ಚೆಲುವನಿಗೆ ವೈಭವದ ಸೂರ್ಯ ಮಂಡಲೋತ್ಸವ
ಮಂಡ್ಯ

ಚೆಲುವನಿಗೆ ವೈಭವದ ಸೂರ್ಯ ಮಂಡಲೋತ್ಸವ

February 13, 2019

ಮೇಲುಕೋಟೆ: ಪ್ರಖ್ಯಾತ ಧಾರ್ಮಿಕ ಕ್ಷೇತ್ರ ಮೇಲುಕೋಟೆಯಲ್ಲಿ ಚೆಲುವನಾರಾಯಣಸ್ವಾಮಿಗೆ ಮಂಗಳವಾರ ಮುಂಜಾನೆ ಜಾನಪದ ಕಲಾರಾಧನೆ ಯೊಂದಿಗೆ ರಥಸಪ್ತಮಿಯ ಸೂರ್ಯ ಮಂಡಲ ವಾಹನೋತ್ಸವ ವೈಭವದಿಂದ ನೆರವೇರಿತು. ಸಾವಿರಾರು ಭಕ್ತರು ಮಹೋ ತ್ಸವದಲ್ಲಿ ಭಾಗಿಯಾಗಿ ಕಲಾರಾಧನೆ ಸವಿ ಯೊಂದಿಗೆ ಸ್ವಾಮಿ ದರ್ಶನ ಪಡೆದರು.

ಯತಿರಾಜ ದಾಸರ್ ಸ್ಥಾನೀಕಂ ನಾಗ ರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆ ನಡೆಸಿದ 20ನೇ ವರ್ಷದ ರಾಜ್ಯಮಟ್ಟದ ಜಾನಪದ ಕಲಾಮೇಳದಲ್ಲಿ ಕರ್ನಾಟಕದ ಪ್ರಮುಖ ಜಾನಪದ ಕಲಾ ಪ್ರಕಾರಗಳ ಜೊತೆಗೆ ಕೇರಳ, ತಮಿಳುನಾಡು, ಪಾಂಡಿ ಚೇರಿ, ಆಂಧ್ರಪ್ರದೇಶ, ತೆಲಂಗಾಣಗಳ ಪ್ರಖ್ಯಾತ ಜಾನಪದ ಕಲಾಪ್ರಕಾರಗಳು ಆಕರ್ಷಕ ಪ್ರದರ್ಶನ ನೀಡಿ ಜಾನಪದ ಹಬ್ಬಕ್ಕೆ ಮೆರಗು ನೀಡಿದವು.

ಡಾ.ಮಹರ್ಷಿ ಆನಂದ ಗೂರೂಜೀ, ಇನ್‍ಫೋಸಿಸ್ ಉಪಾಧ್ಯಕ್ಷ ಕೆ.ಪಿ.ನಾಗರಾಜ್, ಡಾ.ದೀಪಾ ಚಂಡೆ ಬಾರಿಸುವ ಮೂಲಕ ಕಲಾಮೇಳವನ್ನು ಉದ್ಘಾಟಿಸಿ ರಥ ಸಪ್ತಮಿಯ ಸೂರ್ಯ ಮಂಡಲ ವಾಹ ನೋತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಜಿಪಂ ಸದಸ್ಯ ತ್ಯಾಗರಾಜು, ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜೀ, ಪರಮೇಶ್ ಗೌಡ, ನಾಗರಾಜು, ಗ್ರಾಪಂ ಅಧ್ಯಕ್ಷ ಅವ್ವ ಗಂಗಾಧರ್, ಕಲಾಮೇಳದ ಸಂಘಟಕ ರಾದ ಪತ್ರಕರ್ತೆ ಸೌಮ್ಯ ಸಂತಾನಂ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಆನಂದ ಕುಮಾರ್, ಎಸ್‍ಇಟಿ ಶಿಕ್ಷಣ ಸಂಸ್ಥೆಯ ನಿಂಗೇ ಗೌಡ, ಅಹೋಬಿಲ ಮಠದ ಶಶಿಕುಮಾರ್ ಶಠಗೋಪರಾಮಾನುಜ ಕೂಟದ ಸುದ ರ್ಶನ ರಾಮಾನುಜಂ ಭಾಗವಹಿಸಿದ್ದರು.

ಬೆಳಿಗ್ಗೆ 7.30 ಗಂಟೆಗೆ ಆರಂಭವಾದ ಈ ಜಾನಪದ ಹಬ್ಬದಲ್ಲಿ ಪಂಚವಾದ್ಯ, ತಮಿಳುನಾಡಿನ ಡ್ರಮ್ಸ್, ಕೇರಳದ ಚೆಂಡೆಮೇಳ, ಮಾರೇಹಳ್ಳಿಯ ಚಿಲಿಪಿಲಿ ಗೊಂಬೆ, ಕೊತ್ತತ್ತಿಯ ಮರಗಾಲು ಕುಣಿತ, ಹುಲಿವೇಷ, ಮೈಸೂರಿನ ಕೀಲು ಕುದುರೆ ಕರಗದ ನೃತ್ಯ, ಮೈಸೂರು ನಗಾರಿ, ಮೈಸೂರು ಪೊಲೀಸ್ ಬ್ಯಾಂಡ್, ಲಕ್ಷ್ಮೀಸಾಗರದ ನಾಸಿಕ್ ಡೋಲ್, ಕರಡಿ ಮಜಲು, ಮಂಡ್ಯ ಜಿಲ್ಲೆಯ ನಂದಿಕಂಬ, ಪಟಕುಣಿತ, ಗಾರುಡಿ ಗೊಂಬೆ, ಹುಲಿವೇಷ, ವೀರಗಾಸೆ, ಕೋಲಾಟ, ಡೊಳ್ಳುಕುಣಿತ, ಜಾಂಜ್ ಮೇಳ, ಸೋಮನ ಕುಣಿತ, ಚಕ್ರಾಧಿಬಳೆ, ಖಡ್ಗಪವಾಡ, ವೀರಭದ್ರನಕುಣಿತ, ಗಾರುಡಿಗೊಂಬೆಗಳು, ಶಾಲಾ ಮಕ್ಕಳ 101 ಕಳಶ, ವೀರ ಮಕ್ಕಳಕುಣಿತ, ಕಂಸಾಳೆ, ನಾದಸ್ವರ, ಚಂಡೆ ನಗಾರಿ ಜಡೆ ಕೋಲಾಟ, ಭಾಗವಂತಿಕೆ ಮೇಳ, ದಾಸಯ್ಯರ ದರ್ಶನ, ಶಾಲಾ ಮಕ್ಕಳ ಬ್ಯಾಂಡ್, ಕರಡಿ ಕುಣಿತ ಮುಂತಾದ 60ಕ್ಕೂ ಹೆಚ್ಚು ವೈವಿಧ್ಯಮಯ ಜಾನಪದ ಕಲಾ ಪ್ರಕಾರ ಗಳು ಭಾಗವಹಿಸಿ ಮೆರಗು ನೀಡಿದವು. ಇಡೀ ಮೇಲುಕೋಟೆಯ ರಾಜಬೀದಿಗಳು ಜಾನಪದ ಕಲಾವಿದರಿಂದ ತುಂಬಿ ಹೋಗಿತ್ತು.

ಕಲ್ಯಾಣಿಯಲ್ಲಿ ಸಂಕಲ್ಪ: ರಥಸಪ್ತಮಿ ಅರುಣೋದಯದ ವೇಳೆ ಕಲ್ಯಾಣಿಯಲ್ಲಿ ಗ್ರಹದೋಷ ಪರಿಹಾರಕ್ಕಾಗಿ ಮಹರ್ಷಿ ಆನಂದ ಗುರೂಜಿ ಸಾನಿಧ್ಯದಲ್ಲಿ ಸ್ಥಾನಾ ಚಾರ್ಯ ಡಾ.ಶೆಲ್ವಪ್ಪಿಳ್ಳೆ ಅಯ್ಯಂಗಾರ್ ಭಕ್ತರಿಗೆ ಸೂರ್ಯ ಸಂಕಲ್ಪ ಮಾಡಿಸಿ ದರು. ನಂತರ ಗಂಗಾರತಿ ನೆರ ವೇರಿಸಲಾ ಯಿತು. ರಥಸಪ್ತಮಿ ಅಂಗವಾಗಿ ಸೋಮ ವಾರ ಸಂಜೆ ನಡೆದ ಕರ್ನಾಟಕ ಶಾಸ್ತ್ರೀಯ ಸಂಗೀತೋತ್ಸವದಲ್ಲಿ ಬೆಂಗಳೂರಿನ ವಿದ್ವಾನ್ ಪ್ರಸನ್ನಕುಮಾರ್ ಬಲ್ಲಾಳ್ ಹಾಗೂ ಮಾಸ್ಟರ್ ಸಿ.ಬಸಂತ್‍ರಿಂದ ದ್ವಂದ್ವ ಮ್ಯಾಂಡಲಿನ್ ಕಚೇರಿ ನಡೆಯಿತು. ಇದೇ ವೇಳೆ ಜಾನಪದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಕೊತ್ತತ್ತಿ ಮರಗಾಲುಕುಣಿತ ಕಲಾವಿದ ಬೋರಯ್ಯ, ನಾಗಮಂಗಲ ವೀರಭದ್ರನ ಕುಣಿತದ ಅನಿರುದ್ರ, ಮೇಲುಕೋಟೆ ನಾದಸ್ವರ ವಿದ್ವಾಂಸ ಎಂ.ಎನ್ ಗಣೇಶ್‍ರನ್ನು ಅಭಿನಂದಿಸಲಾ ಯಿತು. ಕೊತ್ತತ್ತಿಯ ಚೆಲುವರಾಜು ತಂಡದಿಂದ ಬೆಂಕಿ ಭರಾಟೆ ನೆರವೇರಿತು.

Translate »