ಆಲೂರಿನಲ್ಲಿ ಡಿಸಿಯಿಂದ ಸಾರ್ವಜನಿಕರ ಕುಂದು ಕೊರತೆ ಸ್ವೀಕಾರ
ಹಾಸನ

ಆಲೂರಿನಲ್ಲಿ ಡಿಸಿಯಿಂದ ಸಾರ್ವಜನಿಕರ ಕುಂದು ಕೊರತೆ ಸ್ವೀಕಾರ

July 8, 2018

ಆಲೂರು: ತಾಲೂಕು ಕಚೇರಿಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧ್ಯಕ್ಷತೆಯಲ್ಲಿ ನಡೆದ ಸಾರ್ವ ಜನಿಕರ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆಯಲ್ಲಿ 190ಕ್ಕೂ ಹೆಚ್ಚು ದೂರು ಸಲ್ಲಿಕೆಯಾದವು.

ಬೆಳಿಗ್ಗೆಯಿಂದಲೇ ನೂರಾರು ಮಂದಿ ಹಾಜರಾಗಿ ಜಿಲ್ಲಾಧಿಕಾರಿ ಅವರ ಮುಂದೆ ತಮ್ಮ ಅಳಲು ತೋಡಿಕೊಂಡರು. ರೈತರ ಜಮೀನಿನ ಸರ್ವೇ ಕಾರ್ಯ, ಜಮೀನು ಮಂಜೂರಾತಿ, ಯೋಜನಾ ನಿರಾಶ್ರಿತರಿಗೆ ಜಮೀನು ಹಕ್ಕು ಪತ್ರ ವಿತರಣೆ ಸೇರಿದಂತೆ ವಿವಿಧ ರೀತಿಯ 190ಕ್ಕೂ ಅಧಿಕ ಅರ್ಜಿ ಗಳು ಸಲ್ಲಿಕೆಯಾದವು.

ಪಟ್ಟಣದ ಎಪಿಎಂಸಿ ಮಾರುಕಟ್ಟೆ, ಅಗ್ನಿಶಾಮಕ ಠಾಣೆ, ಕೆಎಸ್‍ಆರ್‍ಟಿಸಿ ಡಿಪೋಗಳ ನಿರ್ಮಾಣಕ್ಕೆ ಜಾಗ ಒದಗಿಸಿ, ಎತ್ತಿನಹೊಳೆ ನಾಲೆಯಿಂದ ವಾಟೆಹೊಳೆ ಅಣೆಕಟ್ಟಿಗೆ ನೀರು ಹರಿಸಿ, ಆಲೂರು ಪಟ್ಟಣ, ಪಾಳ್ಯ, ಬೈರಾಪುರ, ಕಣತೂರು, ತಾಳೂರು, ಕದಾಳು, ಹುಣಸವಳ್ಳಿ, ದೊಡ್ಡಕಣಗಾಲು ಗಾಪಂಗಳಿಗೆ ಕುಡಿಯು ನೀರು ಪೂರೈಸಿ, ಪಾಳ್ಯದಲ್ಲಿ ಈ ಹಿಂದೆ ಇದ್ದ ಗ್ರಾಮ ಠಾಣಾ ದುರಸ್ತಿ ಪಡಿಸಿ ಎಂದು ಪಟ್ಟಣ ಹಾಗೂ ತಾಲೂಕು ಜನತೆ ಮನವಿ ಮಾಡಿದರು.

ತಾಲೂಕು ವಿವಿಧೆಡೆ ಇದ್ದ ಇದ್ದ ರೈಲು ನಿಲುಗಡೆ ಸ್ಥಗಿತಗೊಳಿಸಲಾಗಿದೆ. ಅದನ್ನು ಪುನಾರಂಭಿಸಬೇಕು. ಆಲೂರು ಪಟ್ಟಣದ ಸರ್ಕಾರಿ ಐಟಿಐ ಕಾಲೇಜು ಕಟ್ಟಡಕ್ಕೆ ಜಾಗ, ಎತ್ತಿನಹೊಳೆ ಯೋಜನೆ ಸಂತ್ರ ಸ್ಥರಿಗೆ ಪರಿಹಾರ ಒದಗಿಸಿಸುವಂತೆ ಕೋರಿಕೆ ಸಲ್ಲಿಕೆಯಾದವು.

ತಾಲೂಕಿನ ಪಾಳ್ಯ ಆಸ್ಪತ್ರೆಯಲ್ಲಿ ವೈದ್ಯರು ಎಲ್ಲಾ ಅವಧಿಯಲ್ಲಿ ಲಭ್ಯವಿರುವಂತೆ ಮಾಡಿ, ಶಾಲಾ ಅವಧಿಯಲ್ಲಿ ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಬಸ್ ಸೌಕರ್ಯ ಕಲ್ಪಿಸಿ, ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಿ, ಹೇಮಾವತಿ, ವಾಟೆಹೊಳೆ ಯೋಜನಾ ನಿರಾಶ್ರಿತರ ಪುನರ್ವಸತಿ ಸಮಸ್ಯೆ ಬೇಗ ಮುಕ್ತಾಯಗೊಳಿಸಿ, ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಿ, ಅಕ್ರಮ ಖಾತೆ ಸರಿಪಡಿಸಿ ಎಂದು ಜನತೆ ಮನವಿ ಮಾಡಿದರು.

ಎಲ್ಲಾ ಸಮಸ್ಯೆಗಳನ್ನು ಸಮಾಧಾನ ದಿಂದ ಆಲಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ಥಳದಲ್ಲೇ ಸಂಬಂಧಪಟ್ಟ ಅಧಿ ಕಾರಿಗಳಿಗೆ ಅದ್ಯತೆ ಮೇರೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸಭೆಯಲ್ಲಿ ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರ ಣಾಧಿಕಾರಿ ಯಶ್ವಂತ್, ಉಪವಿಭಾಗಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ಭೂದಾಖಲೆಗಳ ಉಪ ನಿರ್ದೇಶಕ ಕೃಷ್ಣ ಪ್ರಸಾದ್, ಆಲೂರು ತಹಶೀಲ್ದಾರ್ ಶಾರದಾಂಬ, ತಾಪಂ ಇಓ ಚಂದ್ರ ಶೇಖರ್, ಪಪಂ ಮುಖ್ಯಾಧಿಕಾರಿ ಕೃಷ್ಣಮೂರ್ತಿ ಮತ್ತಿತರರಿದ್ದರು.

Translate »