ನಟರಾಜ ಪ್ರಥಮ ದರ್ಜೆ ಕಾಲೇಜಲ್ಲಿ  ಪರಿಯೋಜನೆಗಳ ಪ್ರದರ್ಶನ ಕಾರ್ಯಕ್ರಮ
ಮೈಸೂರು

ನಟರಾಜ ಪ್ರಥಮ ದರ್ಜೆ ಕಾಲೇಜಲ್ಲಿ  ಪರಿಯೋಜನೆಗಳ ಪ್ರದರ್ಶನ ಕಾರ್ಯಕ್ರಮ

August 2, 2018

ಮೈಸೂರು: ಮೈಸೂರಿನ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ವತಿಯಿಂದ “ಭಾರತದ ಗ್ರಾಮೀಣ ಆರ್ಥಿಕ ವ್ಯವಸ್ಥೆ” ವಿಷಯ ಕುರಿತು ತಯಾರಿಸಲಾದ ಮಾದರಿ ಮತ್ತು ಪರಿಯೋಜನೆಗಳ ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ನಟರಾಜ ಪಬ್ಲಿಕ್ ಶಾಲೆಯ ಪ್ರಿನ್ಸಿಪಾಲರಾದ ಶ್ರೀಮತಿ ಸತ್ಯಸುಲೋಚನಾ ಉದ್ಘಾಟಿಸಿ ಮಾತನಾಡಿ, ಕಾಲೇಜು ಶಿಕ್ಷಣದಲ್ಲಿ ಇದೊಂದು ಉತ್ತಮ ಪ್ರಯತ್ನ ಎಂದು ವಿದ್ಯಾರ್ಥಿನಿಯರನ್ನು ಅಭಿನಂದಿಸಿದರು. ವಿದ್ಯಾರ್ಥಿನಿಯರ ಉದ್ಯೋಗಕ್ಕಾಗಿ ಸಿದ್ಧತೆ, ಸ್ವ-ಉದೋಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದಾದ ವಿಧಾನ, ಬ್ಯಾಂಕಿನಿಂದ ಸಹಾಯ ಧನದ ರೂಪದಲ್ಲಿ ಸಾಲಗಳನ್ನು ಪಡೆಯುವ ರೀತಿ, ಹೀಗೆ ಅನೇಕ ವಿಚಾರಗಳನ್ನು ಕುರಿತು ಉಪಯುಕ್ತ ಮಾಹಿತಿಗಳನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಶಾರದ ವಹಿಸಿ, ಇಂಥಹ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿನಿಯರು ಹೇಗೆ ವ್ಯಕ್ತಿತ್ವವನ್ನು, ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಬೇಕೆಂಬ ಸಲಹೆಗಳನ್ನು ನೀಡಿದರು. ಕಾರ್ಯಕ್ರಮ ಆಯೋಜಿಸಿದ ವಿದ್ಯಾರ್ಥಿನಿಯರನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಪವಿತ್ರ.ಟಿ., ಉಪನ್ಯಾಸಕರಾದ ಗುರು ಹೆಚ್.ಆರ್. ಹಾಗೂ ಗ್ರಂಥಪಾಲಕರಾದ ಶ್ರೀಮತಿ ಶುಭ ಅರಸ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತೃತೀಯ ಬಿ.ಎ. ವಿದ್ಯಾರ್ಥಿನಿ ಶ್ರೀಮತಿ ಗಾಯತ್ರಿ ಪಿ. ಪಾರ್ಥನೆ ಮಾಡಿದರೆ, ವಿದ್ಯಾರ್ಥಿನಿಯರಾದ ಕು. ಲಾವಣ್ಯ ಸ್ವಾಗತಿಸಿದರು. ಕು. ಅಪೂರ್ವ ವಂದಿಸಿದರು, ಕು. ವೀಣಾ ಕಾರ್ಯಕ್ರಮ ನಿರೂಪಿಸಿದರು.

Translate »