ಮದ್ಯಪಾನ ತ್ಯಜಿಸಿ ಬದುಕು ಕಟ್ಟಿಕೊಳ್ಳಿ
ಮೈಸೂರು

ಮದ್ಯಪಾನ ತ್ಯಜಿಸಿ ಬದುಕು ಕಟ್ಟಿಕೊಳ್ಳಿ

November 13, 2018

ಬೈಲಕುಪ್ಪೆ: ಮದ್ಯ ವ್ಯಸನಿ ಗಳಾಗಿ ಕುಟುಂಬವನ್ನೇ ಸರ್ವನಾಶ ಮಾಡಿಕೊಳ್ಳದೇ ಮದ್ಯವರ್ಜನಾ ಶಿಬಿರ ಗಳಲ್ಲಿ ಪಾಲ್ಗೊಂಡರೆ ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.

ಪಿರಿಯಾಪಟ್ಟಣ ತಾಲೂಕು ಮಲ್ಲಿನಾಥ ಪುರ ಕಾಫಿ ಕ್ಯೂರಿಂಗ್ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡಗು ಜಿಲ್ಲೆ ಕೊಪ್ಪ ವಲಯದಿಂದ ಆಯೋಜಿಸಿದ್ದ ಮದ್ಯ ವರ್ಜನಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಡೆ ಯವರು ಹಳ್ಳಿಗಾಡಿನಲ್ಲಿ ಕೆಲವರು ಕುಡಿತಕ್ಕೆ ಬಲಿಯಾಗಿ ತಮ್ಮ ಸಂಸಾರ ವನ್ನೇ ಬೀದಿಪಾಲು ಮಾಡಿಕೊಳ್ಳು ವುದನ್ನು ಗಮನಿಸಿ, ಸಾರ್ವಜನಿಕರ ಸಹಕಾರದೊಂದಿಗೆ ಮದ್ಯವರ್ಜನಾ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿರು ವುದರಿಂದ ಕೆಲವು ಕುಟುಂಬಗಳಿಗೆ ತುಂಬ ಅನುಕೂಲವಾಗಿದೆ. ಮದ್ಯ ವ್ಯಸನಿಗಳು ಶಿಬಿರಕ್ಕೆ ಸೇರಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಸಲಹೆ ನೀಡಿದರು.

ತಾಲೂಕಿನ ಮಾಜಿ ಶಾಸಕ ಹೆಚ್.ಸಿ. ಬಸವರಾಜು ಮಾತನಾಡಿದರು. ಹೆಚ್.ಡಿ.ರಾಜೇಂದ್ರ ಶಿಬಿರದ ಅಧ್ಯಕ್ಷತೆ ವಹಿಸಿದ್ದರು. ಮದ್ಯವರ್ಜನ ಶಿಬಿರದ ಅಧ್ಯಕ್ಷ ಜಿಪಂ ಸದಸ್ಯ ವಿ.ರಾಜೇಂದ್ರ, ತಾಪಂ ಸದಸ್ಯ ಎ.ಟಿ.ರಂಗಸ್ವಾಮಿ, ಪಿರಿಯಾಪಟ್ಟಣದ ಪುರಸಭಾ ಸದಸ್ಯ ಕೃಷ್ಣ, ಬೈಲಕುಪ್ಪೆ ಗ್ರಾಪಂ ಮಾಜಿ ಅಧ್ಯಕ್ಷೆ ಶೋಭಾ, ಕೊಡುಗು ಜಿಲ್ಲಾ ಕ್ಷೇತ್ರದ ಯೊಜನೆಯ ನಿರ್ದೇಶಕ ಎ.ಯೋಗೇಶ್, ಪಿರಿಯಾಪಟ್ಟಣದ ಶ್ರೀಕ್ಷೇತ್ರದ ನಿರ್ದೇಶಕ ರಮೇಶ್ ಮತ್ತು ಶ್ರೀ ಕ್ಷೇತ್ರದ ಸಿಬ್ಬಂದಿ ದಿನೇಶ್, ರಂಜೀತ್, ಕೊಪ್ಪವಲಯ ಮೇಲ್ವಿಚಾರಕ ವೈ.ಕೆ. ಉಮೇಶ್, ಮಹಿಳಾ ಸಹಾಯಕಿಯರು ಹಾಗೂ ಗ್ರಾಮಸ್ಥರಿದ್ದರು.

Translate »