ಜಿಲ್ಲಾದ್ಯಂತ ಶ್ರದ್ಧಾ-ಭಕ್ತಿಯಿಂದ ಸವಿತಾ ಮಹರ್ಷಿ ಜಯಂತಿ ಆಚರಣೆ
ಹಾಸನ

ಜಿಲ್ಲಾದ್ಯಂತ ಶ್ರದ್ಧಾ-ಭಕ್ತಿಯಿಂದ ಸವಿತಾ ಮಹರ್ಷಿ ಜಯಂತಿ ಆಚರಣೆ

February 13, 2019

ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಅದ್ಧೂರಿ ಮೆರವಣಿಗೆ, ಗಣ್ಯರಿಂದ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪನಮನ
ಹಾಸನ: ಜಿಲ್ಲಾದ್ಯಂತ ಮಂಗಳ ವಾರ ಸವಿತಾ ಮಹರ್ಷಿ ಜಯಂತಿಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.

ಜಿಲ್ಲೆಯ ಹಾಸನ, ಆಲೂರು, ಅರಸೀಕೆರೆ, ಬೇಲೂರು, ಸಕಲೇಶಪುರ, ಅರಕಲ ಗೂಡು, ಶ್ರವಣಬೆಳಗೊಳ, ರಾಮನಾಥ ಪುರ, ಹೊಳೆನರಸೀಪುರ, ಚನ್ನರಾಯ ಪಟ್ಟಣ ಸೇರಿದಂತೆ ವಿವಿಧೆಡೆ ಸವಿತಾ ಮಹರ್ಷಿಯ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಸಲಾಯಿತು.

ಹಾಸನ ವರದಿ: ದಿನನಿತ್ಯದ ಜೀವನ ದಲ್ಲಿ ಪ್ರತಿಯೊಬ್ಬರಿಗೂ ಸವಿತಾ ಸಮಾಜದ ಕುಲ ಕಸುಬಿನ ಅವಶ್ಯಕತೆ ಇದೆ. ಮನುಷ್ಯ ನನ್ನು ಕೆತ್ತನೆ ಮಾಡುವಲ್ಲಿ ಈ ಸಮಾಜದ ಪಾತ್ರ ಬಹಳ ಮುಖ್ಯ ಎಂದು ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ನಾಗರಾಜು ಹೇಳಿದರು.

ನಗರದ ಹಾಸನಾಂಬ ಕಲಾಕ್ಷೇತ್ರ ಸಭಾಂ ಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಾಂಸ್ಕøತಿಕ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸವಿತಾ ಮಹರ್ಷಿ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರಿಗೂ ತಮ್ಮ ಕುಲ ಕಸುಬು ಗಳ ಅವಶ್ಯಕತೆ ಇದೆ. ಸಮಾಜಕ್ಕೆ ಸವಿತಾ ಮಹರ್ಷಿಗಳ ಕೊಡುಗೆ ಅಪಾರವಾಗಿದೆ. ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಂಡು ಸಮಾಜಕ್ಕೆ ಕೊಡುಗೆಯಾಗಿ ನಿಗಮ ಮಂಡಳಿಯನ್ನು ಸ್ಥಾಪಿಸಿದೆ. ಇದರ ಮೂಲಕ ಸಂಘಟಿತರಾಗಿ ಸಮಾಜಕ್ಕೆ ಉತ್ತಮ ಕೊಡುಗೆ ಗಳನ್ನು ನೀಡಿ ಎಂದು ಹಾರೈಸಿದರು.

ಶಾಂತಿಗ್ರಾಮ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಉಪನ್ಯಾಸಕ ಗೋವಿಂದರಾಜು ಮಾತನಾಡಿ, ಗಾಯಿತ್ರಿ ಮಂತ್ರ ಪಠಣೆಯ ಮೂಲಕ ಸಾಮಾನ್ಯ ಜನರ ದುಃಖ ದುಮ್ಮಾನಗಳನ್ನು ಅಳಿಸುವ ಕೆಲಸ ಮಾಡಿದ ಏಕೈಕ ವ್ಯಕ್ತಿ ಸವಿತಾ ಮಹರ್ಷಿಗಳು. ಬಸವಣ್ಣನವರ ಆಸ್ಥಾನದಲ್ಲಿ ಮುಖ್ಯ ಕಾರ್ಯದರ್ಶಿಯಾಗಿದ್ದ ಅವರು ಕ್ರಿ.ಶ. 1503ರಲ್ಲೇ ಒಂದು ಲಕ್ಷ ಧನ್ವಂತರಿ ಚಿಕಿತ್ಸೆ ನೀಡುತ್ತಿದ್ದ ಹಿಂಬಾಲಕರನ್ನು ಹೊಂದಿದ್ದರು ಎಂದ ಅವರು, ಸವಿತಾ ಸಮಾಜದ ಉಳಿವಿಗಾಗಿ ಎಲ್ಲರೂ ಒಗ್ಗೂಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತ ನಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿ ಷತ್‍ನ ಅಧ್ಯಕ್ಷ ಬಿ.ಒ.ಮಾಂತಪ್ಪ ಮಾತ ನಾಡಿ, ಜಿಲ್ಲೆಯಲ್ಲಿ ಜನ ಮೆಚ್ಚುವ ಕೆಲಸ ಗಳನ್ನು ಸವಿತಾ ಸಮಾಜ ಮಾಡುತ್ತಿದ್ದು, ಈ ಸಮಾಜದ ಕೆಲಸಗಳು ಬೇರೆಯವ ರಿಗೆ ಮಾರ್ಗದರ್ಶಕವಾಗಿರಲಿ ಹಾಗೂ ಈ ಸಮಾಜದ ವಿಸ್ತರಣೆಗಾಗಿ ಶ್ರಮಿ ಸೋಣ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಶಿಲ್ದಾರರಾದ ತಿಮ್ಮಯ್ಯ, ಕನ್ನಡ ಮತ್ತು ಸಂಸ್ಕøತಿ ಇಲಾ ಖೆಯ ಸಹಾಯಕ ಕಾರ್ಯದರ್ಶಿ ಶಿವ ಲಿಂಗಪ್ಪ ಎನ್.ಕುಂಬಾರ್, ಸವಿತಾ ಸಮಾ ಜದ ಮುಖಂಡರು ಹಾಜರಿದ್ದರು.

ಮೆರವಣಿಗೆ ಉದ್ಘಾಟನೆ: ಸವಿತಾ ಮಹರ್ಷಿ ಜನ್ಮ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆಗೆ ಜಿಲ್ಲಾಧಿಕಾರಿ ಕಚೇರಿ ಆವ ರಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ ಅವರು ಮಹರ್ಷಿಗಳ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಸಂಘ ಸಂಸ್ಥೆಗಳ ಪ್ರಮುಖರು, ಅಧಿಕಾರಿಗಳು ಹಾಜರಿ ದ್ದರು. ವಿವಿಧ ಸಾಂಸ್ಕøತಿಕ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

ಅರಸೀಕೆರೆ ವರದಿ(ಆನಂದ್)- ಎಲ್ಲ ಸಮಾಜಗಳಲೂ ದಾರ್ಶನಿಕ ಮಹಾ ಪುರುಷರು ಆಯಾ ಕಾಲ ಘಟ್ಟದಲ್ಲಿ ಅವತಾ ರವೆತ್ತಿ ಆರೋಗ್ಯ ಸಮಾಜವನ್ನು ನಮಗೆ ಕೊಡುಗೆಯಾಗಿ ನೀಡಿದ್ದಾರೆ. ಅಂತಹ ದಾರ್ಶನಿಕರಲ್ಲಿ ಸವಿತಾ ಮಹರ್ಷಿ ಕೂಡ ಒಬ್ಬರು ಎಂದು ತಹಶೀಲ್ದಾರ್ ಎನ್.ವಿ. ನಟೇಶ್ ಹೇಳಿದರು.

ನಗರದ ರೇಣುಕಾ ಯಲ್ಲಮ್ಮ ದೇವಾಲಯ ದಲ್ಲಿ ಮಂಗಳವಾರ ತಾಲೂಕು ಆಡಳಿತ ಹಾಗೂ ಸವಿತಾ ಸಮಾಜದಿಂದ ಹಮ್ಮಿ ಕೊಂಡಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಾನ್ ವ್ಯಕ್ತಿಗಳನ್ನು ಸರ್ಕಾರವು ಗುರುತಿಸಿ ಅವರುಗಳ ಜಯಂತಿ ಆಚರಣೆ ಯನ್ನು ಮಾಡಲು ಸಂಬಂಧಿಸಿದ ಸಮಾಜ ದವರಿಗೆ ಉತ್ತೇಜನ ನೀಡುತ್ತಿದೆ. ಇದ ರಿಂದ ಆ ಸಮುದಾಯದವರು ಒಂದೆಡೆ ಸೇರಿ ಒಗ್ಗಟ್ಟಾಗಿ ಸಮುದಾಯದ ಏಳಿಗೆಗೆ ಶ್ರಮಿಸಲು ಸಹಕಾರಿಯಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಟೇಲ್ ಶಿವಪ್ಪ ಮಾತನಾಡಿ, ದಾರ್ಶನಿಕರು, ಮಹರ್ಷಿಗಳು ಜಗತ್ತಿಗೆ ಅವಶ್ಯಕವಾಗಿ ಬೇಕಾಗಿದ್ದ ಅನೇಕ ಕೊಡುಗೆಗಳನ್ನು ನೀಡಿ ದ್ದಾರೆ. ಸÀರ್ಕಾರ ಅವರ ಜಯಂತಿಗಳ ಆಚರಣೆ ಮಾಡುವ ಮೂಲಕ ಅವರಿಗೆ ಸಲ್ಲಿಸಬೇಕಾದ ಗೌರವನ್ನು ಸಲ್ಲಿಸುತ್ತಿದೆ. ಜೊತೆಗೆ ಇತಿಹಾಸಕಾರರ ಜಯಂತಿ ಕೇವಲ ಆಚರಣೆಯಾಗದೆ ಜೀವನದಲ್ಲಿ ಅವರ ತತ್ವಾದರ್ಶಗಳನ್ನು ಸ್ವಲ್ಪವಾದರೂ ರೂಢಿಸಿಕೊಂಡಲ್ಲಿ ಮಾತ್ರ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಳಿಕ, ಡಾಕ್ಟರೇಟ್ ಗೌರವ ಪಡೆದ ಸಮಾಜದ ನಾದಸ್ವರ ವಾದಕ ನಾರಾ ಯಣಸ್ವಾಮಿ ಸೇರಿದಂತೆ ಇತರ ಪ್ರತಿಭೆಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ವೇಲು, ನಗರಸಭೆ ಆಯುಕ್ತ ಪರಮೇಶ್ವ ರಪ್ಪ. ನಗರಸಭೆ ಸದಸ್ಯರಾದ ಗಿರೀಶ್, ದಾಸ, ಶುಭ, ಮನೋಜ್‍ಕುಮಾರ್, ರಾಮು, ಚಂದ್ರಶೇಖರ್, ಜೆಡಿಎಸ್ ತಾಲೂಕು ಕಾರ್ಯದರ್ಶಿ ಸುಬ್ರಮಣ್ಯ ಬಾಬು, ಮುಖಂಡರಾದ ರೇಣುಕುಮಾರ್, ಅರುಣ್‍ಕುಮಾರ್, ಧರ್ಮ, ರಾಜು, ಗಣೇಶ್, ಭೀಮೇಶ್ ಮತ್ತು ಮಹಿಳಾ ಸಂಘದ ರಾಣಿ, ಅನಿತಾ ಇನ್ನಿತರರು ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರಮುಖ ರಸ್ತೆಗಳಲ್ಲಿ ಸವಿತಾ ಮಹರ್ಷಿ ಭಾವಚಿತ್ರದ ಮೆರವಣಿಗೆ ರೆÉೀಣುಕಾ ಯಲ್ಲಮ್ಮ ದೇವಿಗೆ ಗಣ್ಯರು ದೀಪ ಬೆಳಗಿಸಿ ವಿಶೇಷ ಪೂಜೆ ಸಲ್ಲಿಸು ವುದರ ಮೂಲಕ ಚಾಲನೆ ನೀಡಿದರು.

ಎಸ್‍ಸಿ, ಎಸ್‍ಟಿ ಸೌಲಭ್ಯ ಸವಿತಾ ಸಮಾಜಕ್ಕೂ ವಿಸ್ತರಿಸಲು ಆಗ್ರಹ
ಬೇಲೂರು: ಪಟ್ಟಣದಲ್ಲಿ ಸವಿತಾ ಸಮಾಜದ ವತಿಯಿಂದ ಸವಿತಾ ಮಹರ್ಷಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಶ್ರೀ ಚೆನ್ನಕೇಶವಸ್ವಾಮಿ ದೇಗುಲ ದಿಂದ ಹೊರಟ ಮೆರವಣಿಗೆ ಪಟ್ಟಣದ ರಾಜಬೀದಿಯಲ್ಲಿ ಸಾಗಿತು.

ತಾಲೂಕು ಸವಿತಾ ಸಮಾಜದ ಅಧ್ಯಕ್ಷ ನರಸಿಂಹಸ್ವಾಮಿ ಮಾತನಾಡಿ, ಸವಿತಾ ಸಮಾಜ ದವರು ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದಿದ್ದಾರೆ. ಅನಾದಿ ಕಾಲದಿಂದಲೂ ಕ್ಷೌರಿಕ ವೃತ್ತಿ ಹಾಗೂ ನಾದಸ್ವರವನ್ನು ಕುಲಕಸುಬನ್ನಾಗಿ ಮಾಡಿಕೊಂಡು ಬಂದಿರುತ್ತಾರೆ. ಕ್ಷೌರ ಮತ್ತು ನಾದಸ್ವರಕ್ಕೆ ಸವಿತಾ ಸಮಾಜದವರ ಸೇವೆ ಅಗತ್ಯವಾಗಿದೆ. ಆದರೆ, ನಮ್ಮ ಸಮುದಾಯದವರನ್ನು ಕೀಳಾಗಿ ಕಾಣುವ ಪ್ರವೃತ್ತಿ ಹೆಚ್ಚಾಗುತ್ತಿದೆ. ನಿಷೇಧಿತ ಪದವನ್ನು ವಿದ್ಯಾವಂತ ಸಮುದಾಯದವರು ಬಳಸುತ್ತಿರುವುದು ವಿಷಾದನೀಯ. ಇವರ ವರ್ತನೆಯಿಂದ ನಮ್ಮ ಸಮುದಾಯದವರಿಗೆ ನೋವಾಗುತ್ತಿದೆ ಎಂದರು.

ಸವಿತಾ ಸಮಾಜವನ್ನು ಪ್ರವರ್ಗ 2ಎ ಗೆ ಸೇರಿಸಲಾಗಿದೆ. ಆದರೆ ಇದರಲ್ಲಿ 108 ಜಾತಿ ಗಳಿವೆ. ಸವಿತಾ ಸಮಾಜ, ಕುಂಬಾರರು, ಮಡಿವಾಳರು ಸೇರಿದಂತೆ ಇತರ ಕೆಲವರು ಸಾಮಾ ಜಿಕ ನ್ಯಾಯದಿಂದ ವಂಚಿತರಾಗಿದ್ದಾರೆ. ಈ ಸಮುದಾಯಗಳಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ನೀಡುವ ಸೌಲಭ್ಯವನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ನಾಗರಾಜು, ಮೋಹನ್, ಖಜಾಂಚಿ ನರಸಿಂಹಮೂರ್ತಿ, ಕಾರ್ಯದರ್ಶಿ ಹರೀಶ್, ಕೋಟೆ ಪ್ರಕಾಶ್, ಅನಿಲ್, ವಿಶಾಲ್, ರಾಮಚಂದ್ರ, ವಿಷ್ಣುಪ್ರಸಾದ್, ತ್ಯಾಗರಾಜ್, ಕಿಟ್ಟಣ್ಣ ಇತರರು ಇದ್ದರು.

Translate »