ಸಾಕಷ್ಟು ಆಕರ್ಷಿಸುವ ಗಣೇಶನ ದೇವಾಲಯ: ಗಣೇಶನ ಜನ್ಮ ವೃತ್ತಾಂತ ತಿಳಿಸುವ ಬಣ್ಣದ ಚಿತ್ರ, ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಗಣೇಶನ ಭಕ್ತರು
ಮಂಡ್ಯ

ಸಾಕಷ್ಟು ಆಕರ್ಷಿಸುವ ಗಣೇಶನ ದೇವಾಲಯ: ಗಣೇಶನ ಜನ್ಮ ವೃತ್ತಾಂತ ತಿಳಿಸುವ ಬಣ್ಣದ ಚಿತ್ರ, ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಗಣೇಶನ ಭಕ್ತರು

September 13, 2018

ಚಿನಕುರುಳಿ:  ‘ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ, ಗಜೇಶಾನಾಯ ಬಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ…’ ಗಜಮುಖ, ಗಣನಾಯಕ, ಗಣಾಧಿಪತಿ, ವಿನಾಯಕ, ವಿಘ್ನೇಶ, ವಿಘ್ನ ನಿವಾರಕ, ಲಂಬೋದರ, ಮೂಷಿಕ ವಾಹನ, ವಕ್ರತುಂಡ, ಉಮಾಸುತ, ಏಕ ದಂತ, ಮೋದಕಪ್ರಿಯ, ಚಂದ್ರಶೇಖರ ತನಯ, ಪ್ರಥಮ ಪೂಜಿತ, ಸಿದ್ಧಿವಿನಾಯಕ, ಬುದ್ಧಿ ಪ್ರದಾಯಕ, ವಿದ್ಯಾಧಿಪತಿ, ಚಾಮರಕರ್ಣ, ಬೆನಕ, ಗಣಪ, ಕರಿ ಮುಖ, ಮೂಷಿಕಧ್ವಜ, ಪಾಶಾಂಕುಶ ಧರ, ಪ್ರಜಾಪತಿ, ವಿಘ್ನವಿನಾಶಕ, ವಿಘ್ನಹರ, ವಿಘ್ನರಾಜ, ಮೋದಕೇಶ್ವರ… ಎಂತೆಲ್ಲ ಕರೆಯಲ್ಪಡುವ ಶಿವ-ಪಾರ್ವತಿಯರ ಪುತ್ರನಾದ ಗಣಪತಿ ಯು ಮಕ್ಕಳಿಂದ ಹಿಡಿದು ಹಿರಿಯ ರೆಲ್ಲರಿಗೂ ಇಷ್ಟವಾಗುವ ದೇವ.

ಯಾವುದೇ ಶುಭ ಸಮಾರಂಭಗಳಿರಲಿ ಅಥವಾ ಪೂಜೆಯಿರಲಿ ಮೊದಲಿಗೆ ಗಣೇಶ ನನ್ನು ಪೂಜಿಸಿ ನಂತರ ಎಲ್ಲ ಕಾರ್ಯ ಗಳು ಪ್ರಾರಂಭಿಸಲಾಗುತ್ತದೆ. ಅಷ್ಟೊಂದು ಮಹತ್ವವನ್ನು ಗಣೇಶನಿಗೆ ಪುರಾಣ, ಪುಣ್ಯ ಕಥೆಗಳಲ್ಲಿ ನೀಡಲಾಗಿದೆ. ಈ ಕಥೆಯನ್ನು ಸಾರುವ ಗಣೇಶನ ದೇವಸ್ಥಾನ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನ ಕುರುಳಿ ಗ್ರಾಮದಲ್ಲಿ ನಿರ್ಮಾಣವಾಗಿ ಈಗ ಪ್ರಥಮ ವರ್ಷದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ.

ಚಿನಕುರುಳಿ ಗ್ರಾಮದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿಯೇ 7 ವರ್ಷಗಳ ಹಿಂದೆಯೇ ಉದ್ಘಾಟನೆಯಾದ ಸುಮಾರು 30 ಅಡಿ ಎತ್ತರದ ರಾಜಗೋಪುರ ಉಳ್ಳ ಪ್ರಸನ್ನ ಗಣಪತಿ ದೇವಸ್ಥಾನದ ಗಣೇಶ ಸುತ್ತ ಲಿನ ಗ್ರಾಮಗಳ ಜನರು ಸೇರಿದಂತೆ ಹೊರ ಜಿಲ್ಲೆಯ ಜನರ ಆರಾಧ್ಯ ದೈವವಾಗಿದ್ದಾನೆ.

ಕಳೆದ ವರ್ಷ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಮುಗಿದಿದ್ದು, ದೇವಾಲಯದ ಒಳಹೊಕ್ಕ ತಕ್ಷಣ ಬಾಲ ಗಣಪ, ಸಿದ್ಧಿಬುದ್ಧಿ ಗಣಪ, ಶ್ರಯನ ಗಣಪ, ಅಷ್ಟಭುಜ ಗಣಪ, ಪಂಚಮುಖಿ ಗಣಪ, ಶಕ್ತಿ ಗಣಪತಿ, ಪ್ರಸನ್ನ ಗಣಪತಿ, ಕರಿವದನ ಸೇರಿದಂತೆ ಸುಮಾರು 24ಕ್ಕೂ ಹೆಚ್ಚು ಭಂಗಿಯಲ್ಲಿರುವ ಗಣೇಶನ ಭಾವ ಚಿತ್ರಗಳು ಕಾಣಿಸುತ್ತದೆ. ಗರ್ಭ ಗುಡಿಯ ಎದುರಿಗೆ ಮೂಸಿಕ ಮೂರ್ತಿ ಹಾಗೂ 20 ಅಡಿ ಎತ್ತರದ ಧ್ವಜಾ ಸ್ತಂಭವಿದ್ದು, ಪಕ್ಕದಲ್ಲಿ ನವಗ್ರಹ ಹಾಗೂ ಎಕ್ಕದ ಗಿಡವಿದೆ.
ದೇವಸ್ಥಾನದ ಹೊರ ಆವರಣದಲ್ಲಿ ಗಣಪತಿಯ ಜನ್ಮವೃತ್ತಾಂತ ಹಾಗೂ ಗಣೇಶನು ವಟುವಿನ ವೇಷ ಧರಿಸಿ ರಾವಣನ ಬಳಿ ಆತ್ಮಲಿಂಗವನ್ನು ಪಡೆದ ಪ್ರಸಂಗವನ್ನು ಚಿತ್ರಗಳ ಸಹಿತವಾಗಿ ತಿಳಿಸಲಾಗಿದೆ. ಇದು ಬರುವ ಪ್ರವಾಸಿಗರನ್ನು ಹೆಚ್ಚು ಆಕರ್ಷಿ ಸುತ್ತದೆ. ದೇವಸ್ಥಾನದ ಎಡ ಹಾಗೂ ಬಲ ಭಾಗದಲ್ಲಿ ಕಾರಂಜಿ ನಿರ್ಮಾಣ ಮಾಡ ಲಾಗಿದ್ದು ಸುಂದರ ತಾಣವಾಗಿ ದೇವಾಲಯ ಕಂಗೊಳಿಸುತ್ತಿದೆ.
‘ಭಾದ್ರಪದ ಮಾಸ ಬಂತೆಂದರೆ ಸಾಕು, ಆ ಸಂದರ್ಭದಲ್ಲಿ ಗ್ರಾಮದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿ ಗ್ರಾಮದ ಯುವಕ ರೆಲ್ಲರೂ ಸೇರಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿತ್ತು. ಸುಮಾರು ಒಂದೂವರೆ ತಿಂಗಳು ಕಾಲ ಗಣೇಶನ ಪೂಜೆಸಿ ಬಳಿಕ ವಿಸರ್ಜನೆ ಮಾಡಲಾಗುತ್ತಿತ್ತು. ಆದರೆ, ಗ್ರಾಮದ ಅಭಿವೃದ್ಧಿಯ ದೃಷ್ಟಿ ಯಿಂದ 7 ವರ್ಷಗಳ ಹಿಂದೆ ಈ ಸ್ಥಳದಲ್ಲಿ ಪ್ರಸನ್ನ ಗಣಪತಿಯ ಮೂರ್ತಿ ಪ್ರತಿಷ್ಠಾಪಿ ಸಲಾಯಿತು’ ಎಂದು ದೇವಾಲಯದ ಪ್ರಧಾನ ಅರ್ಚಕ ಕುಮಾರಸ್ವಾಮಿ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

‘ಸಚಿವರಾದ ಸಿ.ಎಸ್.ಪುಟ್ಟರಾಜು ಅವರು ಹೆಚ್ಚಿನ ಕಾಳಜಿವಹಿಸಿ ಗ್ರಾಮಸ್ಥರು, ಸ್ನೇಹಿತರು, ಹಿತೈಷಿಗಳ ಸಹಕಾರದಿಂದ ಕಳೆದ ವರ್ಷ ಕೋಟ್ಯಾಂತರ ರೂಪಾಯಿ ವೆಚ್ಚದಡಿ ಪ್ರಸನ್ನ ಗಣೇಶನ ದೇವಸ್ಥಾನ ನಿರ್ಮಾಣ ಮಾಡಿ ಉದ್ಘಾಟಿಸಲಾಯಿತು. ಈ ಮಾದರಿಯ ದೇವಸ್ಥಾನ ಸುತ್ತಲಿನ ಯಾವುದೇ ಗ್ರಾಮಗಳಲ್ಲಿಲ್ಲ. ಹಾಗಾಗಿ, ದಿನೇ-ದಿನೆ ಇಲ್ಲಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ’ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಸಚಿವರಾದ ಎಚ್.ಡಿ.ರೇವಣ್ಣ, ಎನ್.ಮಹೇಶ್ ಸೇರಿ ದಂತೆ ಹಲವು ಶಾಸಕರು, ಸಚಿವರು ಸೇರಿ ದಂತೆ ಗಣ್ಯರು ಭೇಟಿ ನೀಡಿ ಗಣಪತಿಯ ದರ್ಶನ ಮಾಡಿರುವುದು ವಿಶೇಷ.

ನಿತ್ಯವೂ ಮೂರು ಜನ ಅರ್ಚಕರು ಇಲ್ಲಿ ಪೂಜಾ ಕಾರ್ಯದಲ್ಲಿ ತೊಡಗಿದ್ದು ಸೋಮವಾರ, ಶುಕ್ರವಾರ ಹಾಗೂ ಮಂಗಳವಾರ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಮಾಡಲಾಗುತ್ತಿದೆ. ಚೌತಿ, ಕಾರ್ತಿಕ ಹಾಗೂ ಶ್ರಾವಣ ಮಾಸ ಹಾಗೂ ವಿಶೇಷ ದಿನಗಳಲ್ಲಿ ಹೋಮ, ಬೆಣ್ಣೆ ಅಲಂಕಾರ ಮಾಡಲಾಗುತ್ತದೆ. ಇಲ್ಲಿ ಜನ್ಮ ನಕ್ಷತ್ರಕ್ಕನುಗುಣವಾಗಿ ಕೂಡ ಪೂಜೆ ಸಲ್ಲಿಸುವ ಸಂಪ್ರದಾಯವಿದೆ.
ಪ್ರತಿದಿನ ಬೆಳಿಗ್ಗೆ 6ರಿಂದ ಅಭಿಷೇಕ ಪೂಜೆ ಪ್ರಾರಂಭಗೊಂಡು 7 ಗಂಟೆಗೆ ಮಹಾ ಮಂಗಳಾರತಿ ಜರುಗುತ್ತದೆ, ಮಧ್ಯಾಹ್ನ 12ಗಂಟೆಗೆ ದೇವಾಲಯ ಮುಚ್ಚಲಾ ಗುತ್ತದೆ. ಮತ್ತೆ ಸಾಯಂಕಾಲ 6ಗಂಟೆ ಯಿಂದ ರಾತ್ರಿ 8 ಗಂಟೆಯವರೆಗೆ ತೆರೆದಿದ್ದು ಸಂಕಷ್ಟ ಸಮಯದಲ್ಲಿ ಮಾತ್ರ ಚಂದ್ರೋ ದಯ ಸಮಯದವರೆಗೂ ಅರ್ಚನೆ ಮಹಾ ಮಂಗಳಾರತಿ ಇತ್ಯಾದಿ ಜರುಗಿ ಪ್ರಸಾದ ವಿನಿಯೋಗ ವಾಗುವವರೆಗೂ ತೆರೆದಿ ರುತ್ತದೆ ಎಂದು ವಿವರಿಸಿದರು.

ಈ ದೇವಾಲಯದ ಗೋಪುರಗಳಲ್ಲಿ ಶಿವ, ಪಾರ್ವತಿ, ದ್ವಾರಪಾಲಕರು ಸೇರಿ ದಂತೆ ವಿವಿಧ ಮೂರ್ತಿಗಳನ್ನು ಕಾಣ ಬಹುದು. ಸುಂದರವಾಗಿ ನಿರ್ಮಾಣ ವಾಗಿ ಪ್ರಸನ್ನ ಗಣಪತಿ ದೇವಾಲಯ ಸುಂದರ ತಾಣವಾಗಿದ್ದು, ಎಲ್ಲ ಜನಾಂ ಗದ ಜನರು ಈ ದೇವರ ಆರಾಧಕ ರಾಗಿರುವುದು ವಿಶೇಷವಾಗಿದೆ.

Translate »