Tag: Melukote

ನಾಳೆ ಮೇಲುಕೋಟೆಯಲ್ಲಿ ವೈರಮುಡಿ ಉತ್ಸವ
ಮಂಡ್ಯ

ನಾಳೆ ಮೇಲುಕೋಟೆಯಲ್ಲಿ ವೈರಮುಡಿ ಉತ್ಸವ

March 16, 2019

ಮೇಲುಕೋಟೆ: ಏಕಾದಶಿಯ ಶುಭದಿನವಾದ ಭಾನುವಾರ ರಾತ್ರಿ ನಡೆಯುವ ಶ್ರೀಚೆಲುವನಾರಾಯಣ ಸ್ವಾಮಿಯವರ ವಿಶ್ವವಿಖ್ಯಾತ ವೈರಮುಡಿ ಕಿರೀಟಧಾರಣ ಉತ್ಸವಕ್ಕೆ ಮೇಲು ಕೋಟೆ ಸಜ್ಜುಗೊಂಡಿದೆ. ಉತ್ಸವದ ವೈಭವವನ್ನು ಕಣ್ತುಂಬಿಕೊಳ್ಳಲು ರಾಜ್ಯ ಮತ್ತು ಹೊರರಾಜ್ಯಗಳಿಂದ ಸಹಸ್ರಾರು ಸಂಖ್ಯೆಯ ಭಕ್ತರು ತಂಡೋ ಪತಂಡವಾಗಿ ಆಗಮಿಸಿ ದ್ದಾರೆ. ಇಲ್ಲಿನ ಎಲ್ಲಾ ಛತ್ರಗಳೂ ಸಹ ಭಕ್ತರಿಂದ ಕಿಕ್ಕಿರಿದು ತುಂಬಿವೆ. ರಜಾದಿನದಂದು ನಡೆಯುತ್ತಿರುವ ಈ ಸಲದ ವೈರಮುಡಿ ಉತ್ಸವಕ್ಕೆ ಎರಡು ಲಕ್ಷಕ್ಕೂ ಅಧಿಕ ಭಕ್ತರ ಆಗಮನದ ನಿರೀಕ್ಷೆ ಮಾಡಲಾಗಿದೆ. ಭಕ್ತರು ಶ್ರೀದೇವಿ ಭೂದೇವಿಯರೊಂದಿಗೆ ಗರುಡಾರೂಢ ನಾಗಿ ಅಲಂಕಾರಗೊಂಡು ವೈರಮುಡಿ…

ಮೇಲುಕೋಟೆಯಲ್ಲಿ ಸಂಭ್ರಮದ ಕಲ್ಯಾಣೋತ್ಸವ
ಮಂಡ್ಯ

ಮೇಲುಕೋಟೆಯಲ್ಲಿ ಸಂಭ್ರಮದ ಕಲ್ಯಾಣೋತ್ಸವ

March 14, 2019

ಮೇಲುಕೋಟೆ: ವಿಳಂಬಿ ನಾಮ ಸಂವತ್ಸರದ ರೋಹಿಣಿ ನಕ್ಷತ್ರದ ಶುಭದಿನವಾದ ಬುಧವಾರ ಸಂಜೆ ಆರಾದ್ಯ ದೈವ ಶ್ರೀ ಚೆಲುವನಾರಾಯಣ ಸ್ವಾಮಿಗೆ ವೈರಮುಡಿ ಬ್ರಹ್ಮೋತ್ಸವದ ಅಂಗವಾಗಿ ಕಲ್ಯಾಣೋತ್ಸವ ಸಡಗರ ಸಂಭ್ರಮದಿಂದ ನೆರವೇರಿತು. ಲೋಕ ಕಲ್ಯಾಣಾರ್ಥವಾಗಿ ಕಲ್ಯಾಣಿಯ ದಾರಾಮಂಟಪದಲ್ಲಿ ಮಹಾಲಕ್ಷ್ಮಿ ಕಲ್ಯಾಣ ನಾಯಕಿ ಅಮ್ಮನವರೊಂದಿಗೆ ಸಂಜೆ ನಡೆದ ಕಲ್ಯಾಣೋತ್ಸವ ವೈಭವ ವನ್ನು ಸಾವಿರಾರು ಭಕ್ತರು ದರ್ಶನ ಮಾಡಿ ಪುನೀತ ಭಾವನೆ ಹೊಂದಿದರು. ವೇದ ಘೋಷ ಮಂಗಳವಾದ್ಯದೊಂದಿಗೆ ಸಮನ್ಮಾಲೆ, ಲಾಜಹೋಮ ಮುಂತಾದ ಶಾಸ್ತ್ರೋಕ್ತ ವಿಧಿ ವಿಧಾನಗಳು ನೆರವೇರಿದವು. ಇದಕ್ಕೂ ಮುನ್ನ ದೇವಾಲಯದಲ್ಲಿ ದೇವಸೇನ…

ಚೆಲುವನಿಗೆ ವೈಭವದ ಸೂರ್ಯ ಮಂಡಲೋತ್ಸವ
ಮಂಡ್ಯ

ಚೆಲುವನಿಗೆ ವೈಭವದ ಸೂರ್ಯ ಮಂಡಲೋತ್ಸವ

February 13, 2019

ಮೇಲುಕೋಟೆ: ಪ್ರಖ್ಯಾತ ಧಾರ್ಮಿಕ ಕ್ಷೇತ್ರ ಮೇಲುಕೋಟೆಯಲ್ಲಿ ಚೆಲುವನಾರಾಯಣಸ್ವಾಮಿಗೆ ಮಂಗಳವಾರ ಮುಂಜಾನೆ ಜಾನಪದ ಕಲಾರಾಧನೆ ಯೊಂದಿಗೆ ರಥಸಪ್ತಮಿಯ ಸೂರ್ಯ ಮಂಡಲ ವಾಹನೋತ್ಸವ ವೈಭವದಿಂದ ನೆರವೇರಿತು. ಸಾವಿರಾರು ಭಕ್ತರು ಮಹೋ ತ್ಸವದಲ್ಲಿ ಭಾಗಿಯಾಗಿ ಕಲಾರಾಧನೆ ಸವಿ ಯೊಂದಿಗೆ ಸ್ವಾಮಿ ದರ್ಶನ ಪಡೆದರು. ಯತಿರಾಜ ದಾಸರ್ ಸ್ಥಾನೀಕಂ ನಾಗ ರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆ ನಡೆಸಿದ 20ನೇ ವರ್ಷದ ರಾಜ್ಯಮಟ್ಟದ ಜಾನಪದ ಕಲಾಮೇಳದಲ್ಲಿ ಕರ್ನಾಟಕದ ಪ್ರಮುಖ ಜಾನಪದ ಕಲಾ ಪ್ರಕಾರಗಳ ಜೊತೆಗೆ ಕೇರಳ, ತಮಿಳುನಾಡು, ಪಾಂಡಿ ಚೇರಿ, ಆಂಧ್ರಪ್ರದೇಶ, ತೆಲಂಗಾಣಗಳ ಪ್ರಖ್ಯಾತ…

ಇನ್ಫೋಸಿಸ್ ಫೌಂಡೇಷನ್‍ನಿಂದ ಮೇಲುಕೋಟೆ  ಪಾರಂಪರಿಕ ತಾಣಗಳ ಸಂರಕ್ಷಣೆ
ಮೈಸೂರು

ಇನ್ಫೋಸಿಸ್ ಫೌಂಡೇಷನ್‍ನಿಂದ ಮೇಲುಕೋಟೆ ಪಾರಂಪರಿಕ ತಾಣಗಳ ಸಂರಕ್ಷಣೆ

December 3, 2018

ಮೇಲುಕೋಟೆ: ಸರ್ಕಾರದ ಸಹ ಕಾರದೊಂದಿಗೆ ಇನ್ಫೋಸಿಸ್ ಫೌಂಡೇಷನ್ ಮೇಲುಕೋಟೆಯ ಪಾರಂಪರಿಕ ತಾಣಗಳನ್ನು ಸಂರಕ್ಷಿಸಲು ಸಂಕಲ್ಪ ಮಾಡಿದೆ ಎಂದು ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ತಿಳಿಸಿದರು. ಭಾನುವಾರ ಮೇಲುಕೋಟೆ ಕ್ಷೇತ್ರ ಅಭಿ ವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿ ದಂತೆ ಮೇಲುಕೋಟೆ ಪ್ರವಾಸಿ ಮಂದಿರದಲ್ಲಿ ನಡೆದ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟದ ಸುಂದರ ಸಂಸ್ಕೃತಿ, ಪರಂಪರೆ ಹೊಂದಿದ ಕ್ಷೇತ್ರ ಸಮಗ್ರವಾಗಿ ಅಭಿವೃದ್ಧಿ ಆಗಬೇಕು. ಅದಕ್ಕಾಗಿ ಇಲ್ಲಿನ ಪಂಚಕಲ್ಯಾಣಿ ಸೇರಿದಂತೆ ಪಾರಂಪರಿಕ ಶೈಲಿಯ ಎಲ್ಲಾ ಕೊಳಗಳು, ಮಂಟಪಗಳನ್ನು ಜೀರ್ಣೋದ್ಧಾರ ಗೊಳಿಸಿ…

ಉದ್ಯೋಗಖಾತ್ರಿ ಯೋಜನೆಯಡಿ ನರಸಿಂಹ ತೀರ್ಥ ಸ್ವಚ್ಛ
ಮಂಡ್ಯ

ಉದ್ಯೋಗಖಾತ್ರಿ ಯೋಜನೆಯಡಿ ನರಸಿಂಹ ತೀರ್ಥ ಸ್ವಚ್ಛ

September 10, 2018

ಮೇಲುಕೋಟೆ:  ಉದ್ಯೋಗ ಖಾತ್ರಿ ಯೋಜನೆಯಡಿ ಚೆಲುವನಾರಾಯಣಸ್ವಾಮಿ ಅಷ್ಠತೀರ್ಥಗಳಲ್ಲೊಂದಾದ ನರಸಿಂಹ ತೀರ್ಥವನ್ನು ಸ್ವಚ್ಛಗೊಳಿಸಿರುವ ಮೇಲುಕೋಟೆ ಗ್ರಾಪಂ ಕಾರ್ಯವನ್ನು ಜಿಪಂ ಸಿಇಓ ಯಾಲಕ್ಕಿಗೌಡ ಶ್ಲಾಘಿಸಿದರು. ಇಲ್ಲಿನ ಸರ್ಕಾರಿ ಬಾಲಕರ ಶಾಲೆಯ ಹಿಂಭಾಗದಲ್ಲಿರುವ ನರಸಿಂಹತೀರ್ಥ ಕೊಳ ಹಾಗೂ ನವೀಕರಣಗೊಳ್ಳುತ್ತಿರುವ ಇನ್ನಿತರ ಕೊಳಗಳನ್ನು ಪರಿಶೀಲಿಸಿ ಮಾತ ನಾಡಿದ ಜಿಪಂ ಸಿಇಓ ಯಾಲಕ್ಕಿಗೌಡ, ಕ್ಷೇತ್ರದ ಪುರಾತನ ಕೊಳಗಳನ್ನು ಉಳಿಸಿ ಕೊಳ್ಳಲು ಗ್ರಾಪಂ ಕೈಗೊಳ್ಳುವ ಎಲ್ಲಾ ಯೋಜನೆಗಳಿಗೆ ವಿಶೇಷ ಆದ್ಯತೆ ನೀಡಿ ಸಹಕಾರ ನೀಡುವ ಭರವಸೆ ನೀಡಿದರು. ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ನಿರ್ದೇಶಕ ಕೆಂಪೇಗೌಡ ಮಾತ…

ಚೆಲುವನಾರಾಯಣ ಸ್ವಾಮಿ ದೇಗುಲದ ಗುಮಾಸ್ತ ಹುದ್ದೆ ರದ್ದು!
ಮಂಡ್ಯ

ಚೆಲುವನಾರಾಯಣ ಸ್ವಾಮಿ ದೇಗುಲದ ಗುಮಾಸ್ತ ಹುದ್ದೆ ರದ್ದು!

September 6, 2018

ಮೇಲುಕೋಟೆ: ಚೆಲುವನಾರಾಯಣಸ್ವಾಮಿ ದೇವಾಲಯದ ಕಚೇರಿಯಲ್ಲಿ ಅಕ್ರಮವಾಗಿ ಲೆಕ್ಕಪತ್ರ ಗುಮಾಸ್ತ ಎಂಬ ಅನಗತ್ಯ ಹುದ್ದೆ ಸೃಷ್ಟಿಸಿಕೊಂಡು ಹೊರಗುತ್ತಿಗೆ ಮೇಲೆ ನೇಮಕವಾಗಿರುವ ವ್ಯಕ್ತಿಯನ್ನು ಸೇವೆಯಿಂದ ಬಿಡುಗಡೆ ಮಾಡಿ ಹುದ್ದೆರದ್ದುಪಡಿಸುವ ಸಂಬಂಧ ಕ್ರಮ ಜರುಗಿಸುವಂತೆ ಧಾರ್ಮಿಕ ದತ್ತಿ ಆಯುಕ್ತರು ದೇಗುಲದ ಕಾರ್ಯನಿರ್ವಹಣಾಧಿಕಾರಿಗೆ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿ ಮತ್ತು ಮುಜರಾಯಿ ಇಲಾಖೆಯ ಸಚಿವರು ನೀಡಿರುವ ಆದೇಶದಂತೆ ದೇವಾಲಯದಲ್ಲಿ ಅನಗತ್ಯವಾದ ಲೆಕ್ಕಪತ್ರ ಗುಮಾಸ್ತ ಹುದ್ದೆ ಸೃಷ್ಟಿಸಿ ನೇಮಕವಾಗಿರುವ ಹೇಮಂತಕುಮಾರ್ ಅವರನ್ನು ವಿಮುಕ್ತಿಗೊಳಿಸಿ ಹುದ್ದೆಯನ್ನು ರದ್ದು ಮಾಡುವಂತೆ ಆಯುಕ್ತರು ಸೂಚಿಸಿದ್ದಾರೆ. ದೇವಾಲಯದ ಮುಜರಾಯಿ ಇಲಾಖೆಯ ನೌಕರರ…

ಮೇಲುಕೋಟೆಯ ಕಲ್ಯಾಣಿ, ಕೊಳಗಳ ಸಮಗ್ರ ಜೀರ್ಣೋದ್ಧಾರಕ್ಕೆ ಸಚಿವರ ಸೂಚನೆ
ಮಂಡ್ಯ

ಮೇಲುಕೋಟೆಯ ಕಲ್ಯಾಣಿ, ಕೊಳಗಳ ಸಮಗ್ರ ಜೀರ್ಣೋದ್ಧಾರಕ್ಕೆ ಸಚಿವರ ಸೂಚನೆ

August 28, 2018

ಮೇಲುಕೋಟೆ:  ಮೇಲುಕೋಟೆಯಲ್ಲಿರುವ ಐತಿಹಾಸಿಕ ಕಲ್ಯಾಣಿಗಳು ಮತ್ತು ಕೊಳಗಳನ್ನು ಸಮಗ್ರವಾಗಿ ಜೀರ್ಣೋದ್ಧಾರ ಮಾಡಲು ತಕ್ಷಣ ಮಾಸ್ಟರ್ ಪ್ಲಾನ್ ತಯಾರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಸಣ್ಣ ನೀರಾವರಿ ಇಲಾಖೆಯ ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ಸೋಮವಾರ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ವಿವಿಧ ಕೆರೆಗಳು, ಪಿಕಪ್ ಡ್ಯಾಂ ನಿರ್ಮಾಣದ ಸ್ಥಳಗಳನ್ನು ಪರಿಶೀಲಿಸಿದ ಸಚಿವರು, ನಂತರ ಮೇಲುಕೋಟೆ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಿದರು. ತಿರುಪತಿ ಮಾದರಿಯಲ್ಲಿ ಕಲ್ಯಾಣಿ ಮತ್ತು ಕೊಳಗಳಲ್ಲಿ ಸಂಗ್ರಹವಾಗುವ ನೀರನ್ನು ಶುದ್ಧೀಕರಣ…

ಕಲ್ಯಾಣಿಯಲ್ಲಿ ತೇಲುತ್ತಿದ್ದ ಕಸದ ನಡುವೆ ಚೆಲುವನಿಗೆ ತೀರ್ಥಸ್ನಾನ
ಮಂಡ್ಯ

ಕಲ್ಯಾಣಿಯಲ್ಲಿ ತೇಲುತ್ತಿದ್ದ ಕಸದ ನಡುವೆ ಚೆಲುವನಿಗೆ ತೀರ್ಥಸ್ನಾನ

August 7, 2018

ಮೇಲುಕೋಟೆ: ಕಲ್ಯಾಣಿಯ ಮೂಲೆ ಮೂಲೆಗಳಲ್ಲಿ ತೇಲುತ್ತಿದ್ದ ಕಸದ ರಾಶಿ ನಡುವೆ ಚೆಲುವನಾರಾಯಣಸ್ವಾಮಿ ಕೃಷ್ಣರಾಜಮುಡಿ ಜಾತ್ರಾ ಮಹೋತ್ಸವದ ತೀರ್ಥಸ್ನಾನ ಸೋಮವಾರ ಮಧ್ಯಾಹ್ನ ನೆರವೇರಿತು. ಈ ವೇಳೆ ದೇಗುಲದ ಕೈಂಕರ್ಯಪರರು ಸಹ ವಿಧಿ ಇಲ್ಲದೇ ಕಲ್ಯಾಣಿಯಲ್ಲಿ ಕಸ ಹಾಗೂ ಗಲೀಜು ತೇಲುತ್ತಿದ್ದರೂ, ತೀವ್ರ ಅಸಮಾಧಾನದಿಂದಲೇ ದೇವರ ಮೇಲೆ ಭಾರ ಹಾಕಿ ಅಭಿಷೇಕದ ವಿಧಿ ವಿಧಾನಗಳನ್ನು ನೆರವೇರಿಸಿದರು. ಕೃಷ್ಣರಾಜಮುಡಿ ಬ್ರಹ್ಮೋತ್ಸವ ಆರಂಭ ಕ್ಕೂ ಮುನ್ನಾ ಕಲ್ಯಾಣಿ ಅಶುಚಿತ್ವದ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾದರೂ, ಸಂಬಂಧಪಟ್ಟ ಅಧಿಕಾರಿಗಳು ಕಲ್ಯಾಣಿಯ ಸ್ವಚ್ಛತೆಗೆ ಕ್ರಮ ವಹಿಸದ…

ಮೇಲುಕೋಟೆಯಲ್ಲಿ ಸ್ವಚ್ಛತೆಗೆ ಆದ್ಯತೆ
ಮಂಡ್ಯ

ಮೇಲುಕೋಟೆಯಲ್ಲಿ ಸ್ವಚ್ಛತೆಗೆ ಆದ್ಯತೆ

August 2, 2018

ಮೇಲುಕೋಟೆ: ಆಗಸ್ಟ್ ತಿಂಗಳ ಪೂರ್ತಿ ಮೇಲುಕೋಟೆಯಲ್ಲಿ ಸ್ವಚ್ಛ ಸರ್ವೇ ಕ್ಷಣಾ ಕಾರ್ಯಕ್ರಮ ನಡೆಯಲಿದ್ದು, ಇಡೀ ಪಟ್ಟಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದು ಗ್ರಾಪಂ ಅಧ್ಯಕ್ಷ ನಾರಾಯಣಭಟ್ ತಿಳಿಸಿದರು. ಇಲ್ಲಿನ ಗ್ರಾಪಂ ಸಭಾಂಗಣದಲ್ಲಿ ಸ್ವಚ್ಛ ಸರ್ವೇಕ್ಷಣಾ ಕಾರ್ಯಕ್ರಮದ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, ಬಯಲು ಬಹಿರ್ದೆಸೆ ಬದಲು ಪ್ರತಿ ಮನೆಗಳಲ್ಲಿ ಶೌಚಾಲಯ ಬಳಕೆ ಮಾಡುವಂತೆ ಮತ್ತು ಕುಡಿಯಲು ಶುದ್ಧ ಕುಡಿಯುವ ನೀರು ಬಳಸಲು ಜಾಗೃತಿ ಮೂಡಿಸಲಾಗುತ್ತದೆ. ಮೇಲುಕೋಟೆ ವ್ಯಾಪ್ತಿಯಲ್ಲಿ ಬರುವ ಎರಡು ಸರ್ಕಾರಿ…

ಚಂದ್ರಗ್ರಹಣ: ಮೇಲುಕೋಟೆ ದೇವಾಲಯಗಳಲ್ಲಿ ಪೂಜೆ ಬಂದ್
ಮಂಡ್ಯ

ಚಂದ್ರಗ್ರಹಣ: ಮೇಲುಕೋಟೆ ದೇವಾಲಯಗಳಲ್ಲಿ ಪೂಜೆ ಬಂದ್

July 27, 2018

ಮೇಲುಕೋಟೆ:  ರಕ್ತಚಂದನ ಚಂದ್ರ ಗ್ರಹಣದ ಅಂಗವಾಗಿ ಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ರಾತ್ರಿ ಪೂಜಾ ಕೈಂಕರ್ಯ ನಡೆಯುವುದಿಲ್ಲ. ಸೂರ್ಯಾಸ್ತವಾಗಿ ಚಂದ್ರೋದಯವಾಗುವ ಮುನ್ನವೇ ದೇವಾಲಯದ ಬಾಗಿಲುಗಳು ಬಂದ್ ಆಗಲಿದ್ದು, ಇಡೀ ದಿನದ ಕಾರ್ಯಕ್ರಮಗಳು ಸಂಜೆ 6.30ರ ವೇಳೆಗೆ ಮುಕ್ತಾಯವಾಗಲಿದೆ. ರಾತ್ರಿ ನಡೆಯಬೇಕಿದ್ದ ಉಯ್ಯಾಲೋತ್ಸವ ಮತ್ತು ಕೃಷ್ಣರಾಜಮುಡಿ ಜಾತ್ರಾ ಮಹೋತ್ಸವದ ಅಂಕುರಾ ರ್ಪಣೆ ಕಾರ್ಯಕ್ರಮ ಸಂಜೆಯೇ ನಡೆಯಲಿದೆ. ಚಂದ್ರ ಗ್ರಹಣ ಮುಕ್ತಾಯವಾಗಿ ಮರು ದಿನ(ಶನಿವಾರ) ಸೂರ್ಯೋದಯವಾದ ನಂತರ ಬೆಳಿಗ್ಗೆ 7.30ಕ್ಕೆ ಚೆಲುವನಾರಾಯಣಸ್ವಾಮಿ ಮತ್ತು ರಾಮಾನುಜಾಚಾರ್ಯರಿಗೆ ಅಭಿಷೇಕ ನಡೆದು…

1 2 3
Translate »