ಬಿಜೆಪಿಗೆ ರಾಜಕೀಯ ಅಸ್ತಿತ್ವ ತಂದುಕೊಟ್ಟವರು ಅನಂತಕುಮಾರ್
ಮೈಸೂರು

ಬಿಜೆಪಿಗೆ ರಾಜಕೀಯ ಅಸ್ತಿತ್ವ ತಂದುಕೊಟ್ಟವರು ಅನಂತಕುಮಾರ್

November 13, 2018

ತಿ.ನರಸೀಪುರ:  ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ನಿಷ್ಠಾವಂತ ಕಾರ್ಯಕರ್ತರಾಗಿ ಜನಸಂಘದಲ್ಲಿ ದುಡಿದು ಸೇವೆಯ ಮೂಲಕವೇ ಬಿಜೆಪಿಗೆ ರಾಜಕೀಯ ಅಸ್ತಿತ್ವ ತಂದುಕೊಟ್ಟಂತಹ ಕೇಂದ್ರ ಸಚಿವ ಅನಂತಕುಮಾರ್ ಅವರು ಪಕ್ಷದ ಸಂಘಟನಾ ಚತುರರಾಗಿದ್ದರು ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಹೆಚ್.ಎಂ.ಪರಶಿವಮೂರ್ತಿ ಹೇಳಿದರು.

ಪಟ್ಟಣದ ಕಾಲೇಜು ರಸ್ತೆಯ ವಿವೇಕಾ ನಂದ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಸಚಿವ ಅನಂತಕುಮಾರ್ ಅವರ ಭಾವಪೂರ್ಣ ಶ್ರದ್ಧಾಂಜಲಿ ಸಭೆ ಯಲ್ಲಿ ಮಾತನಾಡಿದರು.

ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ವಿವಿಧ ಹಂತದಲ್ಲಿ ರಾಜಕೀಯ ಅಧಿಕಾರವನ್ನು ಪಡೆದುಕೊಂಡು ಸಂಸದ, ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರ ಅಗಲಿಕೆ ಪಕ್ಷ ಹಾಗೂ ರಾಜಕಾರಣಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕಂಬನಿ ಮಿಡಿದರು.

ಎಸ್ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಎ.ಎನ್. ರಂಗೂನಾಯಕ ಮಾತನಾಡಿದರು. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕರೋಹಟ್ಟಿ ಮಹದೇವಯ್ಯ, ಪುರಸಭೆ ಸದಸ್ಯ ಎಸ್.ಕೆ. ಕಿರಣ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಎಸ್.ಬಸವರಾಜು, ಡಾ.ಮಲ್ಲಿಕಾರ್ಜುನ ಸ್ವಾಮಿ, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಎಂ.ವೆಂಕಟರಮಣಶೆಟ್ಟಿ, ಉಪಾಧ್ಯಕ್ಷ ಕೆ.ನಂಜುಂಡಸ್ವಾಮಿ, ಸಾಮಾಜಿಕ ಜಾಲ ತಾಣದ ಸಂಚಾಲಕ ದಯಾನಂದ ಪಟೇಲ, ಮುಖಂಡರಾದ ಜಯರಾಮು, ಬಿ.ಎಂ.ನಿಜಗುಣರಾಧ್ಯ, ಚಿಕ್ಕಮಹದೇವು, ಮಂಟೇಲಿಂಗಯ್ಯ ಹಾಗೂ ಇನ್ನಿತರರಿದ್ದರು.

ಬನ್ನೂರಲ್ಲೂ ಶ್ರದ್ಧಾಂಜಲಿ: ತಾಲೂಕಿನ ಬನ್ನೂರು ಪಟ್ಟಣದಲ್ಲಿಯೂ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಕೇಂದ್ರ ಸಚಿವ ಅನಂತಕುಮಾರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಬಸ್ ನಿಲ್ದಾಣ ಹಾಗೂ ಸಂತೇಮಾಳ ವೃತ್ತಗಳಲ್ಲಿ ಅನಂತಕುಮಾರ್ ಭಾವಚಿತ್ರ ಗಳನ್ನು ಇಟ್ಟು ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ನಮಿಸಲಾಯಿತು. ಜಿಪಂ ಉಪಾಧ್ಯಕ್ಷ ಕೈಯ್ಯಂಬಳ್ಳಿ ಜಿ.ನಟರಾಜು, ಟಿಎಪಿಸಿ ಎಂಎಸ್ ಪಿ.ನಟರಾಜು, ಬಿಜೆಪಿ ಕ್ಷೇತ್ರಾಧ್ಯಕ್ಷ ಹೆಚ್.ಎಂ.ಪರಶಿವಮೂರ್ತಿ, ಉಪಾಧ್ಯಕ್ಷ ಪಿ.ಪ್ರಭಾಕರ, ರೈತ ಮೋರ್ಚಾ ಅಧ್ಯಕ್ಷ ಶಿವರಾಮು, ಟೌನ್ ಅಧ್ಯಕ್ಷ ಕಾಳೇಗೌಡ, ಸಾಮಾಜಿಕ ಜಾಲತಾಣ ಸಂಚಾಲಕ ದಯಾ ನಂದ ಪಟೇಲ್, ಮುಖಂಡರಾದ ಅಶೋಕ, ರವಿ, ದಾಸಯ್ಯ, ಬೇಕರಿ ರಮೇಶ, ಮಹೇಶ ನಾಯಕ ಹಾಗೂ ಇನ್ನಿತರರು ಹಾಜರಿದ್ದರು.

Translate »