ಕೇಂದ್ರ ಸಚಿವ ಅನಂತ್‍ಕುಮಾರ್‍ಗೆ ಶ್ರದ್ಧಾಂಜಲಿ
ಮೈಸೂರು

ಕೇಂದ್ರ ಸಚಿವ ಅನಂತ್‍ಕುಮಾರ್‍ಗೆ ಶ್ರದ್ಧಾಂಜಲಿ

November 13, 2018

ನಂಜನಗೂಡು:  ಇಂದು ಮುಂಜಾನೆ ವಿಧಿವಶರಾದ ಕೇಂದ್ರ ಸಚಿವ ಅನಂತ್ ಕುಮಾರ್‍ಗೆ ಎಂಜಿಎಸ್ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು, ಮುಖಂಡರು ಭಾವ ಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, ಸುಮಾರು 6 ಬಾರಿ ಗೆದ್ದಿದ್ದ ಅನಂತ್ ಕುಮಾರ್ ಅವರ ಅಗಲಿಕೆ ಪಕ್ಷ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ನಾನು ಶಾಸಕನಾಗಿ ಆಯ್ಕೆಯಾದಂತಹ ಸಂದರ್ಭದಲ್ಲಿ ಭೇಟಿ ಮಾಡಿದ್ದೆ. ಆ ವೇಳೆ ನಂಜನಗೂಡು ಕ್ಷೇತ್ರದ ಅಭಿವೃದ್ಧಿಗೆ ಉತ್ತಮ ಜನ ನಾಯಕರಾಗಿ ಕೆಲಸ ಮಾಡು ವಂತೆ ಸಲಹೆ ನೀಡಿದರು ಎಂದು ನೆನೆದರು.
ರಾಷ್ಟ್ರ ರಾಜಕಾರಣದಲ್ಲಿ ಇನ್ನು ಹೆಚ್ಚಿನ ಹುದ್ದೆ ಅಲಂಕರಿಸುವ ಅವಕಾಶವೂ ಸಹ ಇತ್ತು, ಆದರೇ ದುರದೃಷ್ಟವಶಾತ್ ಆನಾರೋಗ್ಯದ ಹಿನೆÀ್ನಲೆಯಲ್ಲಿ ನಮ್ಮಿಂದ ದೂರವಾಗಿದ್ದಾರೆ. ಭಗವಂತ ಅವರ ಕುಟಂಬ ವರ್ಗದವರಿಗೆ ದುಃಖ ತಡೆದು ಕೊಳ್ಳುವ ಶಕ್ತಿ ಕೊಡಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಕೆಂಡಗಣ್ಣಪ್ಪ, ನಗರಾಧ್ಯಕ್ಷ ಬಾಲಚಂದ್ರು, ರಾಜ್ಯ ಎಸ್‍ಟಿ ಉಪಾಧ್ಯಕ್ಷ ಸಿ.ಚಿಕ್ಕರಂಗನಾಯ್ಕ, ಶಿರಮಳ್ಳಿ ಮಹದೇವ ಸ್ವಾಮಿ, ಜಿ.ಬಸವರಾಜು, ಪ್ರಜ್ವಲ್ ಶಶಿ, ಕಪಿಲೇಶ್, ತಾಲೂಕು ಕಾರ್ಯದರ್ಶಿ ವಳಗೆರೆ ಪುಟ್ಟಸ್ವಾಮಿ, ಕಾರ್ಯದರ್ಶಿಗಳಾದ ಕೃಷ್ಣರಾಜು, ಮಾದೇಶ, ಸಂಜಯ್ ಶರ್ಮಾ, ಮಂಗಳ, ಸುಧಾ ಮಹೇಶ್, ಮಹೇಶ್ ಕುಮಾರ್, ವಕೀಲರಾದ ಮಹೇಶ್ ಬಾಬು, ಹೊರಳ ವಾಡಿ ಮಹೇಶ್, ಶ್ರೀಕಂಠ, ಸಿದ್ದರಾಜು, ಮಹದೇವು, ಇದ್ದರು.

Translate »