ಬೈಲಕುಪ್ಪೆ: ಗ್ರಾಮದ ರಸ್ತೆಗೆ ವ್ಯಕ್ತಿ ಯೊಬ್ಬ ಅಕ್ರಮವಾಗಿ ಬೇಲಿ ಹಾಕಿರುವುದರಿಂದ ಮಾರ್ಗ ಬಂದ್ ಆಗಿದ್ದು, ಹೃದಯಾಘಾತವಾದ ವ್ಯಕ್ತಿಯೊಬ್ಬರನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆದೊಯ್ಯಲಾಗದ ಕಾರಣ ಅವರು ಸಾವನ್ನಪ್ಪಿದರು ಎಂದು ಮೃತನ ಸಂಬಂಧಿಕರು ಕಣ್ಣೀರಿಟ್ಟು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮೀಪದ ನಾರಾಯಣಪುರ ಗ್ರಾಮದ ರಾಜ ನಾಯಕ ಎಂಬುವರ ಪುತ್ರ ತಮ್ಮಯ್ಯನಾಯಕ(80) ಹೃದಯಾಘಾತಕ್ಕೊಳಗಾಗಿ ಸಕಾಲದಲ್ಲಿ ಚಿಕಿತ್ಸೆ ಲಭಿಸದೇ ಮೃತರಾದರು. ಅದೇ ಗ್ರಾಮದ ರಂಗನಾಯಕ ಎಂಬುವರ ಪುತ್ರ ದೇವನಾಯಕ ಅವರು ಸಂಚಾರ ಮಾರ್ಗಕ್ಕೆ ಅಕ್ರಮವಾಗಿ ಬೇಲಿ ಹಾಕಿದ್ದಾರೆ ಎಂದು ಮೃತನ ಬಂಧುಗಳು ಆರೋಪಿಸಿದ್ದಾರೆ….
ಪಿಡಿಓ ವಿರುದ್ಧ ಬೆಣಗಾಲು ಗ್ರಾಮಸ್ಥರ ಪ್ರತಿಭಟನೆ, ಕಾರ್ಯನಿರ್ವಹಣಾಧಿಕಾರಿ ಭೇಟಿ
December 15, 2018ಬೈಲಕುಪ್ಪೆ: ಪಿ.ಡಿ.ಓ. ಮಂಜುನಾಥ್‍ರ ಸರ್ವಾಧಿಕಾರ ಧೋರಣೆ ಖಂಡಿಸಿ ಬೆಣಗಾಲು ಗ್ರಾಮಸ್ಥರು ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಕಾರ್ಯನಿರ್ವಾಹಣಾಧಿಕಾರಿ ಶೃತಿ ಅವರು ಭೇಟಿ ನೀಡಿ ಧರಣಿ ಕೈಬಿಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಿರಿಯಾಪಟ್ಟಣ ತಾಲೂಕು ಬೆಣಗಾಲು ಗ್ರಾಪಂ ಕಚೇರಿಗೆ ಬೀಗ ಹಾಕಿ ಪಿಡಿಓ ಮಂಜುನಾಥ ಅವರನ್ನುಕೂಡಲೆ ವರ್ಗಾಯಿಸುವಂತೆ ಗ್ರಾಮಸ್ಥರು ಧರಣಿ ಪ್ರಾರಂಭಿಸಿದ್ದರು. ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಕಾರ್ಯನಿರ್ವಾಹಣಾಧಿಕಾರಿ ಶೃತಿ ಭೇಟಿನೀಡಿ ಧರಣಿಯನ್ನು ಕೈಬಿಟ್ಟು, ಒಂದು ವಾರ ಕಾಲಾವಕಾಶ ಕೊಡಿ. ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿ, ಪ್ರತಿಭಟನಾ ನಿರತರನ್ನು ಮನವೊಲಿಸಿದರು. ಸಾಕ್ಷಿ ನಾಶವಾಗದಂತೆ…
ಬೆಣಗಾಲು ಪಿಡಿಓ ವರ್ಗಾವಣೆಗೆ ಆಗ್ರಹಿಸಿ ಧರಣಿ ಆರಂಭ
December 12, 2018ಬೈಲಕುಪ್ಪೆ: ಪಿಡಿಓ ಮಂಜುನಾಥ್ ಸರ್ವಾಧಿಕಾರಿ ಧೋರಣೆ ಖಂಡಿಸಿ, ಬೆಣಗಾಲು ಗ್ರಾಮಸ್ಥರು ಕೂಡಲೇ ವರ್ಗಾವಣೆ ಮಾಡುವಂತೆ ಆಗ್ರಹಿಸಿ ಅಧ್ಯಕ್ಷ ಸುಂದರೇಗೌಡ ನೇತೃತ್ವದಲ್ಲಿ ಗ್ರಾಪಂ ಕಚೇರಿಗೆ ಬೀಗ ಜಡಿದು ಅಹೋ ರಾತ್ರಿ ಧರಣಿ ಆರಂಭಿಸಿದರು. ಪಿರಿಯಾಪಟ್ಟಣ ತಾಲೂಕಿನ ಬೆಣ ಗಾಲು ಗ್ರಾಪಂ ಆವರಣದಲ್ಲಿ ಜಮಾ ಯಿಸಿ ಧರಣಿ ಆರಂಭಿಸಿದ ಗ್ರಾಮಸ್ಥರು, ಪಿಡಿಓ ಸೇರಿಂದಂತೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ವಿರುದ್ಧಿ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಪಂ ಅಧ್ಯಕ್ಷ ಸುಂದರೇಗೌಡ ಮಾತನಾಡಿ, ಪಿಡಿಓ ಮಂಜುನಾಥ್ 9 ವರ್ಷಗಳಿಂದ ಇದೇ ಗ್ರಾಪಂನಲ್ಲಿ ಕಾರ್ಯ…
ಮದ್ಯ ತ್ಯಜಿಸಿ, ಸಾಂಸಾರಿಕ ಬದುಕು ಯಶಸ್ವಿಗೊಳಿಸಿ
November 16, 2018ಬೈಲಕುಪ್ಪೆ: ದುಶ್ಚಟಕ್ಕೆ ಬಲಿಯಾದರೆ ನಿಮ್ಮ ಸಂಸಾರ ಬೀದಿಗೆ ಬಂದು ನಿಲ್ಲುವ ಪರಿಸ್ಥಿತಿ ಎದುರಾಗುತ್ತದೆ. ಹಾಗಾಗಿ ಮದ್ಯವಜ್ರ್ಯ ಶಿಬಿರದಲ್ಲಿ ಪಾಲ್ಗೊಂಡು ದುಶ್ಚಟದಿಂದ ಹೊರ ಬನ್ನಿ. ಆಗ ನಿಮ್ಮ ಸಂಸಾರ ಯಶಸ್ವಿಯಾಗಿ ಸಾಗುತ್ತದೆ ಎಂದು ತಾಪಂ ಸದಸ್ಯ ಎ.ಟಿ.ರಂಗಸ್ವಾಮಿ ಕಿವಿಮಾತು ಹೇಳಿದರು. ಪಿರಿಯಾಪಟ್ಟಣ ತಾಲೂಕು ಮಲ್ಲಿನಾಥಪುರ ಕಾಫಿ ಕ್ಯೂರಿಂಗ್ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಪ್ಪ ವಲಯ ವತಿಯಿಂದ ಆಯೋಜಿಸಲಾಗಿದ್ದ ಮದ್ಯವಜ್ರ್ಯನ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದರು. ಧರ್ಮಸ್ಥಳ ಮಂಜುನಾಥ ದೇವರ ಕೃಪೆಯಿಂದ ನೀವುಗಳು ದುಶ್ಚಟಕ್ಕೆ ಮುಕ್ತಿ ಹಾಡುವ ಕಾಲ…
ಮದ್ಯಪಾನ ತ್ಯಜಿಸಿ ಬದುಕು ಕಟ್ಟಿಕೊಳ್ಳಿ
November 13, 2018ಬೈಲಕುಪ್ಪೆ: ಮದ್ಯ ವ್ಯಸನಿ ಗಳಾಗಿ ಕುಟುಂಬವನ್ನೇ ಸರ್ವನಾಶ ಮಾಡಿಕೊಳ್ಳದೇ ಮದ್ಯವರ್ಜನಾ ಶಿಬಿರ ಗಳಲ್ಲಿ ಪಾಲ್ಗೊಂಡರೆ ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದು ಶಾಸಕ ಕೆ.ಮಹದೇವ್ ತಿಳಿಸಿದರು. ಪಿರಿಯಾಪಟ್ಟಣ ತಾಲೂಕು ಮಲ್ಲಿನಾಥ ಪುರ ಕಾಫಿ ಕ್ಯೂರಿಂಗ್ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡಗು ಜಿಲ್ಲೆ ಕೊಪ್ಪ ವಲಯದಿಂದ ಆಯೋಜಿಸಿದ್ದ ಮದ್ಯ ವರ್ಜನಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಡೆ ಯವರು ಹಳ್ಳಿಗಾಡಿನಲ್ಲಿ ಕೆಲವರು ಕುಡಿತಕ್ಕೆ ಬಲಿಯಾಗಿ ತಮ್ಮ ಸಂಸಾರ ವನ್ನೇ ಬೀದಿಪಾಲು ಮಾಡಿಕೊಳ್ಳು…
ಬೈಲಕುಪ್ಪೆ ಪ್ರೌಢಶಾಲಾ ಮಕ್ಕಳಿಗೆ ಸೈಕಲ್ ವಿತರಣೆ
November 12, 2018ಬೈಲಕುಪ್ಪೆ: ಪೋಷಕರು ಶಿಕ್ಷಕರೊಂದಿಗೆ ಸಹಕರಿಸಿದಾಗ ಮಾತ್ರ ಮಕ್ಕಳು ಉನ್ನತ ವ್ಯಾಸಂಗದ ಕಡೆ ಹೆಚ್ಚು ಗಮನಹರಿಸಲು ಸಾಧ್ಯ ಎಂದ ಜಿಪಂ ಸದಸ್ಯ ವಿ.ರಾಜೇಂದ್ರ ಅಭಿಪ್ರಾಯಪಟ್ಟರು. ಪಿರಿಯಾಪಟ್ಟಣ ತಾಲೂಕು ಬೈಲಕುಪ್ಪೆ ಪ್ರೌಢಶಾಲೆ ಆವರಣದಲ್ಲಿ ಶಾಲಾ ಮಕ್ಕಳಿಗೆ ಸೈಕಲ್ ವಿತರಿಸಿ ಅವರು ಮಾತನಾಡಿದರು. ಸರ್ಕಾರ ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ಮಧ್ಯಾಹ್ನದ ಬಿಸಿಯೂಟ, ಕೆನೆಭರಿತ ಹಾಲು, ಸಮವಸ್ತ್ರ, ಪಠ್ಯಪುಸ್ತಕ, ಶೂ ಸೇರಿದಂತೆ ಶೈಕ್ಷಣಿಕ ಅಗತ್ಯ ವಸ್ತುಗಳನ್ನು ಉಚಿತವಾಗಿ ವಿತರಿಸುತ್ತಿದ್ದು. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಶಾಲೆಯ ಎಸ್‍ಎಲ್‍ಎಲ್‍ಸಿ ಮಕ್ಕಳು…
ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವು
October 20, 2018ಸೆಸ್ಕ್ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ ಬೈಲಕುಪ್ಪೆ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಯನ್ನು ತುಳಿದು ರೈತರೊಬ್ಬರು ಸ್ಥಳ ದಲ್ಲೇ ಮೃತಪಟ್ಟಿರುವ ಘಟನೆ ಮನುಗನ ಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ. ಮೃತಪಟ್ಟ ವ್ಯಕ್ತಿ ಮನುಗನಹಳ್ಳಿ ಗ್ರಾಮದ ಮಹಲಿಂಗಪ್ಪಗೌಡ ಅವರ ಮಗ ನಂಜುಂಡೇಗೌಡ(50). ಗ್ರಾಮದ ಗೋವಿಂದೇಗೌಡರಿಗೆ ಸೇರಿದ ಜಮೀನಿನ ಮೇಲೆ ವಿದ್ಯುತ್ ತಂತಿ ಹಾದುಹೋಗಿದ್ದು, ಅದು ತುಂಡಾಗಿ ಬಿದ್ದಿತ್ತು. ಅದನ್ನು ಗಮನಿಸದೆ ರೈತ ನಂಜುಂಡೇಗೌಡ ತುಳಿದು, ಮೃತಪಟ್ಟಿದ್ದಾರೆ. ಘಟನೆ ವಿವರ: ಒಂದು ವಾರದ ಹಿಂದೆಯೇ ಕಂಬದಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್…
ಮುಖ್ಯಮಂತ್ರಿ ಚಂದ್ರು ಅವರಿಗೆ ಕಾವೇರಿ ರತ್ನ ಪ್ರಶಸ್ತಿ ಪ್ರಧಾನ
October 20, 2018ಬೈಲಕುಪ್ಪೆ: ಕಾವೇರಿ ನದಿ ಮಲಿನ ಆಗದಂತೆ ಸಾರ್ವಜನಿಕರು ಎಚ್ಚರ ವಹಿಸಬೇಕಾಗಿದೆ ಎಂದು ಹಿರಿಯ ಚಿತ್ರನಟ ಮುಖ್ಯಮಂತ್ರಿ ಚಂದ್ರು ತಿಳಿಸಿದರು.ಕೊಡಗಿನ ಗಡಿಭಾಗದ ಬಿ.ಎಂ.ರಸ್ತೆ ಬದಿ ಭಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ನಿರ್ಮಿಸಿರುವ ಕಾವೇರಮ್ಮನ ಆವರಣದಲ್ಲಿ 6ನೇ ವರ್ಷದ ಕಾವೇರಿರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಕಾವೇರಿ ನದಿ ನೀರಿಗಾಗಿ ತಮಿಳುನಾಡಿ ನವರು ಕ್ಯಾತೆ ತೆಗೆದಾಗ ಒಗ್ಗಟ್ಟಿನಿಂದ ಪಕ್ಷಭೇದ ಮರೆತು ನಾವೆಲ್ಲರೂ ಹೋರಾಟಕ್ಕೆ ಸಜ್ಜಾಗುತ್ತೇವೆ. ಅದೇ ರೀತಿ ಪ್ರವಾಹ ದಿಂದ ನಲುಗಿದ ಕೊಡಗಿನ ಕುಟುಂಬ ಸ್ಥರಿಗೆ ನೆರವಾಗಬೇಕಾಗಿದೆ. ನಾನು ಸಹ…
ವಿದ್ಯುತ್ ಕಂಬದ ಸುತ್ತಲಿನ ಗಿಡಗಂಟಿ ತೆರವಿಗೆ ಆಗ್ರಹ
October 8, 2018ಬೈಲಕುಪ್ಪೆ: ಟ್ರಾನ್ಸ್‍ಫಾರ್ಮರ್ ಅಳವಡಿಸಿರುವ ವಿದ್ಯುತ್ ಕಂಬದ ಸುತ್ತ ಗಿಡಗಂಟಿಗಳು ಬೆಳೆದು ನಿಂತಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳು ಕಂಡರೂ ಕಾಣದಂತೆ ತಿರುಗಾಡುತ್ತಿದ್ದಾರೆ ಎಂದು ಗೆರೋಸಿಯಾ ಕಾಲೋನಿಯ ಮುಖಂಡ ಧರ್ಮ ತಿಳಿಸಿದ್ದಾರೆ. ಪಿರಿಯಾಪಟ್ಟಣ ತಾಲೂಕು ಕೊಪ್ಪ ಬಿ.ಎಂ.ರಸ್ತೆಯಿಂದ ಗೆರೋಸಿಯಾ ಕಾಲೋನಿಯ ಮಾರ್ಗ ಚೌಡೇಶ್ವರಿ ದೇವಸ್ಥಾನಕ್ಕೆ ಹೋಗುವ ಮುಖ್ಯರಸ್ತೆಬದಿಯಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಹಾಗೂ ಅದೇ ಮಾರ್ಗ ಮತ್ತೊಂದು ವಿದ್ಯುತ್ ಟ್ರಾನ್ಸ್ ಫಾರ್ಮರ್ ಕಂಬದ ಸುತ್ತ ಗಿಡಗಂಟಿಗಳು ಬೆಳೆದು ನಿಂತಿದ್ದು, ಟ್ರಾನ್ಸ್‍ಫಾರ್ಮರ್ ತಂತಿಗೆ ಗಿಡಗಳು ತಗಲುತ್ತಿದೆ. ದಿನಕ್ಕೆ ಹಲವು ಬಾರಿ…
ಕೇರಳ, ಕೊಡಗು ನೆರೆ ಸಂತ್ರಸ್ತರ ಪರ 2 ಸಾವಿರ ಬೌದ್ಧ ಭಿಕ್ಷುಗಳಿಂದ ವಿಶೇಷ ಪ್ರಾರ್ಥನೆ
September 26, 2018ಬೈಲಕುಪ್ಪೆ: ಕೇರಳ ಮತ್ತು ಕರ್ನಾಟಕದಲ್ಲಿ ಪಕೃತಿ ವಿಕೋಪಕ್ಕೆ ಗುರಿಯಾದ ನೊಂದ ಜೀವಗಳಿಗೆ ನಿರಾಶ್ರಿತ ಟಿಬೇಟಿಯನ್ ಹೃದಯಗಳು ಮಿಡಿಯುತ್ತಿದ್ದು, 2 ಸಾವಿರಕ್ಕೂ ಹೆಚ್ಚು ಮಂದಿ 7 ದಿನಗಳ ವಿಶೇಷ ಮಹಾ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಪಿರಿಯಾಪಟ್ಟಣ ತಾಲೂಕು ಬೈಲುಕುಪ್ಪೆಯ ಟಿಬೆಟಿಯನ್ ನಿರಾಶ್ರಿತರ ಶಿಬಿರದಲ್ಲಿ ಇರುವ ಸೇರಾಮೇ ಧರ್ಮಶಾಲೆ ಟಿಬೆಟ್‍ನಲ್ಲಿ 500 ವರ್ಷಗಳ ಹಿಂದೆ ಸ್ಥಾಪಿತವಾದ ಧರ್ಮಶಾಲೆಯಾಗಿದ್ದು, ಈ ಇತಿಹಾಸ ಹೊಂದಿರುವ ಸೆರಾಮೇ ಧರ್ಮಶಾಲೆಯಲ್ಲಿ ಈ ವಿಶೇಷ ಪ್ರಾರ್ಥನೆ ಕೈಗೊಳ್ಳಲಾಗುತ್ತಿದೆ. ಮೆಡಿಸಿನ್ ಬುದ್ಧನ ಪ್ರಾರ್ಥನೆ : ಬುದ್ಧನನ್ನು ದೇವರೆಂದು ಪರಿಗಣಿಸುವ ಟಿಬೆಟಿಯನ್ನರು…