ಸಾಲಬಾಧೆಯಿಂದ ರೈತ ಮಹಿಳೆ ಆತ್ಮಹತ್ಯೆ
ಮೈಸೂರು

ಸಾಲಬಾಧೆಯಿಂದ ರೈತ ಮಹಿಳೆ ಆತ್ಮಹತ್ಯೆ

July 5, 2018

ಬೈಲಕುಪ್ಪೆ: ಸಾಲಬಾಧೆಯಿಂದಾಗಿ ರೈತ ಮಹಿಳೆಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಿರಿಯಾಪಟ್ಟಣ ತಾಲೂಕು ತಿರುಮಲಾಪುರದಲ್ಲಿ ಇಂದು ನಡೆದಿದೆ.

ಗ್ರಾಮದ ದಿವಂಗತ ಕೋರೇಗೌಡ ಎಂಬುವರ ಪತ್ನಿ ಪುಟ್ಟಮ್ಮ (77) ಆತ್ಮಹತ್ಯೆ ಮಾಡಿಕೊಂಡಿರುವ ರೈತ ಮಹಿಳೆ. ಒಂದು ಎಕರೆ ಜಮೀನು ಹೊಂದಿದ್ದ ಇವರು ಜೋಳದ ಫಸಲಿಗಾಗಿ ಹಾಗೂ ಖಾಯಿಲೆ ಬಿದ್ದಿದ್ದ ತಮ್ಮ ಮೊಮ್ಮಗನ ಆಸ್ಪತ್ರೆ ಚಿಕಿತ್ಸೆ ಖರ್ಚಿಗಾಗಿ ಸಾಲ ಮಾಡಿದ್ದರೆಂದು ವರದಿಯಾಗಿದೆ. ಸಾಲ ತೀರಿಸಲಾಗದೆ ಮನನೊಂದು ಬೈಲಕುಪ್ಪೆ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಶಾಲನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತ ಮಹಿಳೆ ಶವದ ಮರಣೋತ್ತರ ಪರೀಕ್ಷೆ ನಡೆಯಿತು.

Translate »