ಅನಂತಕುಮಾರ್ ಅವರಿಗೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ
ಹಾಸನ

ಅನಂತಕುಮಾರ್ ಅವರಿಗೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ

November 13, 2018

ಬಿಜೆಪಿ ಪಕ್ಷದ ಗೊಂದಲ ನಿವಾರಣೆ ಮಾಡಿದ ಏಕೈಕ ವ್ಯಕ್ತಿ ಅನಂತಕುಮಾರ್
ಹಾಸನ: ರಾಜ್ಯದಲ್ಲಿ ಬಿಜೆಪಿ ಪಕ್ಷದ ಗೊಂದಲ ನಿವಾರಣೆ ಮಾಡಿದ ಏಕೈಕ ವ್ಯಕ್ತಿ ಹಾಗೂ ಕೇಂದ್ರ ಸಚಿವ ಅನಂತ ಕುಮಾರ್ ನಿಧನರಾದ ಹಿನ್ನೆಲೆಯಲ್ಲಿ ಸೋಮ ವಾರ ಬೆಳಿಗ್ಗೆ ಹಾಸನ ಜಿಲ್ಲಾ ಪಕ್ಷದ ಕಚೇರಿ ಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಮೊದಲು ಅನಂತಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ನಂತರ ಎರಡು ನಿಮಿಷ ಮೌನ ಆಚರಿಸಲಾಯಿತು.

ನಂತರ ಮಾತನಾಡಿದ ಬಿಜೆಪಿ ಮುಖಂಡ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ ಅವರು, ಸಾಮಾನ್ಯ ಕಾರ್ಯಕರ್ತರನ್ನು ಹೆಸರಿಡಿದು ಕರೆದು ಆತ್ಮೀಯವಾಗಿ ಮಾತನಾಡಿಸು ತ್ತಿದ್ದ ಅವರು, ಯಾವುದೇ ಸಮಸ್ಯೆ ಇರಲಿ ನಗುನಗುತಾ ಚರ್ಚೆ ಮಾಡಿ ಬಗೆಹರಿಸು ತ್ತಿದ್ದರು. ರಾಜಕೀಯ ತಂತ್ರಗಾರಿಕೆಗೆ ಹೆಚ್ಚು ಗಮನ ಕೊಡುತ್ತಿದ್ದರು. ನಾನೊಬ್ಬ ನಾಯಕ ಎಂದು ಹೇಳದೆ ಸಾಮಾನ್ಯ ಕಾರ್ಯ ಕರ್ತನಾಗಿ ಬಿಂಬಿಸಿಕೊಳ್ಳುತ್ತಿದ್ದರು ಪಕ್ಷದ ರಾಜಕೀಯದಲ್ಲಿ ಎಂದೂ ಜಾತಿಯನ್ನು ತರದೆ ಜಾತ್ಯಾತೀತವಾಗಿ ಬಿಜೆಪಿ ಕೆಲಸ ಮಾಡಿದ ಧೀಮಂತ ವ್ಯಕ್ತಿ ಎಂದು ಹೇಳಿ ದರು. ವಿದ್ಯಾರ್ಥಿ ದಿಸೆಯಲ್ಲಿಯೇ ನಾಯ ಕತ್ವದ ಗುಣವನ್ನು ಅಳವಡಿಸಿಕೊಂಡು ಎಬಿವಿಪಿ ಸಂಘಟನೆಯಲ್ಲಿ ತೊಡಗಿ ಕೊಂಡು ಬಂದವರು. ರಾಜ್ಯ ಯುವ ಮೋರ್ಚಾ ಅಧ್ಯಕ್ಷರಾಗಿ, ರಾಜ್ಯಾಧ್ಯಕ್ಷರಾಗಿ ಅಡ್ವಾಣಿಯವರ ರಥಯಾತ್ರೆಯ ಯಶಸ್ವಿ ಸೂತ್ರಧಾರಿ ಆಗಿ, ನಂತರ 1996 ರಿಂದ ನಿರಂತರವಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ ಆಗುತ್ತಾ, ದೆಹಲಿ ರಾಜಕಾರಣದ ಕರ್ನಾ ಟಕದ ರಾಯಭಾರಿಯಾಗಿ, ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಕೇಂದ್ರದಲ್ಲಿ ರಾಜ್ಯದ ಪರ ಧ್ವನಿಯಾಗಿ ನಿಂತು ಸಮಸ್ಯೆಗಳಿಗೆ ಪರಿಹಾರ ಸಿಗುವಂತೆ ಮಾಡಿದವರು ಅನಂತ ಕುಮಾರ್‍ರವರು. ಯಾವುದೇ ಖಾತೆ ಇರಲಿ ಅದರಲ್ಲಿ ತಮ್ಮ ವಿಶಿಷ್ಟವಾದ ಆಲೋ ಚನೆಗಳ ಮುಖಾಂತರ ಸಾರ್ವ ಜನಿಕರಿಗೆ ಅನೂಕೂಲವಾಗುವಂತ ಕಾರ್ಯ ಕ್ರಮಗಳನ್ನು ಜಾರಿಗೆ ತಂದವರು ಎಂದರು.

ದೇಶದ ಅನೇಕ ರಾಜ್ಯಗಳಲ್ಲಿ ಪಕ್ಷದ ಉಸ್ತುವಾರಿಯನ್ನು ವಹಿಸಿಕೊಂಡು ಪಕ್ಷ ಅಧಿಕಾರಕ್ಕೆ ಏರುವಂತೆ ಮಾಡಿದವರು, ರಾಜ್ಯ ಬಿಜೆಪಿ ಒಂದು ಪ್ರಬಲ ಶಕ್ತಿಯಾಗಿ ಹೊರಹೊಮ್ಮಲು ತಮ್ಮದೇ ಆದ ಕೊಡುಗೆ ಗಳನ್ನು ನೀಡಿದ ಅವರು, ಇತ್ತೀಚಿನ ದಿನ ಗಳಲ್ಲಿ ಮೋದಿ ಸಂಪುಟದಲ್ಲಿ ರಾಸಾ ಯನಿಕ, ರಸಗೊಬ್ಬರ, ಸಂಸದೀಯ ವ್ಯವ ಹಾರಗಳ ಸಚಿವರಾಗಿ ಅವರ ಕೊಡುಗೆ ಗಳು ಶಾಶ್ವತವಾಗಿ ಉಳಿಯುವಂತ ಹುದು. ಗೊಬ್ಬರ ವಿತರಣೆ ನಿರ್ವಹಣೆ ಯಲ್ಲಿ ತಂದ ಕ್ರಾಂತಿಕಾರಕ ಕ್ರಮಗಳು, ಜನೌಷಧಿ ಸೂತ್ರಧಾರರು, ಬಡವರಿಗೆ ಗಗನ ಕುಸುಮವಾಗಿದ್ದ ಹೃದಯ ಶಸ್ತ್ರ ಚಿಕಿತ್ಸೆಯಲ್ಲಿ ಬಳಸುವ ಸ್ಟಂಟ್‍ಗಳ ಬೆಲೆ ಸಾಮಾನ್ಯರಿಗೆ ಎಟುಕುವಂತೆ ಮಾಡಿ ದವರು, ಅವರ ಸಾಧನೆ ಬಗ್ಗೆ ಹೇಳುತ್ತಾ ಹೋದರೆ ಅದಕ್ಕೆ ಕೊನೆ ಎಂಬುದೇ ಇಲ್ಲ, ಸರಳವಾಗಿ ಹೇಳಬಹುದಾದರೆ ದೆಹಲಿ ರಾಜ ಕಾರಣದಲ್ಲಿ ಕರ್ನಾಟಕ ಅಂದರೆ ಅನಂತ ಕುಮಾರ್ ಆ ಮಟ್ಟದಲ್ಲಿ ಬೆಳೆದಿದ್ದವರು. ರಾಜಕಾರಣಿಗೆ ಹಾಸ್ಯಪ್ರಜ್ಞೆ ಬಹಳ ಮುಖ್ಯ ಅದನ್ನು ರೂಢಿಸಿಕೊಂಡವರು. ಸಾವು ಸಹಜ, ಆ ಸಾವಿನ ಸಂದರ್ಭದಲ್ಲಿ ತಾನೂ ಸಮಾಜಕ್ಕೆ ಕೊಟ್ಟ ಕೊಡುಗೆಗಳು ಮುಖ್ಯ ವಾಗುತ್ತದೆಯೇ ಹೊರತು ಬೇರೆ ಯಾವುದು ಮುಖ್ಯವಾಗುವುದಿಲ್ಲ.

ರಾಷ್ಟ್ರ ರಾಜಕಾರಣದಲ್ಲಿ ಕರ್ನಾಟಕ ಅಂದರೆ ಅನಂತಕುಮಾರ್ ಆ ರೀತಿ ಬೆಳೆದ ವರು, ಇಂದು ನಾಡಿಗೆ ಶುಭಕೋರಿ ತಮ್ಮ ಜೀವನದ ಅಂತಿಮ ಪಯಣದತ್ತ ನಡೆದಿ ದ್ದಾರೆ ಎಂದು ಅವರ ಜೀವನದ ಸಾಧನೆ ಯನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ನಗರಾ ಧ್ಯಕ್ಷ ಶೋಭನ್ ಬಾಬು, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹೆಚ್.ಎನ್.ನಾಗೇಶ್, ಮುಖಂ ಡರು, ಕಟ್ಟಾಯಶಿವಕುಮಾರ್, ಅಗಿಲೆ ಯೋಗಿಶ್, ಶ್ರೀನಿವಾಸ್‍ಗೌಡ, ಪೂಜಾ, ಸುಶೀಲ ಅಣ್ಣಪ್ಪ ಇತರರಿದ್ದರು.

Translate »