ಬಜೆಟ್‍ನಲ್ಲಿ ಕೊಡಗಿಗಿಲ್ಲ ಕೊಡುಗೆ: ಸಿಎಂ ಕುಮಾರಸ್ವಾಮಿಗೆ ಕೊಡಗಿನ ಬಾಲಕನ ಅಳಲು ಸಾಮಾಜಿಕ ಜಾಲತಾಣದಲ್ಲಿ ವೈರಲ್
ಕೊಡಗು

ಬಜೆಟ್‍ನಲ್ಲಿ ಕೊಡಗಿಗಿಲ್ಲ ಕೊಡುಗೆ: ಸಿಎಂ ಕುಮಾರಸ್ವಾಮಿಗೆ ಕೊಡಗಿನ ಬಾಲಕನ ಅಳಲು ಸಾಮಾಜಿಕ ಜಾಲತಾಣದಲ್ಲಿ ವೈರಲ್

July 15, 2018

ಮಡಿಕೇರಿ: ಬಜೆಟ್‍ನಲ್ಲಿ ಕೊಡಗಿಗೆ ಅನುದಾನ ನೀಡದಿರುವ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಕೊಡಗಿನ ಪುಟ್ಟ ಪೋರನೊಬ್ಬ ಸಿಡಿದೆದ್ದಿದ್ದಾನೆ. ಕಾವೇರಿ ಕೊಟ್ಟ ಕೊಡಗಿಗೆ ಬಜೆಟ್‍ನಲ್ಲಿ ಏನೂ ಕೊಡದೇ ಅಮ್ಮ-ಅಪ್ಪ ಇಲ್ಲದ ಅನಾಥವಾಗಿಸಿದ್ದೀರಿ ಎಂದು ಗುಡುಗಿದ್ದಾನೆ.

ಎಮ್ಮೆಮಾಡುವಿನ ಕೂಲಿ ಕಾರ್ಮಿಕ ಕಳ್ಳೀರ ಉಮರ್ ಮತ್ತು ರುಕ್ಯಾ ದಂಪತಿ ಪುತ್ರ 8ನೇ ತರಗತಿ ವಿದ್ಯಾರ್ಥಿ ಫತಹ್ ಸಿಡಿದೆದ್ದಿ ರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಮ್ಮೆಮಾಡುವಿನಲ್ಲಿ ಕಾವೇರಿ ಹೊಳೆ ಮುಂದೆ ಛತ್ರಿ ಹಿಡಿದು ನಿಂತು, ಈ ಪುಟ್ಟ ಪೋರ 5.25 ನಿಮಿಷ ಮುಖ್ಯ ಮಂತ್ರಿಗಳ ವಿರುದ್ಧ ವಾಕ್ ಪ್ರಹಾರ ನಡೆಸಿದ್ದಾನೆ.

ಡಗಿನಲ್ಲಿ ಮಳೆ ಜಾಸ್ತಿ ಬಂದು ಕಾವೇರಿ ತುಂಬಿ ಹರಿದರೆ ನಮಗೆ ಖುಷಿ. ಆದರೆ, ಈ ಮಳೆಯಿಂದಾಗಿ ಭತ್ತ, ಕಾಫಿ, ಕರಿಮೆಣಸು ಮತ್ತು ಅಡಿಕೆ ಬೆಳೆ ನಾಶ ವಾಗುತ್ತಿದೆ. ಮಳೆ ಜಾಸ್ತಿ ಬಂದರೇ ಲಾಭ ಪಡೆಯುವುದು ಮೈಸೂರು, ಮಂಡ್ಯ, ಕೆ.ಆರ್. ನಗರ ಮಾತ್ರವಲ್ಲದೇ ಮದ್ರಾಸ್‍ನವರಿಗೆ. ಮುಖ್ಯಮಂತ್ರಿಯವರೇ, ಮೊದಲು ಪರಿಹಾರ ಕೊಡಬೇಕಾಗಿರುವುದು ಮಳೆ ಬಂದು ಇಷ್ಟೆಲ್ಲಾ ನಾಶವಾಗಿರುವ ಕೊಡ ಗಿಗೆ. ಆದರೆ, ಕೊಡಗನ್ನು ತಂದೆ-ತಾಯಿ ಇಲ್ಲದ ಅನಾಥ ಮಗುವನ್ನಾಗಿ ಬಿಟ್ಟಿದ್ದೀ ರಲ್ಲಾ ಸ್ವಾಮಿ, ಕರ್ನಾಟಕದ ಅರ್ಧ ಭಾಗಕ್ಕೆ ಅನುದಾನ ಕೊಟ್ಟರೂ ಏನು ಆಗು ವುದಿಲ್ಲ. ಆದರೆ, ಎದೆ ಹಾಲು ಕೊಟ್ಟ ತಾಯಿಯನ್ನು ಮರೆಯಬಾರದು ಎಂದು ಉಪದೇಶ ಮಾಡಿದ್ದಾನೆ.

ಮಳೆಯಿಂದ ಎಲ್ಲಾ ಲಾಭವನ್ನು ಪಡೆಯು ತ್ತಿದ್ದೀರಿ. ಈ ಮಳೆಯಿಂದಾಗಿ ಬೆಟ್ಟ-ಗುಡ್ಡ ದಲ್ಲಿರುವ ಕಾಡಾನೆಗಳು ಕುಟ್ಟ, ಬಿರುನಾಣಿ, ಪೊನ್ನಂಪೇಟೆ, ಬಾಳೆಲೆ, ಕೊಡ್ಲಿ ಪೇಟೆ ಗ್ರಾಮಗಳ ತೋಟಗಳಿಗೆ ನುಗ್ಗಿ ನಾಶ ಮಾಡುತ್ತಿವೆ. ಕೂಲಿ ಕೆಲಸಗಾರರು ಆನೆಗೆ ಹೆದರಿ ಕೆಲಸಕ್ಕೆ ಹೋಗಲು ಆಗುತ್ತಿಲ್ಲ. ಕೊಡಗಿನಿಂದ ಕೇರಳಾಕ್ಕೆ ಹೋಗುವ ಮಾಕುಟ್ಟ ರಸ್ತೆ ಹಾಳಾಗಿದೆ ಎಂದು ಸಮಸ್ಯೆಗಳನ್ನು ವಿವರಿಸಿರುವ ಈ ಪೋರ ಇಷ್ಟೆಲ್ಲಾ ಹಾನಿಯಾಗಿರುವುದು ನಿಮಗೆ ಗೊತ್ತಿದ್ದರೂ ಬಜೆಟ್‍ನಲ್ಲಿ ಕೊಡಗನ್ನು ಕೈಬಿಟ್ಟಿರುವುದು ಬೇಸರದ ಸಂಗತಿ ಎಂದು ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಹೇಳಿದ್ದಾನೆ.

ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವ ರನ್ನು ಉದ್ದೇಶಿಸಿ ಮಾತನಾಡಿರುವ ಆತ, ಯಡಿಯೂರಪ್ಪನವರೇ ನೀವು ವಿಧಾನ ಸಭೆ ಒಳಗೆ ಮತ್ತು ಹೊರಗೆ ಎಷ್ಟು ಕೂಗಾ ಡಿದರೂ ಏನು ಆಗುವುದಿಲ್ಲ. ಭಾರತದ ಪ್ರಧಾನಿ ಮೋದಿಜೀ ಅವರ ಬಳಿಗೆ ಹೋಗಿ ಕೊಡಗಿನ ಸಮಸ್ಯೆಗೆ ಪರಿಹಾರ ಕಾಣಬೇಕು ಎಂದು ಸಲಹೆ ನೀಡಿದ್ದಾನೆ.
ಭಾರತದ ಪ್ರಧಾನಿಗಳು ಎಲ್ಲಾ ಜಾತಿ, ಧರ್ಮ ಎನ್ನದೇ 130 ಕೋಟಿ ಜನರನ್ನು ಒಂದೇ ರೀತಿ ಕಾಣಬೇಕು. ಹಾಗೆ ಕರ್ನಾ ಟಕದ ಮುಖ್ಯಮಂತ್ರಿಗಳು ಆರು ಕೋಟಿ ಜನರನ್ನು ಒಂದೇ ಸಮನೆ ಕಾಣ ಬೇಕಾಗಿದೆ. ಆದರೆ, ಈಗಿನ ಮುಖ್ಯ ಮಂತ್ರಿಗಳು ಕೊಡಗನ್ನು ಕೈಬಿಟ್ಟಿರುವುದು ಬೇಸರದ ಸಂಗತಿ. 23-24 ಮುಖ್ಯ ಮಂತ್ರಿಗಳು ಬಂದಿದ್ದರೂ ಯಾರೂ ಕೊಡಗನ್ನು ಕೈ ಬಿಟ್ಟಿರಲಿಲ್ಲ. ಕೊಡಗಿನಿಂದ ಹರಿದು ಬರುವ ಕಾವೇರಿ ಮೇಲೆ ಅಭಿ ಮಾನ ಇಟ್ಟಿದ್ದರು. ಆದರೆ, ಈಗಿನ ಮುಖ್ಯಮಂತ್ರಿ ಕೈಬಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾನೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟಿದ್ದ 7 ಕೆಜಿ ಅಕ್ಕಿಯಲ್ಲಿ 2 ಕೆಜಿ ಅಕ್ಕಿ ಮಾಯವಾಗಿದೆ ಎಂದು ಅಸಮಾ ಧಾನ ವ್ಯಕ್ತಪಡಿಸಿರುವ ಆತ, ಕೆಆರ್‍ಎಸ್ ತುಂಬಿದಾಗ ನೀವು ಪೂಜೆ ಮಾಡುತ್ತೀರಿ. ಹಾಗೆ ಪೂಜೆ ಮಾಡುವಾಗ ಕೊಡಗಿನಲ್ಲಿ 6 ಲಕ್ಷ ಮಕ್ಕಳಿದ್ದಾರೆ ಎಂಬ ನೆನಪು ನಿಮ ಗಿರಬೇಕು ಎಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರನ್ನು ಉದ್ದೇಶಿಸಿ ಹೇಳಿರುವ ಆತ, ನಿಮಗೆ ಅಂತಹ ಮನಸ್ಸಿದ್ದರೆ ನೀವು ಕೊಡಗನ್ನು ಕೈ ಬಿಡಲ್ಲ. ಇನ್ನೂ ಮುಂದಾ ದರೂ ಕೊಡಗಿನ ಆರು ಲಕ್ಷ ಮಕ್ಕಳು ಮಳೆಯ ಕಾರಣದಿಂದ ತೊಂದರೆ ಯಲ್ಲಿದ್ದಾರೆ ಎಂಬುದನ್ನು ಅರಿತುಕೊಳ್ಳಿ ಎಂದಿರುವ ಆತ, ‘ಉಳುವ ಯೋಗಿಯ ನೋಡಲ್ಲಿ’ ಎಂದು ಗದ್ದೆಯಲ್ಲಿ ರೈತ ಬಿತ್ತಿದ ಬೀಜ ಈಗ ಕಾವೇರಿ ಪಾಲಾಗಿದೆ. 2 ಸಾವಿರ ಎಕರೆ ಭತ್ತ ಕಾವೇರಿಗಾಗಿದೆ ಎಂದು ತನ್ನ ಮಾತನ್ನು ಮುಗಿಸಿದ್ದಾನೆ.

Translate »