ಮರ ಬಿದ್ದು ಮನೆಗೆ ಹಾನಿ, ಪ್ರಾಣಾಪಾಯದಿಂದ ಪಾರಾದ ಕುಟುಂಬ
ಕೊಡಗು

ಮರ ಬಿದ್ದು ಮನೆಗೆ ಹಾನಿ, ಪ್ರಾಣಾಪಾಯದಿಂದ ಪಾರಾದ ಕುಟುಂಬ

July 15, 2018

ಸಿದ್ದಾಪುರ:  ಸಿದ್ದಾಪುರ ಸುತ್ತಮುತ್ತಲಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಭಾರಿ ಗಾತ್ರದ ಮರ ಬಿದ್ದು ಕಾರು ಸೇರಿದಂತೆ ಮನೆಗೆ ಹಾನಿಯಾಗಿ ಮನೆಯಲಿದ್ದವರು ಪ್ರಾಣಾಪಾಯದಿಂದ ಪಾರಾದ ಘಟನೆ ಸಿದ್ದಾಪುರದಲ್ಲಿ ನಡೆದಿದೆ.

ವಿರಾಜಪೇಟೆ ತಾಲೂಕಿನ ಸಿದ್ದಾಪುರ ಮೈಸೂರು ರಸ್ತೆಯ ರಾಮರಾಜ್ ಎಂಬು ವರಿಗೆ ಸೇರಿದ ಹೊಸ ಇನೋವಾ ಕಾರು ಸಂಪೂರ್ಣ ಜಖಂಗೊಂಡಿದ್ದು, ಮನೆಗೆ ಹಾನಿಯಾಗಿದೆ. ಬೆಳಗಿನ ಜಾವ 4ಗಂಟೆಗೆ ಮರ ಬಿದ್ದ ಶಬ್ದ ಕೇಳಿ ಮನೆಯಲ್ಲಿದ್ದವರು ಹಿಂಬದಿಯಿಂದ ಹೊರಗೆ ಬಂದು ಪಾರಾಗಿದ್ದಾರೆ. ಸಿದ್ದಾಪುರ ಮಾಲ್ದಾರೆ ಪಿರಿಯಪಟ್ಟಣ ಮಾರ್ಗವಾಗಿ ಬಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಸ್ಥಳೀಯರು ಮರ ತೆರವುಗೊಳಿಸಿದರು
ಅಪಾಯದಲ್ಲಿರುವ ಮರಗಳನ್ನು ತೆರವುಗೊಳಿಸಬೇಕೆಂದು ಗ್ರಾಮಸಭೆಯಲ್ಲಿ ಮನವಿ ಮಾಡಿದರೂ ತೆರವುಗೊಳಿಸಲು ಮುಂದಾಗಿರಲಿಲ್ಲ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದಾಪುರ ಮಾಲ್ದಾರೆ ರಸ್ತೆಯ ಬದಿಯಲ್ಲಿ ಭಾರಿ ಗಾತ್ರದ ಮರಗಳು ಅಪಾಯದಂಚಿನಲ್ಲಿದ್ದು, ಅನಾಹುತಗಳು ಸಂಭವಿಸುವ ಮುನ್ನ ಮರಗಳನ್ನು ತೆರವುಗೊಳಿಸಬೇಕೆಂದು ವಾಹನ ಚಾಲಕರು ಒತ್ತಾಯಿಸಿದ್ದಾರೆ.

Translate »