ದೇಮಹಳ್ಳಿ ರೈತ ಚಿಕ್ಕಸ್ವಾಮಿ ಆತ್ಮಹತ್ಯೆ ಪ್ರಕರಣ: ಮೃತನ ಕುಟುಂಬಕ್ಕೆ 25 ಲಕ್ಷ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ
ಚಾಮರಾಜನಗರ

ದೇಮಹಳ್ಳಿ ರೈತ ಚಿಕ್ಕಸ್ವಾಮಿ ಆತ್ಮಹತ್ಯೆ ಪ್ರಕರಣ: ಮೃತನ ಕುಟುಂಬಕ್ಕೆ 25 ಲಕ್ಷ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

July 6, 2018

ಚಾಮರಾಜನಗರ: ತನ್ನ ಸಾಲಮನ್ನಾ ಆಗಲಿಲ್ಲ ಎಂದು ತಾಲೂಕಿನ ದೇಮಹಳ್ಳಿ ಗ್ರಾಮದ ರೈತನೋರ್ವ ಆತ್ಮಹತ್ಯೆಗೆ ಶರಣಾದ ಹಿನ್ನೆಲೆಯಲ್ಲಿ ಮೃತ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿ ರೈತ ಸಮುದಾಯ ಇಂದು ಸಂಜೆ ಹೆದ್ದಾರಿಯಲ್ಲಿ ಶವವಿಟ್ಟು ಬೃಹತ್ ಪ್ರತಿಭಟನೆ ನಡೆಸಿತು.

ದೇಮಹಳ್ಳಿ ಗ್ರಾಮದ ರೈತ ಚಿಕ್ಕಸ್ವಾಮಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿ ಸಿದ ಸಾಲಮನ್ನಾ ಯೋಜನೆಯಲ್ಲಿ ತನ್ನ ಸಾಲ ಮನ್ನಾ ಆಗುವುದಿಲ್ಲ ಎಂದು ತಿಳಿದು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿ ಸಿದ್ದರು. ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲ ಕಾರಿಯಾಗದೇ ಚಿಕ್ಕಸ್ವಾಮಿ ಇಂದು ಮೃತ ಪಟ್ಟರು. ಇದರಿಂದ ಆಕ್ರೋಶಗೊಂಡ ಮೃತನ ಕುಟುಂಬಸ್ಥರು, ಸಂಬಂಧಿಕರು, ರೈತ ಸಂಘ, ಹಸಿರು ಸೇನೆ ಹಾಗೂ ಗ್ರಾಮ ಸ್ಥರು ಇಂದು ಸಂಜೆ ಹೋಬಳಿ ಕೇಂದ್ರ ವಾದ ಸಂತೇಮರಹಳ್ಳಿಯ ವೃತ್ತದಲ್ಲಿ ಚಿಕ್ಕ ಸ್ವಾಮಿ ಶವವಿಟ್ಟು ಪ್ರತಿಭಟನೆ ಆರಂಭಿಸಿದರು.

ಸಂಜೆ 6 ಗಂಟೆ ವೇಳೆಗೆ ಮೈಸೂರಿ ನಿಂದ ಬಂದ ಶವವನ್ನು ವೃತ್ತದ ಬಳಿ ಇಟ್ಟು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಚಿಕ್ಕಸ್ವಾಮಿ ಸಾವಿಗೆ ಸಾಲವೇ ಕಾರಣವಾಗಿದ್ದು, ಸರ್ಕಾರ ಯಾವುದೇ ಷರತ್ತುಗಳಿಲ್ಲದೇ ರೈತರ ಇದುವರೆಗಿನ ಎಲ್ಲಾ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿದರು. ಅಲ್ಲದೇ, ಮೃತನ ಪತ್ನಿಗೆ ಸರ್ಕಾರಿ ಉದ್ಯೋಗ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ನೀಡ ಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿ ದರು. ಸಂಜೆ 6 ಗಂಟೆಗೆ ಆರಂಭವಾದ ರಸ್ತೆ ತಡೆ ಪ್ರತಿಭಟನೆ ರಾತ್ರಿ 9 ಗಂಟೆ ವರೆಗೂ ನಡೆದಿದ್ದರಿಂದ ಮೈಸೂರು-ಚಾಮರಾಜನಗರ ಹಾಗೂ ಕೊಳ್ಳೇಗಾಲ-ಚಾಮರಾಜನಗರ ಸಂಚಾರದಲ್ಲಿ ವ್ಯತ್ಯಯ ವಾಗಿ ಪ್ರಯಾಣಿಕರು, ವಾಹನ ಸವಾರರು ಪರದಾಡುವಂತಾಗಿತ್ತು.

ಶವವಿಟ್ಟು ಪ್ರತಿಭಟನೆ ನಡೆಸುತ್ತಿರುವ ವಿಷಯ ತಿಳಿದ ಉಪವಿಭಾಗಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರ ರೊಂದಿಗೆ ಮಾತುಕತೆ ನಡೆಸಿದರು. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಎಲ್ಲಾ ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ನೀಡಿದರು. ಪ್ರತಿಭಟನಾಕಾರರು ಒಪ್ಪದೇ ಸ್ಥಳೀಯ ಜನಪ್ರತಿನಿಧಿಗಳೇ ಬರ ಬೇಕೆಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದರು.

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಂಸದ ಧ್ರುವನಾರಾಯಣ್, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರುಗಳು ರೈತರ ನಡುವೆಯೇ ಕುಳಿತು ಅವರ ಮನವಿ ಯನ್ನು ಆಲಿಸಿ, ಸೂಕ್ತ ಪರಿಹಾರ ನೀಡು ವುದಾಗಿ ಭರವಸೆ ಇತ್ತರು. ಆನಂತರ ರಾತ್ರಿ 8.30ರ ವೇಳೆಗೆ ಸ್ಥಳಕ್ಕೆ ಆಗಮಿಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಅವರು, ಪ್ರತಿಭಟನಾನಿರತ ರೊಂದಿಗೆ ಮಾತನಾಡಿ, ಸರ್ಕಾರದಿಂದ 5 ಲಕ್ಷ ಪರಿಹಾರ ಹಾಗೂ ಪತ್ನಿಗೆ ತಾತ್ಕಾ ಲಿಕ ಉದ್ಯೋಗ ನೀಡುವುದಾಗಿ ಹೇಳಿ ದರಲ್ಲದೇ ರೈತರ ಎಲ್ಲಾ ರೀತಿಯ ಸಂಪೂರ್ಣ ಸಾಲಮನ್ನಾಕ್ಕೆ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವ ರೊಂದಿಗೆ ಚರ್ಚೆ ನಡೆಸಿ, ಕ್ರಮಕೈಗೊ

ಳ್ಳುವುದಾಗಿ ಭರವಸೆ ನೀಡಿದರು. ಅಲ್ಲದೇ, ಪ್ರತಿಭಟನೆ ಕೈಬಿಟ್ಟು ಶವ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡುವಂತೆ ರೈತ ಸಮುದಾಯದವರಲ್ಲಿ ಮನವಿ ಮಾಡಿದರು.

ಸಚಿವರ ಮನವಿ ಮೇರೆಗೆ ಪ್ರತಿಭಟನೆ ಹಿಂಪಡೆದು, ಶವವನ್ನು ಮೃತನ ಸ್ವಗ್ರಾಮ ದೇಮಹಳ್ಳಿಗೆ ಕೊಂಡೊಯ್ಯಲಾಯಿತು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮಹೇಶ್ ಪ್ರಭು, ಹೊನ್ನೂರು ಪ್ರಕಾಶ್, ಹೆಬ್ಬಸೂರು ಬಸವಣ್ಣ, ಡಾ.ಗುರು ಪ್ರಸಾದ್, ಜ್ಯೋತಿಗೌಡನಪುರ ಸಿದ್ದ ರಾಜು, ದೇಮಹಳ್ಳಿ ಮಹದೇವಪ್ರಸಾದ್ ಸೇರಿದಂತೆ ಗ್ರಾಮಸ್ಥರು ಮೃತನ ಕುಟುಂಬ ಸ್ಥರು, ಸಂಬಂಧಿಕರು, ರೈತ ಸಂಘ ಹಾಗೂ ಹಸಿರು ಸೇನೆಯ ಅಪಾರ ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.

Translate »