಶುದ್ಧೀಕರಸಿದ ನೀರಿನ ವ್ಯವಸ್ಥೆ. ವೈರಮುಡಿ ಉತ್ಸವಕ್ಕಾಗಿ 2000 ಪೊಲೀಸ್ ಸಿಬ್ಬಂದಿಗಳ ಆಯೋಜನೆ. ಭಕ್ತರು ಮೇಲುಕೋಟೆಗೆ ಬರಲು ಮೈಸೂರು ಮಂಡ್ಯ, ನಾಗಮಂಗಲ, ಕೆ.ಆರ್.ಪೇಟೆ ಬೆಂಗಳೂರಿನಿಂದ ವಿಶೇಷ ಬಸ್ ಸೌಕರ್ಯ ಬೆಳಿಗ್ಗೆ ಮತ್ತು ಸಂಜೆ ಎರಡೂ ವೇಳೆ ಸ್ವಚ್ಚತಾ ಕಾರ್ಯಕ್ಕಾಗಿ 50 ಮಂದಿ ಪೌರಕಾರ್ಮಿಕರ ನೇಮಕ ಕಲ್ಯಾಣಿಯಲ್ಲಿ ಸ್ನಾನ ಮಾಡಲು ಅನುಕೂಲವಾಗುವಂತೆ ರಕ್ಷಾಣಾ ವಲಯ ನಿರ್ಮಾಣ, ಮಹಿಳಾ ಪೊಲೀಸ್ ನಿಯೋಜನೆ. ನಿರಂತರ ವಿದ್ಯುತ್ ಸರಭರಾಜಿಗೆ ಕ್ರಮ, ಜಾತ್ರಾ ಅವಧಿಯಲ್ಲಿ 5 ಆಂಬುಲೆನ್ಸ್, ವೈದ್ಯಕೀಯ ತಂಡ ನಿಯೋಜನೆ, 2 ಕಡೆ ಕ್ಯಾಂಪ್ ಸ್ಥಾಪನೆ. ಹಳೆಬಸ್ ನಿಲ್ದಾಣ ಮತ್ತು ದೇವಾಲಯದ ಬಳಿ ಪೊಲೀಸ್ ಸಹಾಯಕೇಂದ್ರ ಸ್ಥಾಪನೆ.

ಚೆಲುವನಾರಾಯಣನ ಬ್ರಹ್ಮೋತ್ಸವ ಗಳಲ್ಲಿ ನಡೆಯುವ ವಿಶೇಷ ಉತ್ಸವ, ವಾಹನೋತ್ಸವಗಳಿಗೆ ಮಂಗಳವಾದ್ಯ ಕೈಂಕರ್ಯದ ನಾದೋಪಾಸನ ಸೇವೆ ಈ ಸಲವೂ ಮುಂದುವರೆದಿದೆ. ಚೆಲುವ ನಾರಾಯಣಸ್ವಾಮಿ ದೇವಸ್ಥಾನ ಕನ್ನಡ ಸಂಸ್ಕøತಿ ಇಲಾಖೆಯ ಸಂಯುಕ್ತಾಶ್ರಯ ದಲ್ಲಿ ಮತ್ತು ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕøತಿಕ ವೇದಿಕೆಯ ಸಂಯೋಜನೆಯಲ್ಲಿ ಪ್ರತಿದಿನ ವಿವಿಧ ಕಲಾವಿದರಿಂದ ಮಂಗಳವಾದ್ಯ-ಸ್ಯಾಸಕ ಸಪೋನ್ ಸೇವೆ ನೆರವೇರುತ್ತಿದ್ದು ಮಾರ್ಚ್ 24 ರವರೆಗೆ ನಡೆಯಲಿದೆ.

Translate »