ಬಸವೇಶ್ವರಸ್ವಾಮಿ ಹಬ್ಬ ಆಚರಣೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಮಂಡ್ಯ

ಬಸವೇಶ್ವರಸ್ವಾಮಿ ಹಬ್ಬ ಆಚರಣೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

March 16, 2019

ಮದ್ದೂರು: ತಾಲೂಕಿನ ಕಾರ್ಕಳ್ಳಿಯ ಗ್ರಾಮದಲ್ಲಿ ಬಸವೇಶ್ವರ ಸ್ವಾಮಿ ಹಬ್ಬಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಗ್ರಾಮದ ಒಂದು ಗುಂಪಿನ ಭಕ್ತಾಧಿಗಳು ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ಮಾಡಿದರು.

ಪ್ರತಿವರ್ಷ 2 ಗುಂಪಿಗೆ ಅವಕಾಶ ನೀಡು ತ್ತಿದ್ದ ಜಿಲ್ಲಾಡಳಿತ ಈ ಬಾರಿ ಒಂದು ಗುಂಪಿಗೆ ಮಾತ್ರ ಅವಕಾಶ ನೀಡಿರುವುದು ಸರಿಯಲ್ಲ ಎಂದು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಲವಾರು ವರ್ಷಗಳಿಂದ ಜಿಲ್ಲಾಡಳಿತ ಹಬ್ಬ ಮಾಡಲು ಗ್ರಾಮದಲ್ಲಿರುವ 2 ಗುಂಪಿಗೆ ಅವಕಾಶ ನೀಡಿ ಹಣವನ್ನು ನೀಡುತ್ತಿತ್ತು. ಈ ಸಂಬಂಧವಾಗಿ ಇತ್ತೀಚೆಗೆ ಉಪ ವಿಭಾಗಾ ಧಿಕಾರಿ ರಾಜೇಶ್ ಆಗಮಿಸಿ ಶಾಂತಿ ಸಭೆ ನಡೆಸಿ ನಮ್ಮ ಗುಂಪಿನಿಂದ ಎಲ್ಲಾ ಮಾಹಿತಿ ಪಡೆದುಕೊಂಡು. ನಮಗೆ ಹಬ್ಬ ಮಾಡಲು ಅವಕಾಶ ನೀಡದೆ ಬೇರೆ ಗುಂಪಿಗೆ ಅವಕಾಶ ನೀಡುವ ಮೂಲಕ ನಮ್ಮ ಗುಂಪಿಗೆ ಮೋಸ ಮಾಡಿದ್ದಾ ರೆಂದು ಆಕ್ರೋಶ ವ್ಯಕ್ತಪಡಿಸಿದರು.

ಈ ರೀತಿ ಮಾಡುತ್ತಿರುವುದರಿಂದ ಗ್ರಾಮದಲ್ಲಿ ಎಲ್ಲರೂ ನೆಮ್ಮದಿಯಾಗಿ ಹಬ್ಬ ಮಾಡಲು ಸಾಧ್ಯವಾಗುತ್ತಿಲ್ಲ. ನಮಗೆ ಹಬ್ಬ ಮಾಡಲು ಹಣ ನೀಡಿ, ಅವಕಾಶ ಮಾಡಿ ಕೊಡದೆ ಹೋದರೆ ಶನಿವಾರ ಬೆಳಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಶಿರಸ್ತೆದಾರ್ ಪ್ರಭಾಕರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಸಿ.ರಾಜು, ಶಿವಕುಮಾರ್ ಸ್ವಾಮಿ, ಶ್ರೀಧರ್, ಸಿದ್ದೇಶ್‍ಕುಮಾರ್, ರಾಜು, ಸೋಮು, ಬಸವರಾಜು, ಶಿವಕುಮಾರ್, ಪ್ರದೀಪ್, ರಾಜೇಶ್, ಬಸವರಾಜು, ಮಾದೇಗೌಡ್ರು, ಸುರೇಶ್, ಜಯರಾಮು ಹಾಗೂ ಕಾರ್ಕಳ್ಳಿ ಹಾಗೂ ದೇವೇಗೌಡನದೊಡ್ಡಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Translate »